Advertisement

ಹೊಸ ಜೀವನದ ನಿರೀಕ್ಷೆ ಸಂದೇಶ ಯಜ್ಞ

06:00 AM Nov 02, 2018 | |

“ಮೆದುಳು, ಕಣ್ಣು, ಕಿವಿ ಮತ್ತು ಮನಸ್ಸು…’
– ಈ ನಾಲ್ಕು ಅಂಶಗಳನ್ನಿಟ್ಟುಕೊಂಡು “ಜೀವನ ಯಜ್ಞ’ ಸಿನಿಮಾ ಮಾಡಿದ್ದಾರೆ ನಿರ್ದೇಶಕ ಶಿವು ಸರಳೇಬೆಟ್ಟು. ಇವರಿಗಿದು ಮೊದಲ ಚಿತ್ರ. ಈ ವಾರ ರಾಜ್ಯಾದ್ಯಂತ ತೆರೆಗೆ ಬರುತ್ತಿದೆ. ಬಿಡುಗಡೆ ಮುನ್ನ, ಒಂದಷ್ಟು ಮಾಹಿತಿ ಹಂಚಿಕೊಳ್ಳಲೆಂದೇ ಅವರು, ತಂಡದೊಂದಿಗೆ ಮಾಧ್ಯಮ ಎದುರು ಬಂದಿದ್ದರು. ಅಂದು ಮೊದಲು ಮಾತು ಶುರುಮಾಡಿದ್ದು ನಿರ್ದೇಶಕ ಶಿವು ಸರಳೇಬೆಟ್ಟು. “ಇಲ್ಲಿ ಪ್ರತಿಯೊಬ್ಬರ ಲೈಫ‌ಲ್ಲೂ ನಡೆಯುವ ಕಥೆಯನ್ನೇ ಇಟ್ಟುಕೊಂಡು ಚಿತ್ರ ಮಾಡಲಾಗಿದೆ. ಇದು ನಾಲ್ಕು ಅನಾಥ ಮಕ್ಕಳ ಸುತ್ತ ನಡೆಯುವ ಕಥೆ. ಅವರ ಬಾಲ್ಯದಲ್ಲಿ ಎಲ್ಲವನ್ನೂ ಕಳೆದುಕೊಂಡು ಅನಾಥಾಶ್ರಮದಲ್ಲಿರುವ ನಾಲ್ವರು ಮಕ್ಕಳನ್ನು ಉಳ್ಳವರು ಕರೆದುಕೊಂಡು ಹೋಗಿ ಅವರನ್ನು ಸಾಕಿ ಸಲಹುತ್ತಾರೆ. ಅವರ ಹಸಿವು ನೀಗಿಸುತ್ತಾರೆ. ಕಾಣದ ಪ್ರೀತಿ ತುಂಬುತ್ತಾರೆ. ಹಾಗೆ, ಆ ಅನಾಥರ ಬದುಕಿನ ಚಿತ್ರಣ ಚಿತ್ರದುದ್ದಕ್ಕೂ ಸಾಗುತ್ತದೆ. ಇಲ್ಲಿ ಮುಖ್ಯವಾಗಿ ನಾಲ್ಕು ಅಂಶಗಳು ಸಿನಿಮಾವನ್ನು ಆವರಿಸಿಕೊಂಡಿವೆ. ನೋಡುವುದು, ಕೇಳುವುದು, ಬುದ್ಧಿ ಮತ್ತು ಮನಸು. ಈ ನಾಲ್ಕು ಅಂಶಗಳು ಚಿತ್ರದ ಹೈಲೆಟ್‌. ಈಗ ಪರೀಕ್ಷೆ ಬರೆದಿದ್ದೇವೆ. ಫ‌ಲಿತಾಂಶಕ್ಕೆ ಕಾಯುತ್ತಿದ್ದೇವೆ. ಪ್ರೇಕ್ಷಕರು ಎಷ್ಟು ಮಾರ್ಕ್ಸ್ ಕೊಡುತ್ತಾರೆಂಬ ಕುತೂಹಲವಿದೆ’ ಎನ್ನುತ್ತಾರೆ ಅವರು.

Advertisement

ನಿರ್ಮಾಪಕ ರಂಜನ್‌ಶೆಟ್ಟಿ  ಅವರಿಗೆ ಒಳ್ಳೆಯ ಚಿತ್ರ ಮಾಡಿರುವ ಖುಷಿ ಇದೆ. 30 ದಿನಗಳ ಕಾಲ ಮಂಗಳೂರಲ್ಲಿ ಚಿತ್ರೀಕರಿಸಲಾಗಿದೆ. ಅದರಲ್ಲೂ ಒಂದೇ ಏರಿಯಾದಲ್ಲಿ ಚಿತ್ರೀಕರಿಸಿರುವುದು ವಿಶೇಷ. ನಿರ್ದೇಶಕರು ಹೇಳಿದ ಕಥೆ ಮೆಚ್ಚಿಕೊಂಡು ಕಿರಣ್‌ ರೈ ಜೊತೆ ಹಣ ಹಾಕಿ, ಸಿನಿಮಾ ನಿರ್ಮಿಸಿದ್ದೇವೆ. ಇಲ್ಲಿ ಹೊಸತನದ ಜೊತೆ ಆಧ್ಯಾತ್ಮ, ಮನರಂಜನೆ ಇದೆ’ ಎನ್ನುತ್ತಾರೆ ನಿರ್ಮಾಪಕರು.

ಶೈನ್‌ಶೆಟ್ಟಿ ಇಲ್ಲಿ ನಾಲ್ಕು ಪ್ರಮುಖ ಪಾತ್ರಗಳಲ್ಲಿ ಅವರೂ ಒಬ್ಬರಾಗಿದ್ದಾರಂತೆ. ಅವರಿಲ್ಲಿ ಸೂರ್ಯ ಎಂಬ ಪಾತ್ರ ನಿರ್ವಹಿಸಿದ್ದು, ಈಗಿನ ವಾಸ್ತವ ಅಂಶಗಳೊಂದಿಗೆ ಚಿತ್ರ ಸಾಗುತ್ತದೆ. ಇಲ್ಲಿ ನೋವು, ನಲಿವು ಜೊತೆಗೆ ಸಂದೇಶವೂ ಇದೆ ಎನ್ನುತ್ತಾರೆ ಶೈನ್‌ಶೆಟ್ಟಿ.

ಈ ಹಿಂದೆ ನಾಯಕರಾಗಿ ಮನೋಜ್‌ ಪುತ್ತೂರ್‌ ಎಂಬ ಹೆಸರಲ್ಲೇ ಗುರುತಿಸಿಕೊಂಡಿದ್ದು, ಈ ಚಿತ್ರದಿಂದ ಅದ್ವೆ„ತ್‌ ಆಗಿ ಕರೆಸಿಕೊಳ್ಳುತ್ತಿದ್ದಾರೆ ಮನೋಜ್‌ ಪುತ್ತೂರ್‌. ಕಾರಣ, ಮನೋಜ್‌ ಎಂಬ ಹೆಸರಿನವರು ಇದ್ದಾರೆಂಬುದು. ಅವರಿಲ್ಲಿ ತಂದೆ ತಾಯಿ ಬಿಟ್ಟು, ಅವರನ್ನು ದೂರ ಇರಿಸಿ, ಬದುಕು ನಡೆಸುವ ಹುಡುಗನಾಗಿ ಕಾಣಿಸಿಕೊಂಡಿದ್ದಾರಂತೆ. ಅವರು ಸಂಕಷ್ಟಕ್ಕೆ ಸಿಲುಕಿದಾಗ, ಅದೇ ತಂದೆ ತಾಯಿ ಅವರನ್ನು ನೋಡಿಕೊಂಡಾಗ, ಹೇಗೆಲ್ಲಾ ತಪ್ಪು ತಿದ್ದಿಕೊಳ್ತಾರೆ ಎಂಬ ಪಾತ್ರ ಮಾಡಿದ್ದು ಖುಷಿಕೊಟ್ಟಿದೆಯಂತೆ.

ಇನ್ನು, ಚಿತ್ರದಲ್ಲಿ  ಆದ್ಯ ಆರಾಧನಾ ನಾಯಕಿಯಾಗಿದ್ದು, ಅವರಿಗೂ ಇಲ್ಲಿ ಹೊಸ ಅನುಭವ ಆಗಿದೆಯಮತೆ. ಚಿತ್ರದಲ್ಲಿ ರಮೇಶ್‌ ಭಟ್‌, .ಜಯಶ್ರೀ, ಅನ್ವಿತಾ ಸಾಗರ್‌ ಸೇರಿದಂತೆ ತುಳು ಸಿನಿಮಾರಂಗದ ಅನೇಕರು ಇಲ್ಲಿ ನಟಿಸಿದ್ದಾರೆ. ಸುರೇಂದ್ರ ಚಿತ್ರಕ್ಕೆ ಛಾಯಾಗ್ರಹಣ ಮಾಡಿದರೆ, ಆಶೆ ಮೈಕೆಲ್‌ ಅವರು ಸಂಗೀತವಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next