Advertisement

ಚಾ.ನಗರ ಜಿಲ್ಲೆ 1ನೇ ವರ್ಗಕ್ಕೆ: ಬೆಳಿಗ್ಗೆ  6 ರಿಂದ ಸಂಜೆ 5ರವರೆಗೆ ಎಲ್ಲ ಅಂಗಡಿ ಓಪನ್

10:10 PM Jun 25, 2021 | Team Udayavani |

ಚಾಮರಾಜನಗರ: ಕೋವಿಡ್-19 ಸೋಂಕಿನ ಪ್ರಕರಣಗಳು ಇಳಿಕೆಯಾಗಿರುವ ಹಿನ್ನೆಲೆಯಲ್ಲಿ 1ನೇ ವರ್ಗದ ಮಾರ್ಗಸೂಚಿಗಳಿಗೆ ಒಳಪಡುವ ಜಿಲ್ಲೆಗಳ ಗುಂಪಿಗೆ ಚಾಮರಾಜನಗರವೂ ಸೇರ್ಪಡೆಗೊಂಡಿರುವುದರಿಂದ ಜೂ.25ರಿಂದ ಜು.5ರವರೆಗೆ ಜಿಲ್ಲೆಯಲ್ಲಿ ಬೆಳಿಗ್ಗೆ 6 ರಿಂದ ಸಂಜೆ 5ರವರೆಗೆ (ಹವಾ ನಿಯಂತ್ರಿತ ಅಂಗಡಿಗಳನ್ನು ಹೊರತುಪಡಿಸಿ) ಎಲ್ಲ ರೀತಿಯ ಅಂಗಡಿಗಳನ್ನೂ ತೆರೆದು ವಹಿವಾಟನ್ನು ನಡೆಸಲು ಅನುಮತಿ ನೀಡಿ ಆದೇಶ ಹೊರಡಿಸಲಾಗಿದೆ.

Advertisement

ಇದರೊಂದಿಗೆ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ. ಅಲ್ಲದೇ ಪ್ರತಿದಿನ ರಾತ್ರಿ 7 ಗಂಟೆಯಿಂದ ಬೆಳಿಗ್ಗೆ 5 ಗಂಟೆಯುವರೆಗೆ ರಾತ್ರಿ  ಕರ್ಫ್ಯೂ ಮುಂದುವರೆಯುತ್ತದೆ.  ಶುಕ್ರವಾರ ಸಂಜೆ 7 ಗಂಟೆಯಿಂದ ಸೋಮವಾರ ಬೆಳಿಗ್ಗೆ 5 ಗಂಟೆಯವರೆಗೆ ಅಗತ್ಯ ತುರ್ತು ಚಟುವಟಿಕೆಗಳನ್ನು ಹೊರತುಪಡಿಸಿ, ವಾರಾಂತ್ಯದ ಕರ್ಫ್ಯೂ ಮುಂದುವರೆಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next