Advertisement

Sandalwood; ಸೆ.6ಕ್ಕೆ ʼಅನ್ನʼ ಚಿತ್ರ ತೆರೆಗೆ

04:21 PM Aug 31, 2024 | Team Udayavani |

“ಅನ್ನ’ದ ಮಹತ್ವ ಸಾರುವ ಸಿನಿಮಾವೊಂದು ಸದ್ದಿಲ್ಲದೇ ತಯಾರಾಗಿ ಈಗ ಬಿಡುಗಡೆ ಹಂತಕ್ಕೆ ಬಂದಿದೆ. ಇತ್ತೀಚೆಗೆ ಈ ಚಿತ್ರದ ಟ್ರೇಲರ್‌ ಹಾಗೂ ಹಾಡುಗಳ ಬಿಡುಗಡೆ ಕಾರ್ಯಕ್ರಮ ನಡೆಯಿತು. ಎನ್‌. ಎಸ್‌. ಇಸ್ಲಾಹುದ್ದೀನ್‌ ಈ ಚಿತ್ರದ ನಿರ್ದೇಶಕರು.

Advertisement

ಚಿತ್ರದ ಬಗ್ಗೆ ಮಾತನಾಡುವ ಅವರು, “ಇದು ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಂತ ಹನೂರು ಚೆನ್ನಪ್ಪನವರ ಕಥಾಸಂಕಲನದ ಅನ್ನ ಎಂಬ ಕಥೆಯ ಬಗ್ಗೆ ತಿಳಿದುಕೊಂಡು ಒಂದಷ್ಟು ಈ ಕಥೆಯ ಮೇಲೆ ಕೆಲಸವನ್ನು ಆರಂಭಿಸಿ ಮಾಡಿದ ಸಿನಿಮಾ. 80ರ ಕಾಲಘಟ್ಟದಲ್ಲಿ ನಡೆಯುವ ಕಥೆ ಇದಾಗಿದೆ. ಕೆಲವೊಂದು ಹಳ್ಳಿಗಾಡುಗಳಲ್ಲಿ ಅನ್ನ ಹಬ್ಬದ ದಿನ ಮಾತ್ರ ಮಾಡುವುದು ಅಂತ ತಿಳಿದಿತ್ತು. ಈ ಕಥೆಯು ಇದರ ಸುತ್ತವೇ ತಿರುಗಲಿದ್ದು, ಅನ್ನ ಎಷ್ಟು ಮುಖ್ಯ , ಅದರ ಮಹತ್ವ ಏನು, ಎಂಬುದರ ಸುತ್ತ ಚಿತ್ರ ಸಾಗಲಿದೆ’ ಎಂದರು. ಅಂದಹಾಗೆ, ಈ ಚಿತ್ರ ಸೆಪ್ಟೆಂಬರ್‌ 06ರಂದು ಬಿಡುಗಡೆ ಆಗುತ್ತಿದೆ.

ಕಥೆ ಬರೆದ ಹನೂರು ಚೆನ್ನಪ್ಪ ಮಾತನಾಡಿದರು. ಬಸವರಾಜ್‌ ಈ ಚಿತ್ರದ ನಿರ್ಮಾಪಕರು. ನಾಗೇಶ್‌ ಕಂದೇಗಾಲ ಸಂಗೀತ ಚಿತ್ರಕ್ಕಿದೆ. ಚಿತ್ರದಲ್ಲಿ ಮಾಸ್ಟರ್‌ ನಂದನ್‌, ಮಹಾದೇವ ಎಂಬ ಪಾತ್ರ ಮಾಡಿದ್ದಾರೆ. ಉಳಿದಂತೆ ಈ ಚಿತ್ರದಲ್ಲಿ ಸಿದ್ದು ಪ್ರಸನ್ನ , ಸಂಪತ್‌ ಮೈತ್ರಿಯ , ಬಾಲ ರಾಜವಾಡಿ, ರಮೇಶ್‌ ಸಿದ್ದಯ್ಯನಪುರ , ನಾಗಶ್ರೀ ಸೇರಿದಂತೆ ಅನೇಕರು ನಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.