Advertisement

Guaranteeಯಿಂದ 5 ಕೋಟಿ ಬಡವರಿಗೆ ಹೊಸ ಬದುಕು

01:15 AM Feb 13, 2024 | Team Udayavani |

ಬೆಂಗಳೂರು: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರಕಾರ ಜಾರಿ ಮಾಡಿರುವ ಗ್ಯಾರಂಟಿ ಯೋಜನೆ ಗಳಿಂದ ರಾಜ್ಯದ 5 ಕೋಟಿ ಮಂದಿಗೆ ಪ್ರಯೋ ಜನ ವಾಗಿದೆ. ಬಡವರ್ಗದಲ್ಲಿದ್ದ ಅವರು ಮಧ್ಯಮ ವರ್ಗಕ್ಕೆ ತಲುಪಿದ್ದು, ಇದೊಂದು ಜಾಗತಿಕ ದಾಖಲೆ ಯಾಗಿದೆ ಎಂದು ರಾಜ್ಯಪಾಲ ಥಾವರ್‌ಚಂದ್‌ ಗೆಹೊÉàಟ್‌ ಹೇಳಿದ್ದಾರೆ.

Advertisement

ಸೋಮವಾರ ಆರಂಭವಾದ ವಿಧಾನಸಭೆಯ ಜಂಟಿ ಅಧಿವೇಶವನ್ನು ಉದ್ದೇಶಿಸಿ ಅವರು ಮಾತನಾಡಿದರು. ಗ್ಯಾರಂಟಿ ಯೋಜನೆಗಳು ದೇಶಕ್ಕೆ ಮಾದರಿಯಾಗಿದ್ದು, ಉಳಿದ ರಾಜ್ಯಗಳು ಇದನ್ನು ಅಳವಡಿಸಿಕೊಳ್ಳಲು ಪೈಪೋಟಿ ನಡೆಸುತ್ತಿವೆ ಎಂದು ಭಾಷಣದಲ್ಲಿ ಬಣ್ಣಿಸಿದ್ದಾರೆ.

31 ಪುಟಗಳ ಭಾಷಣದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಜಾರಿಗೊಳಿಸಿದ ಯೋಜನೆಗಳ ಬಣ್ಣನೆ ಹಾಗೂ ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಗಿದೆ. ರಾಜ್ಯಪಾಲರು ವಾಚಿಸಿದ ಭಾಷಣ ಬಹುತೇಕ ಭಾಗ ಗ್ಯಾರಂಟಿ ಕಾರ್ಯಕ್ರಮಗಳ ಪ್ರಶಂಸೆಗೆ ಮೀಸಲಾಗಿತ್ತು.

ಆಡುವ ಮಾತಿಗೆ ಬೆಲೆ ನೀಡದೆ, ಭರವಸೆಗಳನ್ನು ಅವಹೇಳನ ಮಾಡುವ ರಾಜಕೀಯ ವಾತಾವರಣ ಎಲ್ಲೆಡೆ ತುಂಬಿದೆ. ಇಂಥ ಸಂದರ್ಭದಲ್ಲಿ ರಾಜ್ಯ ಸರಕಾರ ಹೊಸ ಸಂಸ್ಕೃತಿಗೆ ನಾಂದಿ ಹಾಡಿದೆ. ರಾಜ್ಯದ 7 ಕೋಟಿ ಜನರ ಬದುಕಿನಲ್ಲಿ ಬದಲಾವಣೆಯ ಗಾಳಿ ಬೀಸುವಂತೆ ಮಾಡಿದೆ. ಅಭಿವೃದ್ಧಿ ಎಂದರೆ ಕೇವಲ ಆರ್ಥಿಕ ಅಭಿವೃದ್ಧಿಯಲ್ಲ, ಸುಸ್ಥಿರ ಅಭಿವೃದ್ಧಿ ಮತ್ತು ಸಾಮಾಜಿಕ ಸಾಮರಸ್ಯಗಳೂ ಇದರಲ್ಲಿ ಸೇರಿವೆ ಎಂದು ರಾಜ್ಯಪಾಲರು ಹೇಳಿದ್ದಾರೆ.
ಆರ್ಥಿಕ ಅಸಮಾನತೆಯಿಂದ ಬಸವಳಿದ ಜನರಿಗೆ ಪಂಚ ಗ್ಯಾರಂಟಿಗಳು ಸಾಂತ್ವನ ವನ್ನು ಒದಗಿಸಿವೆ. ಆರ್ಥಿಕ ಅಶಕ್ತರಿಗೆ ಇಂಥ ಯೋಜನೆ ಎಷ್ಟು ಅಗತ್ಯವಿತ್ತೆಂಬುದಕ್ಕೆ ಹರಿದು ಬಂದ ಅರ್ಜಿಗಳೇ ಸಾಕ್ಷಿ.

ಅಶಕ್ತರಾಗಿ ಉಳಿದಿರುವ ಜನತೆಯ ಬದುಕಿಗೆ ಈ ಗ್ಯಾರಂಟಿಗಳು ಮಾತ್ರ ಸಾಕಾಗುವುದಿಲ್ಲ ಎಂಬ ಅರಿವು ಸರಕಾರಕ್ಕೆ ಇದೆ ಎಂದು ರಾಜ್ಯಪಾಲರು ಭಾಷಣದಲ್ಲಿ ತಿಳಿಸಿದ್ದಾರೆ.

Advertisement

ಆಕ್ರಮಣ ಸಹಿಸುವುದಿಲ್ಲ
ಕನ್ನಡ ಭಾಷೆಯ ಉಳಿವು ಮತ್ತು ಬೆಳವಣಿಗೆ ನಮ್ಮ ಜೀವನ್ಮರಣದ ಸಂಗತಿ. ನಮ್ಮ ಭಾಷೆ ಮತ್ತು ಸಂಸ್ಕೃತಿ ಮೇಲೆ ಯಾವುದೇ ಆಕ್ರಮ ಣವನ್ನು ಸಹಿಸಿಕೊಳ್ಳುವುದಿಲ್ಲ ಎಂದು ರಾಜ್ಯಪಾಲರು ಸರಕಾರದ ನಿಲು ವನ್ನು ಪ್ರಕಟಿಸಿದರು. ರಾಜ್ಯದ ಸಂಸ್ಕೃತಿ ಯನ್ನು ಉಳಿಸಿ ಬೆಳೆಸಲು ನನ್ನ ಸರಕಾರ ಬದ್ಧವಾಗಿದೆ. ನಾಮಫ‌ಲಕ ಗಳಲ್ಲಿ ಶೇ. 60ರಷ್ಟು ಕನ್ನಡದಲ್ಲಿಯೇ ಇರುವಂತೆ ಮಾಡಲು “ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ- 2022′ ಜಾರಿಗೆ ತರಲಾಗಿದೆ ಎಂದರು.

ಮನುವಾದದ ವಿರುದ್ಧ ಚಳವಳಿ
ಮನುವಾದದ ವಿರುದ್ಧ ಚಳವಳಿ ರೂಪಿಸಿ ಸಮಾನತೆಯ ಕನಸನ್ನು ಬಿತ್ತಿದ ಬಸವಣ್ಣ, ಅಲ್ಲಮಪ್ರಭು ಮೊದಲಾದವರನ್ನು ಮತ್ತೆ ಮತ್ತೆ ನಮ್ಮ ಜೀವನದಲ್ಲಿ ಸ್ಫೂರ್ತಿದಾಯಕರನ್ನಾಗಿ ಸಿಕೊಳ್ಳಲೇಬೇಕಿದೆ. ಸಂಸದೀಯ ವ್ಯವಸ್ಥೆ ಮಾದರಿಯನ್ನು ಜಗತ್ತಿಗೆ ಪರಿಚಯಿಸಿದ ಬಸವಣ್ಣನವರನ್ನು ನಾಡಿನ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿರುವುದು ಅತ್ಯಂತ ಹೆಮ್ಮೆಯ ಸಂಗತಿ ಎಂದು ಶ್ಲಾಘಿಸಿದರು.

ಸಂಪ್ರದಾಯದಂತೆ ಸೋಮವಾರ ಬೆಳಗ್ಗೆ ರಾಜ್ಯಪಾಲ ಥಾವರ್‌ಚಂದ್‌ ಗೆಹೊÉà’ಗಿ ಅವರು ಸ್ಪೀಕರ್‌ ಯು.ಟಿ. ಖಾದರ್‌, ಪರಿಷತ್‌ ಸಭಾಪತಿ ಬಸವರಾಜ್‌ ಹೊರಟ್ಟಿ, ಸಿಎಂ ಸಿದ್ದರಾಮಯ್ಯ, ವಿಪಕ್ಷ ನಾಯಕ ಆರ್‌. ಅಶೋಕ್‌ ಜತೆಯಲ್ಲಿ ವಿಧಾನಸಭೆಗೆ ಆಗಮಿಸಿದರು.

ರಾಜ್ಯಪಾಲರು ಹೇಳಿದ್ದೇನು?

ಅಭಿವೃದ್ಧಿ ಎಂದರೆ ಕೇವಲ ಆರ್ಥಿಕ ಅಭಿವೃದ್ಧಿ ಯಲ್ಲ, ಸುಸ್ಥಿರ ಅಭಿವೃದ್ಧಿ, ಸಾಮಾಜಿಕ ಸಾಮರಸ್ಯ ಸೇರಿವೆ.

ರಾಜ್ಯ ಸರಕಾರ 7 ಕೋಟಿ ಮಂದಿಯ ಬದುಕಿನಲ್ಲಿ ಹೊಸ ಬೆಳಕು ತಂದಿದೆ.

ಸರಕಾರದ ಪಂಚ ಗ್ಯಾರಂಟಿಗಳು ಜನರಿಗೆ ಸಾಂತ್ವನ ಒದಗಿಸಿವೆ. ಆರ್ಥಿಕ ಅಶಕ್ತರಿಗೆ ಅದು ಅಗತ್ಯ ವಿತ್ತೆಂಬುದಕ್ಕೆ ಬಂದ ಅರ್ಜಿಗಳೇ ಸಾಕ್ಷಿ.

ಯೋಜನೆಗಳಿಂದ 1.2 ಕೋಟಿಗೂ ಅಧಿಕ ಕುಟುಂಬ ಗಳು ಬಡತನ ರೇಖೆಯಿಂದ ಮಧ್ಯಮ ವರ್ಗದ ಸ್ಥಿತಿಗೆ ತಲುಪಿವೆ.

ಶಕ್ತಿ ಯೋಜನೆ ಮೂಲಕ 150 ಕೋಟಿಗೂ ಹೆಚ್ಚು ಟ್ರಿಪ್‌ಗ್ಳಲ್ಲಿ ಮಹಿಳಾ ಪ್ರಯಾಣಿಕರು ಪ್ರವಾಸ ಮಾಡಿದ್ದಾರೆ.

ಕಾಂಗ್ರೆಸ್‌ ಸರಕಾರ ರಾಜ್ಯಪಾಲರ ಬಾಯಿಯಲ್ಲಿ ಸುಳ್ಳು ಹೇಳಿಸಿದೆ. ಬಿಜೆಪಿ ಸರಕಾರ, ಕೇಂದ್ರ ಸರಕಾರದ ಯೋಜನೆಗಳನ್ನು ತಮ್ಮದೇ ಎಂದಿದೆ. ಗ್ಯಾರಂಟಿಗಾಗಿ ಖಜಾನೆ ಖಾಲಿ ಮಾಡಿಕೊಂಡು ಶಾಸಕರಿಗೆ ಅನುದಾನ ನೀಡದೆ ಸತಾಯಿಸುತ್ತಿದೆ.-– ಆರ್‌. ಅಶೋಕ್‌, ವಿಪಕ್ಷ ನಾಯಕ

ಭಾಷಣದಲ್ಲಿ ಉಪ್ಪು ಹುಳಿ ಖಾರ ಏನೂ ಇಲ್ಲ. ಇದೊಂದು ಜಾಹೀ ರಾತುಗಳಿಂದ ನಡೆಯುತ್ತಿರುವ ಸರಕಾರ. ಜನರು ಸ್ಪಷ್ಟ ಬಹುಮತ ಕೊಟ್ಟರೂ ಅಸ್ಪಷ್ಟವಾಗಿ ಆಡಳಿತ ನಡೆಸುತ್ತಿದ್ದಾರೆ. – ಎಚ್‌.ಡಿ. ಕುಮಾರಸ್ವಾಮಿ, ಮಾಜಿ ಸಿಎಂ

Advertisement

Udayavani is now on Telegram. Click here to join our channel and stay updated with the latest news.

Next