Advertisement

KD: ಕೆಡಿಯಿಂದ ಹಾಡು, ಟೀಸರ್‌ ಬರಲೇ ಇಲ್ಲ!

11:02 AM Aug 28, 2024 | Team Udayavani |

ಸಿನಿಮಾ ರಂಗವೇ ಹಾಗೆ. ಇಲ್ಲಿ ಅನಿಶ್ಚಿತತೆಯೇ ಹೆಚ್ಚು. ಅಂದುಕೊಂಡದ್ದು ಆಗುವುದಕ್ಕಿಂತ ಅಂದುಕೊಳ್ಳದೇ ಇರುವುದು ಆಗುವುದೇ ಹೆಚ್ಚು. ಅದು ಸಿನಿಮಾ ಶೂಟಿಂಗ್‌, ರಿಲೀಸ್‌ ಪ್ಲ್ರಾನ್‌, ಹಾಡು, ಟೀಸರ್‌ ಬಿಡುಗಡೆ… ಹೀಗೆ ಏನೇ ಇರಬಹುದು, ಬದಲಾಗುತ್ತಲೇ ಇರುತ್ತದೆ. ಧ್ರುವ ನಟನೆಯ “ಕೆಡಿ’ ವಿಚಾರದಲ್ಲೂ ಇದು ಮುಂದುವರೆದಿದೆ. ಏನದು ಎಂದು ನೀವು ಕೇಳಬಹುದು. ಅದು ಹಾಡು ಹಾಗೂ ಟೀಸರ್‌ ವಿಚಾರ.

Advertisement

ಚಿತ್ರದ ಆಡಿಯೋ ರೈಟ್ಸ್‌ ದುಬಾರಿ ಬೆಲೆಗೆ ಮಾರಾಟವಾದ ಖುಷಿಯನ್ನು ಮಾಧ್ಯಮ ಮುಂದೆ ಹಂಚಿಕೊಳ್ಳಲು ಬಂದ “ಕೆಡಿ’ ತಂಡ ಚಿತ್ರದ ಟೀಸರ್‌ ಹಾಗೂ ಹಾಡು ಬಿಡುಗಡೆ ಬಗ್ಗೆಯೂ ಮಾತನಾಡಿತು.ಅಂದು ನಿರ್ದೇಶಕ ಪ್ರೇಮ್‌ ಮಾತನಾಡಿ, ಚಿತ್ರದ ಮೊದಲ ಟೀಸರ್‌ ವರಮಹಾಲಕ್ಷ್ಮೀ ಹಬ್ಬ (ಆಗಸ್ಟ್‌ 16)ಕ್ಕೆ ಮುಂಬೈನಲ್ಲಿ ಬಿಡುಗಡೆಯಾಗಲಿದೆ.

ಚಿತ್ರದ ಮೊದಲ ಹಾಡು ಆಗಸ್ಟ್‌ 25ಕ್ಕೆ ಹೈದರಾಬಾದ್‌ನಲ್ಲಿ ರಿಲೀಸ್‌ ಆಗಲಿದೆ ಎಂದಿದ್ದರು. ಆದರೆ, ಹಾಡು, ಟೀಸರ್‌ ಬಂದಿಲ್ಲ. ಈ ಕುರಿತು ಚಿತ್ರತಂಡ ಕೂಡಾ ಮತ್ತೆ ಮಾತನಾಡಿಲ್ಲ. ಆದರೆ, “ಕೆಡಿ’ ಮೇಲಿನ ನಿರೀಕ್ಷೆಯಿಂದ ಸಿನಿಮಾ ಪ್ರೇಮಿಗಳು ಮಾತ್ರ ಇದನ್ನು ನೆನಪಿಟ್ಟುಕೊಂಡಿದ್ದಾರೆ. ಮೊದಲೇ ಹೇಳಿದಂತೆ ಸಿನಿಮಾ ಮೇಕಿಂಗ್‌ ಎಂದಾಗ ಹಲವು ಸಮಸ್ಯೆಗಳು ಬಂದೇ ಬರುತ್ತವೆ. ಹಾಗಾಗಿ, “ಕೆಡಿ’ಯ ಪ್ಲ್ರಾನ್‌ ಮುಂದೆ ಹೋಗಿರಬಹುದು. ಅದಕ್ಕೂ ಹೆಚ್ಚಾಗಿ ನಿರ್ದೇಶಕ ಪ್ರೇಮ್‌ ಏನೇ ಮಾಡಿದರೂ ವಿಭಿನ್ನವಾಗಿ ಮಾಡುತ್ತಾರೆಂಬ ಮಾತಿದೆ. ಈ ನಿಟ್ಟಿನಲ್ಲೂ ಅವರ ಪ್ಲ್ರಾನ್‌ ಬದಲಾಗಿರಬಹುದು.

ಈ ಚಿತ್ರವನ್ನು ಕೆವಿಎನ್‌ ಪ್ರೊಡಕ್ಷನ್ಸ್‌ ನಿರ್ಮಿಸುತ್ತಿದೆ. “ಕೆಡಿ’ ಚಿತ್ರದ ಆಡಿಯೋ ರೈಟ್ಸ್‌ ಬರೋಬ್ಬರಿ 17.70 ಕೋಟಿ ರೂಪಾಯಿಗೆ ಮಾರಾಟವಾಗಿದೆ. ಆನಂದ್‌ ಆಡಿಯೋ ಈ ಭರ್ಜರಿ ಮೊತ್ತ ನೀಡಿ “ಕೆಡಿ’ ಆಡಿಯೋ ಖರೀದಿಸಿದೆ. ಅರ್ಜುನ್‌ ಜನ್ಯಾ ಸಂಗೀತದಲ್ಲಿ ಹಾಡುಗಳು ಮೂಡಿಬಂದಿದ್ದು, ಚಿತ್ರಕ್ಕೆ 256 ಪೀಸ್‌ ಆರ್ಕೆಸ್ಟ್ರಾ ಬಳಸಲಾಗಿದೆ. ಇನ್ನು ಈ ಚಿತ್ರವನ್ನು ಡಿಸೆಂಬರ್‌ಗೆ ರಿಲೀಸ್‌ ಮಾಡುವುದಾಗಿ ಚಿತ್ರತಂಡ ಹೇಳಿದೆ. 

Advertisement

Udayavani is now on Telegram. Click here to join our channel and stay updated with the latest news.