Advertisement

ಹೊಸ ಸರಕಾರ ಪ್ರಸಾರ ಭಾರತಿಯ ಸ್ವಾಯತ್ತೆ ಉಳಿಸಿಕೊಳ್ಳಲಿದೆ: ಜಾವಡೇಕರ್‌

10:07 AM Jun 05, 2019 | Team Udayavani |

ಹೊಸದಿಲ್ಲಿ : ಕೇಂದ್ರದಲ್ಲಿನ ನೂತನ ಸರಕಾರ ಪ್ರಸಾರ ಭಾರತಿಯ ಸ್ವಾಯತ್ತೆಯನ್ನು ಉಳಿಸಿಕೊಳ್ಳಲಿದೆ ಎಂದು ವಾರ್ತಾ ಮತ್ತು ಪ್ರಸಾರ ಖಾತೆಯ ಸಚಿವ ಪ್ರಕಾಶ್‌ ಜಾವಡೇಕರ್‌ ಇಂದು ಸೋಮವಾರ ಹೇಳಿದರು.

Advertisement

ಇಲ್ಲಿನ ದೂರದರ್ಶನ ಭವನದಲ್ಲಿ ಅತ್ಯಾಧುನಿಕ ಹೈ ಡೆಫಿನಿಶನ್‌ ಡಿಎಸ್‌ಎನ್‌ಜಿ ವ್ಯಾನುಗಳನ್ನು ಚಾಲನೆಗೊಳಿಸಿದ ಅವರು ಪ್ರಸಾರ ಭಾರತಿಯ ಸ್ವಾಯತ್ತೆಯನ್ನು ಕಾಯಿದೆ ಮೂಲಕ ಖಾತರಿಪಡಿಕೊಳ್ಳಲಾಗಿದೆ ಎಂದು ಹೇಳಿದರು.

ಪ್ರಸಾರ ಭಾರತಿಯ ಸ್ವಾಯತ್ತೆಯು ಅತೀ ಮುಖ್ಯ; ನಾವದನ್ನು ಉಳಿಸಿಕೊಳ್ಳುತ್ತೇವೆ; ಪ್ರಸಾರ ಭಾರತಿ ಸುಲಲಿತವಾಗಿ ಕಾರ್ಯ ನಿರ್ವಹಿಸುವುದನ್ನು ನಾವು ಬಯಸುತ್ತೇವೆ ಮತ್ತು ಹೊಸ ಕಾರ್ಯಕ್ರಮಗಳ ಮೂಲಕ ಹೊಸ ಆಯಾಮವನ್ನು ಅದು ಕಂಡುಕೊಳ್ಳಬೇಕಿದೆ ಎಂದು ಜಾವಡೇಕರ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next