Advertisement

Sandalwood: ಹೊಸಬರ 1990 ಲವ್‌ಸ್ಟೋರಿ

02:47 PM Sep 04, 2024 | Team Udayavani |

“1990′ ಹೀಗೊಂದು ಸಿನಿಮಾ ತಯಾರಾಗಿದ್ದು, ಇತ್ತೀಚೆಗೆ ಚಿತ್ರದ ಟೀಸರ್‌ ಬಿಡುಗಡೆ ಆಗಿದೆ.ಮನಸ್ಸು ಮಲ್ಲಿಗೆ ಕಂಬೈನ್ಸ್‌ನಡಿ ನಿರ್ಮಾಣವಾಗಿರುವ ಈ ಚಿತ್ರವನ್ನು ನಂದಕುಮಾರ್‌ ಸಿ.ಎಂ ನಿರ್ದೇಶಿಸಿದ್ದಾರೆ.

Advertisement

ಚಿತ್ರದಲ್ಲಿ ಅರುಣ್‌ ಹಾಗೂ ರಾಣಿ ವರದ್‌ ನಟಿಸಿದ್ದಾರೆ. ನಿರ್ದೇಶಕ ನಂದಕುಮಾರ್‌ ಮಾತನಾಡಿ, “1990 ತೊಂಬತ್ತರ ದಶಕದಲ್ಲಿ ನಡೆಯುವ ಪ್ರೇಮಕಥೆ. ಅರುಣ್‌ ಹಾಗೂ ರಾಣಿ ವರದ್‌ ನಾಯಕ – ನಾಯಕಿಯಾಗಿ ಅಭಿನಯಿಸಿದ್ದಾರೆ. ಸಾಕಷ್ಟು ಕಲಾವಿದರು ಚಿತ್ರದ ತಾರಾಬಳಗದಲ್ಲಿದ್ದಾರೆ.

ಚಿತ್ರೀಕರಣ ಹಾಗೂ ನಂತರದ ಚಟುವಟಿಕೆಗಳು ಪೂರ್ಣವಾಗಿದ್ದು, ಸದ್ಯದಲ್ಲೇ ಚಿತ್ರ ತೆರೆಗೆ ಬರಲಿದೆ. ಕನ್ನಡ, ತೆಲುಗು, ತಮಿಳು, ಮಲೆಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಈ ಚಿತ್ರ ಬರಲಿದೆ. ಪ್ಯಾನ್‌ ಇಂಡಿಯಾ ಚಿತ್ರವಾಗಿರುವುದರಿಂದ ಚಿತ್ರದ ಶೀರ್ಷಿಕೆಯನ್ನು 1990 ಎಂದು ಇಡಲಾಗಿದೆ’ ಎಂದರು.

“ರಂಗಭೂಮಿ ಕಲಾವಿದನಾಗಿ ಹತ್ತುವರ್ಷಗಳ ಅನುಭವವಿರುವ ನನಗೆ ಹಿರಿತೆರೆತಲ್ಲಿ ಇದು ಮೊದಲ ಚಿತ್ರ. ನಂದಕುಮಾರ್‌ ಅವರು ಒಳ್ಳೆಯ ಕಥೆ ಮಾಡಿಕೊಂಡಿದ್ದಾರೆ. ಎಲ್ಲರಿಗೂ ಚಿತ್ರ ಹಿಡಿಸುವ ನಂಬಿಕೆ ಇದೆ. ಈ ಚಿತ್ರದಲ್ಲಿ ನನ್ನದು ಮುಗ್ಧ ಪ್ರೇಮಿಯ ಪಾತ್ರ ಎಂದರು ನಾಯಕ ಅರುಣ್‌.ಚಿತ್ರಕ್ಕೆ ಹಾಲೇಶ್‌ ಛಾಯಾಗ್ರಹಣ, ಮಹಾರಾಜ ಸಂಗೀತ, ಕೃಷ್ಣ ಸಂಕಲನವಿದೆ.

Advertisement

Udayavani is now on Telegram. Click here to join our channel and stay updated with the latest news.