Advertisement

ಮಂಗಳೂರು-ಬೆಂಗಳೂರು ನಡುವೆ ಹೊಸ ರಾತ್ರಿ ರೈಲು

04:15 AM Jan 30, 2019 | |

ಮಂಗಳೂರು: ಐಟಿ ನಗರಿ ಬೆಂಗಳೂರಿನಿಂದ ಕರಾವಳಿಯ ಆರ್ಥಿಕ ಹೆಬ್ಟಾಗಿಲು ಮಂಗಳೂರಿಗೆ ಸಂಪರ್ಕ ಕಲ್ಪಿಸುವುದಕ್ಕಾಗಿ ಮತ್ತೂಂದು ಹೊಸ ರಾತ್ರಿ ರೈಲು ಸಂಚಾರ ಆರಂಭಿಸಲು ನೈಋತ್ಯ ರೈಲ್ವೇ ತೀರ್ಮಾನಿಸಿದೆ. ಕರಾವಳಿ ಭಾಗಕ್ಕೆ ರೈಲ್ವೇಯ ಹೊಸ ವರ್ಷದ ಕೊಡುಗೆ ಇದು.

Advertisement

ಕೆಲವೇ ದಿನಗಳಲ್ಲಿ ಹೊಸ ರೈಲು ಸಂಚಾರ ಆರಂಭಗೊಳ್ಳಲಿದ್ದು, ಈಗ ಪೂರಕ ಸಿದ್ಧತೆ ಹಾಗೂ ತಾಂತ್ರಿಕ ಅನುಮತಿ ಪ್ರಕ್ರಿಯೆ ನಡೆಯುತ್ತಿದೆ. ಸದ್ಯ ವಾರದಲ್ಲಿ 3 ದಿನ ಮಾತ್ರ ಸಂಚರಿಸುವ ಇದು ಮಾರ್ಚ್‌ ಅನಂತರ ಪ್ರತೀ ರಾತ್ರಿ ಸಂಚರಿಸುವ ನಿರೀಕ್ಷೆಯಿದೆ. ರೈಲಿನ ವೇಳಾಪಟ್ಟಿಯನ್ನು ನೈಋತ್ಯ ರೈಲ್ವೇ ಈಗಾಗಲೇ ಅಂತಿಮಗೊಳಿಸಿ, ರೈಲ್ವೇ ಮಂಡಳಿಗೆ ಜ.24ರಂದು ಕಳುಹಿಸಿದೆ. ಒಪ್ಪಿಗೆ ಲಭಿಸಿದ ತತ್‌ಕ್ಷಣ ಸಂಚಾರ ಆರಂಭಿಸುವ ಸಾಧ್ಯತೆಯಿದೆ.

ಪ್ರಸ್ತಾವಿತ ಸಮಯದ ಪ್ರಕಾರ, ಯಶವಂತಪುರದಿಂದ ಅದು ಪ್ರತೀ ಶುಕ್ರವಾರ, ರವಿವಾರ ಹಾಗೂ
ಮಂಗಳವಾರ ಸಂಜೆ 4.30ಕ್ಕೆ ಹೊರಡಲಿದೆ. ಶನಿವಾರ, ಸೋಮವಾರ ಹಾಗೂ ಬುಧವಾರಗಳಂದು ಬೆಳಗ್ಗೆ 4ಕ್ಕೆ ಮಂಗಳೂರು ಸೆಂಟ್ರಲ್‌ ನಿಲ್ದಾಣ ತಲುಪಲಿದೆ. ಶನಿವಾರ, ಸೋಮವಾರ ಹಾಗೂ ಬುಧವಾರ ಮಂಗಳೂರು ಸೆಂಟ್ರಲ್‌ನಿಂದ ರಾತ್ರಿ 7 ಗಂಟೆಗೆ ಹೊರಟು ಮರುದಿನಗಳಂದು ಮುಂಜಾನೆ 4.30ಕ್ಕೆ ಯಶವಂತಪುರ ನಿಲ್ದಾಣ ತಲುಪಲಿದೆ.
 
364 ಕಿ.ಮೀ. ಪ್ರಯಾಣಕ್ಕೆ ಪ್ರಸ್ತಾವಿತ ಸಮಯದ ಪ್ರಕಾರ ಬೆಂಗಳೂರಿನಿಂದ ಮಂಗಳೂರಿಗೆ 11.30 ತಾಸು ಹಾಗೂ ಮಂಗಳೂರಿನಿಂದ ಬೆಂಗಳೂರಿಗೆ 9.30 ತಾಸು ತಗಲಲಿದೆ. ಘಾಟಿ ಪ್ರದೇಶದಲ್ಲಿ ರೈಲ್ವೇ ಸುರಕ್ಷತೆ ಹಾಗೂ ಇತರ ರೈಲುಗಳ ಕ್ರಾಸಿಂಗ್‌ ಕಾರಣ ಬೆಂಗಳೂರಿನಿಂದ ಹೊರಟ ರೈಲು ಎರಡು ತಾಸು ತಡವಾಗಿ ಮಂಗಳೂರಿಗೆ ತಲುಪುವಂತಾಗುತ್ತದೆ.

ಪ್ರಸ್ತುತ ಎರಡು ರೈಲು ಓಡಾಟ
ಸದ್ಯ ಮಂಗಳೂರು ಸೆಂಟ್ರಲ್‌ನಿಂದ ಪ್ರತೀ ದಿನ ಯಶವಂತಪುರ ಎಕ್ಸ್‌ಪ್ರೆಸ್‌ ರಾತ್ರಿ 8.55ಕ್ಕೆ ಹೊರಟು ಮರುದಿನ ಬೆಳಗ್ಗೆ ಸುಮಾರು 7.30ಕ್ಕೆ ಬೆಂಗಳೂರು ತಲುಪುತ್ತದೆ. ಇದು 3 ದಿನ ಮೈಸೂರು ಹಾಗೂ 4 ದಿನ ಶ್ರವಣಬೆಳಗೊಳ ಮಾರ್ಗವಾಗಿ ಸಂಚರಿಸುತ್ತಿದೆ. ಮಂಗಳೂರು ಜಂಕ್ಷನ್‌ನಿಂದ ಪ್ರತೀದಿನ (ರವಿವಾರ ವಿನಾ) ಬೆಳಗ್ಗೆ 11.30ಕ್ಕೆ ಹೊರ
ಡುವ ಗೊಮ್ಮಟೇಶ್ವರ ಎಕ್ಸ್‌ಪ್ರೆಸ್‌ ರಾತ್ರಿ 8.30ರ ಸುಮಾರಿಗೆ ಬೆಂಗಳೂರು ತಲುಪುತ್ತದೆ. ಇದು ಶ್ರವಣಬೆಳಗೊಳ ಮಾರ್ಗವಾಗಿ ಸಂಚರಿಸುತ್ತಿದೆ. 

ತಿರುಪತಿಗೆ ಹೊಸ ರೈಲು!
ತಿರುಪತಿಯಿಂದ ಹಾಸನದ ವರೆಗೆ ಸಂಚರಿಸುತ್ತಿರುವ ನಿತ್ಯ ರೈಲನ್ನು ಮಂಗಳೂರು ಸೆಂಟ್ರಲ್‌ ವರೆಗೆ ವಿಸ್ತರಿಸಿ, ಇಲ್ಲಿಂದ ಪ್ರತೀದಿನ ಸಂಚರಿಸಲು ಅವಕಾಶ ಕಲ್ಪಿಸಬೇಕು ಎಂಬ ಸಂಸದ ನಳಿನ್‌ ಅವರ ಬೇಡಿಕೆಗೂ ಇಲಾಖೆ ಒಪ್ಪಿಗೆ ಸೂಚಿಸಿದೆ. ಈ ರೈಲು ಪ್ರತೀದಿನ ಮಂಗಳೂರಿನಿಂದ ಪ್ರಯಾಣಿಸಿದರೆ ತಿರುಪತಿಗೆ ಪ್ರಯಾಣಿಸುವವರಿಗೆ ಉಪಯೋಗವಾಗಲಿದೆ. ಶೀಘ್ರದಲ್ಲಿ ಈ ಕುರಿತ ಅಂತಿಮ ತೀರ್ಮಾನವಾಗುವ ನಿರೀಕ್ಷೆಯಿದೆ.

Advertisement

ಪ್ರಸ್ತುತ ಮಂಗಳೂರು ಸೆಂಟ್ರಲ್‌ನಿಂದ ಬುಧವಾರ, ಶನಿವಾರ ರಾತ್ರಿ 8.15ಕ್ಕೆ ಕಾಚಿಗುಡ ಎಕ್ಸ್‌ಪ್ರೆಸ್‌ ಹೊರಟು ಮರುದಿನ ಮಧ್ಯಾಹ್ನ 1 ಗಂಟೆಗೆ ತಿರುಪತಿ ಸಮೀಪದ ರೇಣಿಗುಂಟ ತಲುಪುತ್ತದೆ. ಮಂಗಳೂರು ಸೆಂಟ್ರಲ್‌ನಿಂದ ಕೊಲ್ಕತ್ತದ ಸಾಂತ್ರಗಚ್ಚಿಗೆ ಶನಿವಾರ ರಾತ್ರಿ 11 ಗಂಟೆಗೆ ಹೊರಡುವ ವಿವೇಕ ಎಕ್ಸ್‌ಪ್ರೆಸ್‌ ಮರುದಿನ ಮಧ್ಯಾಹ್ನ 1.30ಕ್ಕೆ ತಿರುಪತಿ ತಲುಪುತ್ತದೆ. ಸೆಂಟ್ರಲ್‌ನಿಂದ ಪ್ರತೀ ಸೋಮವಾರ ಸಂಜೆ 5ಗಂಟೆಗೆ ಜಮ್ಮುವಿಗೆ ಹೊರಡುವ ನವಯುಗ ಎಕ್ಸ್‌ಪ್ರೆಸ್‌ ಮರುದಿನ ಬೆಳಗ್ಗೆ 9.30ಕ್ಕೆ ತಿರುಪತಿ ತಲುಪುತ್ತದೆ. 

 ಸಮಯ ಹೊಂದಿಕೆ ಆಗಬೇಕಿದೆ
ಪಶ್ಚಿಮ ಕರಾವಳಿ ರೈಲ್ವೇ ಯಾತ್ರಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ಹನುಮಂತ ಕಾಮತ್‌ “ಉದಯವಾಣಿ’ ಜತೆಗೆ ಮಾತನಾಡಿ, ಬೆಂಗಳೂರಿನಿಂದ ಹೊಸ ರೈಲು ಸಂಜೆ ಹೊರಡುವುದರಿಂದ ಕೆಲವರಿಗೆ ಸಮಸ್ಯೆ ಆಗಬಹುದು. ಆದರೆ ಕರಾವಳಿಗೆ ಹೊಸ ರೈಲು ಸಿಗುತ್ತಿದೆ ಎಂಬ ಸಂತೋಷದಿಂದ ಈ ಸೇವೆಯನ್ನು ಒಪ್ಪಿಕೊಳ್ಳಬೇಕು. ರೈಲು ಆರಂಭವಾದ ಕೆಲವು ದಿನಗಳ ಅನಂತರ ಸಮಯ ಬದಲಾವಣೆಗೆ ಅವಕಾಶವಿದೆ. ಈಗಲೇ ವಿರೋಧ ಸೂಚಿಸಿದರೆ ಬರುವ ರೈಲು ಕೂಡ ಸಿಗದು ಎಂದಿದ್ದಾರೆ.

ಹಗಲು ಮತ್ತೂಂದು ಇಂಟರ್‌ಸಿಟಿ ರೈಲು
ಈ ನಡುವೆ ಹಗಲು ಮತ್ತೂಂದು ಇಂಟರ್‌ಸಿಟಿ ರೈಲು ಓಡಾಟ ನಡೆಸಲು ಕೂಡ ರೈಲ್ವೇ ಇಲಾಖೆ ಮುಂದಾಗಿದೆ. ಮಂಗಳೂರಿನಿಂದ ಮಡ್‌ಗಾಂವ್‌ ಸಹಿತ ವಿವಿಧ ಭಾಗಗಳಿಗೆ ಈಗಾಗಲೇ ಇರುವ ಮಾದರಿಯಲ್ಲಿ ಮಂಗಳೂರು-ಬೆಂಗಳೂರು ಮಧ್ಯೆ ಈ ರೈಲು ಆರಂಭಿಸಲು ಉದ್ದೇಶಿಸಲಾಗಿದೆ. ಇದು “ಚಯರ್‌ ಕಾರ್‌’ ಮಾದರಿಯಲ್ಲಿರಲಿದೆ. 

ಹೊಸ ರೈಲು; ಇಲಾಖೆ ಒಪ್ಪಿಗೆ
ಮಂಗಳೂರು-ಬೆಂಗಳೂರು ಮಧ್ಯೆ ಹೊಸ ರಾತ್ರಿ ರೈಲು ಓಡಾಟಕ್ಕೆ ಇಲಾಖೆ ಒಪ್ಪಿದೆ. ವಾರದೊಳಗೆ ಸಮಯ ಅಂತಿಮಗೊಳಿಸುವ ನಿರೀಕ್ಷೆ ಯಿದೆ. ಕೆಲವೇ ದಿನದಲ್ಲಿ ಹೊಸ ಎಕ್ಸ್‌ಪ್ರೆಸ್‌ ವಾರದಲ್ಲಿ ಮೂರು ದಿನ ಪ್ರಾಯೋಗಿಕ  ಸಂಚಾರ ಆರಂಭಿಸಲಿದೆ. ಮಾರ್ಚ್‌ ಅನಂತರ ಪ್ರತೀ ದಿನ ಓಡಾಟ ನಡೆಸಲಿದೆ. 
ನಳಿನ್‌ ಕುಮಾರ್‌ ಕಟೀಲು, ಸಂಸದರು, ದ.ಕ.

Advertisement

Udayavani is now on Telegram. Click here to join our channel and stay updated with the latest news.

Next