ಜೇವರ್ಗಿ: ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ಗ್ರಾಮ ಪಂಚಾಯಿತಿ ಚುನಾವಣೆಮುಗಿಯುತ್ತಿದ್ದಂತೆ, ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ಬೆಂಬಲಿತ ಸದಸ್ಯರುಹಾಗೂ ಯಾರ ಬೆಂಬಲವೂ ಇಲ್ಲದೇ ಆರಿಸಿ ಬಂದವರಿಗೂ ಡಿಮ್ಯಾಂಡ್ ಹೆಚ್ಚಿದೆ.
ಗ್ರಾಮ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷಸ್ಥಾನಗಳಿಗೆ ಚುನಾವಣೆ ಅಧಿಕಾರಿಗಳಾದಜಿಲ್ಲಾಧಿ ಕಾರಿಗಳು ಮೀಸಲು ನಿಗದಿಪಡಿಸಲುಇನ್ನು ಕಾಲಾವಕಾಶ ಹಿಡಿಯುತ್ತದೆ.ಆದರೂ ಪಂಚಾಯಿತಿಯಲ್ಲಿ ತಮ್ಮ ಪಕ್ಷದಬೆಂಬಲಿತರೇ ಗದ್ದುಗೆ ಹಿಡಿಯುವಂತೆಮಾಡಲು ರಾಜಕೀಯ ನಾಯಕರು ತಂತ್ರಗಾರಿಕೆ ಶುರು ಮಾಡಿದ್ದಾರೆ.ಚುನಾವಣೆಯಲ್ಲಿ ವಿವಿಧ ಪಕ್ಷಗಳಬೆಂಬಲದಿಂದ ಗೆಲುವು ಸಾಧಿ ಸಿರುವಸದಸ್ಯರು ಯಾವ್ಯಾವ ವರ್ಗಕ್ಕೆ ಸೇರಿದವರುಎನ್ನುವ ಪಟ್ಟಿಯನ್ನು ರಾಜಕೀಯಪಕ್ಷಗಳು ಸಿದ್ಧಪಡಿಸಿಕೊಂಡಿವೆ. ಯಾವ ವರ್ಗದ ಸದಸ್ಯರು ಪಕ್ಷಗಳೊಂದಿಗೆಗುರುತಿಸಿಕೊಂಡಿಲ್ಲವೋ ಅಂತಹವರನ್ನುಸೆಳೆಯುವ ಪ್ರಯತ್ನ ನಡೆಯುತ್ತಿದೆ.
ಚುನಾವಣೆಯಲ್ಲಿ ಇಂತಹದೇ ಪಕ್ಷದ ಬೆಂಬಲಿಗರು ಎಂದು ಹೇಳಿಕೊಂಡುಗೆದ್ದವರ ಮೇಲೂ ರಾಜಕೀಯ ನಾಯಕರಿಗೆ ವಿಶ್ವಾಸವಿಲ್ಲ. ಹಣ, ಅಧಿಕಾರದಂತಹ ಆಮಿಷಕ್ಕೆ ಒಳಗಾಗಿ ಎಲ್ಲಿ ಕೈ ಕೊಡುತ್ತಾರೋ ಎನ್ನುವ ಆತಂಕವೂ ಕಾಡುತ್ತಿದೆ. ಈಗಾಗಲೇ ತಾಲೂಕಿನ ಕೆಲವು ಕಡೆ ಒಂದು ಪಕ್ಷದ ಬೆಂಬಲ ಪಡೆದು ಜಯ ಸಾಧಿಸಿ ಮತ್ತೂಂದು ಪಕ್ಷದ ಜೊತೆ ಗುರುತಿಸಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ. ಇದರಿಂದ ರಾಜಕೀಯ ಪಕ್ಷಗಳ ಮುಖಂಡರು ತಮ್ಮ ಪಕ್ಷದ ಬೆಂಬಲಿತ ಸದಸ್ಯರ ಮೇಲೆ ಹದ್ದಿನ ಕಣ್ಣು ಇಡುತ್ತಿದ್ದಾರೆ.
ಪಂಚಾಯಿತಿ ವರಿಷ್ಠ ಸ್ಥಾನಗಳಿಗೆ ಯಾವುದೇ ಮೀಸಲಾತಿ ನಿಗದಿಯಾದರೂಆ ವರ್ಗದ ಸದಸ್ಯರು ಪಕ್ಷದೊಂದಿಗೆಇರುವಂತೆ ನೋಡಿಕೊಳ್ಳಲಾಗುತ್ತಿದೆ.ಇದಕ್ಕಾಗಿ ಅವರ ಇಷ್ಟಾರ್ಥ ಈಡೇರಿಸುವಕಾರ್ಯವೂ ನಡೆದಿದೆ. ಒಟ್ಟಿನಲ್ಲಿ ಸದಸ್ಯರಿಗೆ ಫುಲ್ ಡಿಮ್ಯಾಂಡ್ ಬಂದಿದೆ.ತಾಲೂಕಿನ 23 ಗ್ರಾಪಂಗಳಲ್ಲಿಬಿಜೆಪಿ, ಕಾಂಗ್ರೆಸ್ ಬೆಂಬಲಿಗರು ಪಾರುಪತ್ಯ ಮೆರೆದಿದ್ದಾರೆ. ಮೂರ್‍ನಾಲ್ಕು ಪಂಚಾಯಿತಿಗಳಲ್ಲಿ ಜೆಡಿಎಸ್ ಬೆಂಬಲಿಗರುಚುನಾಯಿತರಾಗಿದ್ದಾರೆ. ಕೆಲ ಮೂಲಗಳಪ್ರಕಾರ ಬಿಜೆಪಿ ಹಾಗೂ ಕಾಂಗ್ರೆಸ್ ಅಧಿಕಾರಹಿಡಿಯಲು ಸಮಬಲ ಸಾ ಧಿಸಬಹುದು ಎಂದು ಅಂದಾಜಿಸಲಾಗಿದೆ.
ಆಡಳಿತಾರೂಢ ಬಿಜೆಪಿ ಮೀಸಲಾತಿ ರಾಜಕೀಯ ಮಾಡಿದಲ್ಲಿ ಕಾಂಗ್ರೆಸ್ ಹಾಗೂಜೆಡಿಎಸ್ ಬೆಂಬಲಿಗರು ಸುಲಭವಾಗಿ ಸಿಗುವ ಅಧಿಕಾರ ಪಡೆಯಲು ಸಾಕಷ್ಟುಕಸರತ್ತು ನಡೆಸಬೇಕಾಗುತ್ತದೆ. ಮೀಸಲುನಿಗದಿ ನಂತರವಷ್ಟೇ ಗ್ರಾಮ ಪಂಚಾಯಿತಿಗಳ ರಾಜಕೀಯ ಮೇಲಾಟ ನಡೆಯಲಿದೆ.
–ವಿಜಯಕುಮಾರ ಎಸ್.ಕಲ್ಲಾ