Advertisement

ಪದ್ಮ ಪ್ರಶಸ್ತಿ ಮಾದರಿಯಲ್ಲಿ  ಹೊಸ ರಾಷ್ಟ್ರೀಯ ಪ್ರಶಸ್ತಿ

06:15 AM Dec 24, 2018 | Team Udayavani |

ಹೊಸದಿಲ್ಲಿ: ರಾಷ್ಟ್ರೀಯ ಏಕತೆಗಾಗಿ ದುಡಿದವರನ್ನು ಗೌರವಿಸಲೋಸುಗ ಹೊಸ ಪ್ರಶಸ್ತಿ ಸ್ಥಾಪನೆಯ ಘೋಷಣೆಯನ್ನು ಪ್ರಧಾನಿ ನರೇಂದ್ರ ಮೋದಿ ಮಾಡಿದ್ದಾರೆ. 

Advertisement

ಪದ್ಮ ಪ್ರಶಸ್ತಿಗಳ ಮಾದರಿಯಲ್ಲಿಯೇ ಹೊಸ ಪ್ರಶಸ್ತಿ ಇರಲಿದೆ. ರಾಷ್ಟ್ರೀಯ ಏಕತೆಗೆ ಯಾವುದೇ ರೀತಿಯಲ್ಲಿ ಕೆಲಸ ಮಾಡಿದ, ಶ್ರಮಿಸಿದ ಭಾರತೀಯರಿಗೆ  ಈ ಗೌರವ ನೀಡಲಾಗುತ್ತದೆ. ದೇಶದ ಏಕತೆಗಾಗಿ ದುಡಿದ ಮೊದಲ ಗೃಹ ಸಚಿವ ಸರ್ದಾರ್‌ ವಲ್ಲಭಭಾಯಿ ಪಟೇಲ್‌ರ ಸ್ಫೂರ್ತಿಯಿಂದ ಈ ಪ್ರಶಸ್ತಿ ಸ್ಥಾಪಿಸಲಾಗುತ್ತದೆ ಎಂದು ಪ್ರಧಾನಿ ಹೇಳಿದ್ದಾರೆ. 

ನರ್ಮದಾ ಜಿಲ್ಲೆಯ ಕೇವಡಿಯಾದಲ್ಲಿ ಆಯೋಜಿಸಲಾಗಿದ್ದ ರಾಜ್ಯಗಳ ಪೊಲೀಸ್‌ ಮಹಾನಿರ್ದೇಶಕರ ಸಮ್ಮೇಳನದ ಸಮಾರೋಪದಲ್ಲಿ ಅವರು ಈ ಘೋಷಣೆ ಮಾಡಿದ್ದಾರೆ. ರಾಷ್ಟ್ರೀಯ ಪೊಲೀಸ್‌ ಸ್ಮಾರಕದ ಬಗ್ಗೆ ವಿಶೇಷ ಅಂಚೆ ಚೀಟಿಯನ್ನು ಪ್ರಧಾನಿ ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಿದ್ದಾರೆ. ಇದರೊಂದಿಗೆ ಪ್ರತಿ ವರ್ಷದ ಅ.31ರಂದು ಏಕತಾ ಪ್ರತಿಮೆ ಬಳಿ ಮೂರು ಅಥವಾ ನಾಲ್ಕು ರಾಜ್ಯಗಳ ಪೊಲೀಸ್‌ ಪಡೆ ಜತೆ ಸೇರಿ ಪರೇಡ್‌ ನಡೆಸಬೇಕು. ಪಟೇಲ್‌ ಜನ್ಮದಿನವನ್ನು “ರಾಷ್ಟ್ರೀಯ ಏಕತಾ ದಿನ’ ಎಂದು ಆಚರಿಸಬೇಕು ಎಂದು ಸಲಹೆ ಮಾಡಿದ್ದಾರೆ ಪ್ರಧಾನಿ.

Advertisement

Udayavani is now on Telegram. Click here to join our channel and stay updated with the latest news.

Next