Advertisement

ಸ್ವಾಭಿಮಾನದತ್ತ ಸಾಗುತ್ತಿದೆ ನವ ಭಾರತ; ‌ನಳಿನ್‌ಕುಮಾರ್‌ ಕಟೀಲ್‌

06:35 PM Oct 12, 2022 | Team Udayavani |

ಹಾವೇರಿ: ಬಿಜೆಪಿ ಅಧಿಕಾರಕ್ಕೆ ಬಂದ ನಂತರ ದೇಶದಲ್ಲಿ ಪರಿವರ್ತನೆ ಆಗುತ್ತಿದ್ದು, ಭಾರತವು ವಿಶ್ವದ ಜಗದ್ಗುರು ಆಗುತ್ತಿದೆ. ದೇಶದ ತ್ರಿವರ್ಣ ಧ್ವಜಕ್ಕೆ ವಿಶ್ವದೆಲ್ಲೆಡೆ ಗೌರವ ಸಿಗುತ್ತಿದೆ. ಸ್ವಾಭಿಮಾನದ ಭಾರತ ಎದ್ದು ನಿಲ್ಲುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ್ಯ ನಳಿನ್‌ಕುಮಾರ ಕಟೀಲ್‌ ಹೇಳಿದರು.

Advertisement

ನಗರದ ಮುನ್ಸಿಪಲ್‌ ಹೈಸ್ಕೂಲ್‌ ಮೈದಾನದಲ್ಲಿ ಮಂಗಳವಾರ ಆಯೋಜಿಸಿದ್ದ ಬಿಜೆಪಿ ಪೇಜ್‌ ಪ್ರಮುಖರು ಮತ್ತು ಕಾರ್ಯಕರ್ತರ ಸಂಕಲ್ಪ ಸಭೆಯಲ್ಲಿ ಅವರು ಮಾತನಾಡಿದರು.

ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಭಾರತ ಮಾತೆಯ ಆರಾಧನೆ ಮೇಲೆ ಸಂಘಟನೆ ಬೆಳೆಸಿ¨ªೇವೆ. ಕಾಂಗ್ರೆಸ್‌ನವರು ಪರಿವಾರ ವಾದದ ಮೇಲೆ ಸಂಘಟನೆ ಮಾಡಿದರು. ನಿಮ್ಮ ಅಧಿಕಾರದಲ್ಲಿ ಪಿಎಫ್‌ಐ ಬಂದ್‌ ಮಾಡಲು ಆಗಲಿಲ್ಲ. ಸಿದ್ದರಾಮಯ್ಯನವರಿಗೆ ನಾಚಿಕೆ ಆಗಬೇಕು. ಇಂದು ಮೋದಿ, ಬೊಮ್ಮಾಯಿ ಸರ್ಕಾರ ಪಿಎಫ್‌ಐ ಕ್ರಿಮಿನಲ್‌ ಗಳನ್ನು ಜೈಲಿಗೆ ಅಟ್ಟಿದೆ. ಭಯೋತ್ಪಾದನೆ ಚಟುವಟಿಕೆ, ಉಗ್ರವಾದವನ್ನು ನಾವು ಸಹಿಸುವುದಿಲ್ಲ. ಮತ ಬ್ಯಾಂಕ್‌ ಗಾಗಿ ನಾವು ಆಸೆಪಟ್ಟಿಲ್ಲ. ಅದಕ್ಕಾಗಿ ಅಂಥವರ ಕಾಲು ನೆಕ್ಕುವ ಕೆಲಸ ನಾವು ಮಾಡಲ್ಲ. ಭಿಕ್ಷುಕರು, ಹಾವಾಡಿಗರ ದೇಶ ಎಂಬ ಕಳಂಕವನ್ನು ಮೋದಿ ತೊಡೆದುಹಾಕಿದ್ದಾರೆ
ಎಂದು ಹೇಳಿದರು.

ಕಾಂಗ್ರೆಸ್‌ನಿಂದ ದೇಶ ವಿಭಜನೆ: ದೇಶದಲ್ಲಿ ಭಯೋತ್ಪಾದನೆ ಆರಂಭವಾಗಿದ್ದು ಕಾಂಗ್ರೆಸ್‌ ಕಾಲಘಟ್ಟದಲ್ಲಿ. ಭಯೋತ್ಪಾದನೆ, ನಕ್ಸಲ್‌ ಚಟುವಟಿಕೆಗೆ ಬೆಂಬಲ ವ್ಯಕ್ತವಾದವು. ಎಲ್ಲೆಡೆ ಬಾಂಬ್‌ ಸ್ಫೋಟಗೊಂಡವು. ಹಳ್ಳಿಹಳ್ಳಿಗಳಲ್ಲಿ ಬಾಂಬ್‌ ಸ್ಫೋಟಗೊಳ್ಳುತ್ತಿತ್ತು. ಆದರೆ, 2014ರಿಂದ ಮೋದಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ಎಲ್ಲಿಯೂ ಬಾಂಬ್‌ ಸ್ಫೋಟಗೊಳ್ಳಲಿಲ್ಲ. ಭಯೋತ್ಪಾದನೆ ಶಕ್ತಿಗಳಿಗೆ ಆಂತರಿಕ ಪ್ರೇರಣೆ ನೀಡಿದ್ದು ಕಾಂಗ್ರೆಸ್‌. ನಕ್ಸಲ್‌ ಚಟುವಟಿಕೆಯೂ ಈಗ ಬಂದ್‌ ಆಗಿದೆ.

ಗಾಂಧಿ ಹೆಸರಿನಲ್ಲಿ ಅಧಿಕಾರ ನಡೆಸಿಕೊಂಡು ಬಂದು ಕಾಂಗ್ರೆಸ್‌ನವರು ಪರಿವಾರ ವಾದ ಹೆಸರಿನಲ್ಲಿ ಅಧಿಕಾರ ನಡೆಸಿದರು. ತಂದೆಯಿಂದ ಮಗಳು, ಮಗ, ಮೊಮ್ಮಗ ಎಲ್ಲರೂ ಪರಿವಾರದ ಹೆಸರಿನಲ್ಲಿ ಅಧಿಕಾರ ನಡೆಸಿಕೊಂಡು ಬಂದರು. ಆದರೆ, ವಾಜಪೇಯಿ ಕಾಲದಲ್ಲಿ ದೇಶಾದ್ಯಂತ ಚತುಷ್ಪಥ ಹೆದ್ದಾರಿಗಳಾದವು. ರಾಹುಲ್‌ ಗಾಂಧಿ ಭಾರತ್‌ ಜೋಡೋ ಮಾಡುತ್ತಿಲ್ಲ. ಕಾಂಗ್ರೆಸ್‌ ಈ ದೇಶವನ್ನು ತುಂಡು ಮಾಡಿತು. ದೇಶ ವಿಭಜನೆ ಮಾಡಿ, ಹಿಂದೂ ಮುಸ್ಲಿಂರನ್ನು
ಪ್ರತ್ಯೇಕಗೊಳಿಸಿದರು. ಬಹುಸಂಖ್ಯಾತ, ಅಲ್ಪಸಂಖ್ಯಾತ ವರ್ಗೀಕರಣ ಮಾಡಿದರು.

Advertisement

ಸಿದ್ದರಾಮಯ್ಯ ಟಿಪ್ಪು ಜಯಂತಿ ಮಾಡಿ ಹಿಂದೂ ಮುಸ್ಲಿಂರನ್ನು ಒಡೆದಾಳುವ ಕೆಲಸ ಮಾಡಿದರು. ವೀರಶೈವ ಧರ್ಮವನ್ನೂ ಒಡೆದರು. ಬಿಜೆಪಿ ಎಲ್ಲವನ್ನೂ ಜೋಡಿಸುವ ಕೆಲಸ ಮಾಡುತ್ತಿದೆ. ಭಾರತ ಜೋಡೋ ರಾಹುಲ್‌ ಮಾಡುತ್ತಿಲ್ಲ ಎಂದು ಹೇಳಿದರು. ಶಾಸಕ ನೆಹರು ಓಲೇಕಾರ, ಸಂಸದ ಶಿವಕುಮಾರ ಉದಾಸಿ, ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ವಿಪ ಸದಸ್ಯೆ ಹೇಮಲತಾ ನಾಯಕ, ಲಿಂಗರಾಜ ಪಾಟೀಲ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next