Advertisement

ಡಿಟಿಎಚ್‌, ಕೇಬಲ್‌ ಸೇವೆಗೆ ಡಿ. 29ರಿಂದ ಹೊಸ ನಿಯಮಾವಳಿ ಜಾರಿ

06:05 AM Dec 15, 2018 | Karthik A |

ಹೊಸದಿಲ್ಲಿ: ಇನ್ನು ಡಿಟಿಎಚ್‌ ಮತ್ತು ಕೇಬಲ್‌ ಸೇವೆ ಬೇಡಿಕೆಗೆ ಅನುಗುಣವಾಗಿ ಲಭ್ಯ. ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟ್ರಾಯ್)ದ ಹೊಸ ನಿಯಮ ಡಿ. 29ರಿಂದ ಜಾರಿಗೊಳ್ಳಲಿದೆ. ಟ್ರಾಯ್ 2016ರಲ್ಲೇ ಜಾರಿಗೆ ಮುಂದಾದರೂ ಸ್ಟಾರ್‌ ಇಂಡಿಯಾ ಕೋರ್ಟ್‌ ಮೆಟ್ಟಿಲೇರಿತ್ತು. ಈಗ ಆ ಅಡ್ಡಿಯೂ ಬಗೆಹರಿದಿದೆ. ಚಾನೆಲ್‌ಗ‌ಳ ದರವನ್ನು ಪ್ರಸಾರ ಸಂಸ್ಥೆಗಳು ನಿರ್ಧರಿಸಲಿವೆ. ಈವರೆಗೆ ಡಿಟಿಎಚ್‌ ಆಪರೇಟರ್‌ಗಳು ಹಾಗೂ ಕೇಬಲ್‌ ವಿತರಕರು ನಿರ್ಧರಿಸುತ್ತಿದ್ದರು.

Advertisement

ಪ್ರಸಾರ ಸಂಸ್ಥೆಗಳು ಪ್ರತಿ ಚಾನೆಲ್‌ ಅನ್ನೂ ಬಿಡಿಯಾಗಿ ವಿತರಕರಿಗೆ ನೀಡುತ್ತವೆ. ಚಾನೆಲ್‌ಗ‌ಳ ಗುಂಪು ರೂಪಿಸುವ ಹೊಣೆ ವಿತರಕರದ್ದು. ಆದರೆ ಪೇ ಚಾನೆಲ್‌ಗ‌ಳನ್ನು ಉಚಿತ ಚಾನೆಲ್‌ಗ‌ಳೊಂದಿಗೆ ಜೋಡಿಸಿ ಗುಂಪು ರಚಿಸುವಂತಿಲ್ಲ. ಅಲ್ಲದೆ ಸ್ಟಾಂಡರ್ಡ್‌ ಡೆಫಿನಿಶನ್‌ (ಎಸ್‌ಡಿ) ಮತ್ತು ಹೈ ಡೆಫಿನಿಶನ್‌ (ಎಚ್‌ಡಿ) ಚಾನೆಲ್‌ಗ‌ಳನ್ನು ಪ್ರತ್ಯೇಕ ಗುಂಪುಗಳಲ್ಲಿ ನೀಡಬೇಕು. l19 ರೂ.ಗಳಿಗಿಂತ ಅಧಿಕ ದರವಿರುವ ಚಾನೆಲ್‌ಗ‌ಳನ್ನು ಗ್ರಾಹಕರಿಗೆ ಪ್ರತ್ಯೇಕ ನೀಡಬೇಕು. ಇದರಿಂದ ಗ್ರಾಹಕ ತನಗೆ ಬೇಕಾದ ಒಂದು ಚಾನೆಲ್‌ ಪಡೆಯಲು ಇಡೀ ಗುಂಪನ್ನು ಅಥವಾ ಪ್ರೀಮಿಯಂ ಚಾನೆಲ್‌ಗ‌ಳ ಸಮೂಹವನ್ನು ಕೊಳ್ಳುವುದರಿಂದ ಪಾರಾಗಬಹುದು.

– ದೂರದರ್ಶನ, ಸ್ಟಾರ್‌ ಭಾರತ್‌, ಝೀ ಅನ್ಮೋಲ್‌ನಂಥ 100 ‘ಉಚಿತ’ ಚಾನೆಲ್‌ಗ‌ಳು ಗ್ರಾಹಕರಿಗೆ ಲಭ್ಯ. ಇದಕ್ಕೆ ಕೊಡಬೇಕಾದ ನಿರ್ವಹಣಾ ಮೊತ್ತ 130 ರೂ. 

–  ಪ್ರಸಾರ ಸಂಸ್ಥೆಗಳು ಪ್ರತಿ ಚಾನೆಲ್‌ಗೆ ಗರಿಷ್ಠ ಚಿಲ್ಲರೆ ದರ (ಎಂಆರ್‌ಪಿ) ನಿಗದಿ ಪಡಿಸುತ್ತವೆ. ಹಾಗಾಗಿ ವಿತರಕರು ಅದಕ್ಕಿಂತ ಹೆಚ್ಚಿನ ದರದಲ್ಲಿ ಮಾರಲು ಸಾಧ್ಯವಾಗದು.

100 : ಉಚಿತ ಚಾನೆಲ್‌ ; ತಿಂಗಳಿಗೆ 130 ರೂ.
19.7 ಕೋಟಿ : ಭಾರತದಲ್ಲಿ ಟಿವಿ ಇರುವ ಮನೆಗಳು
83.6 ಕೋಟಿ : ಭಾರತದಲ್ಲಿನ ಟಿವಿ ವೀಕ್ಷಕರ ಸಂಖ್ಯೆ
77% : ಪೇ ಚಾನೆಲ್‌ಗ‌ಳ ವೀಕ್ಷಕರ ಪ್ರಮಾಣ

Advertisement
Advertisement

Udayavani is now on Telegram. Click here to join our channel and stay updated with the latest news.

Next