Advertisement

ಬಾದಾಮಿಗೆ ಮತ್ತೂಂದು ಕ್ಷೇತ್ರ ಕೊಡುಗೆ!

03:26 PM Mar 16, 2021 | Team Udayavani |

ಬಾಗಲಕೋಟೆ: ಜಿಲ್ಲೆಯಲ್ಲಿ ಅತಿಹೆಚ್ಚು ಜಿಪಂ ಕ್ಷೇತ್ರ ಹೊಂದಿರುವ ತಾಲೂಕುಗಳಲ್ಲಿ ಬಾದಾಮಿ ಕೂಡ ಒಂದು. ಅವಿಭಜಿತ ಬಾದಾಮಿ ತಾಲೂಕಿನಲ್ಲಿ ಈಮೊದಲು ಏಳು ಕ್ಷೇತ್ರಗಳಿದ್ದವು. ಅದರಲ್ಲಿ ಎರಡು ಕ್ಷೇತ್ರ ಗುಳೇದಗುಡ್ಡ ತಾಲೂಕಿಗೆ ಹಂಚಿಕೆಯಾದರೆ, ಐದು ಕ್ಷೇತ್ರಗಳು ಬಾದಾಮಿ ತಾಲೂಕಿನಲ್ಲಿ ಉಳಿಯಲಿದ್ದವು. ಆದರೆ, ಬಾದಾಮಿ ತಾಲೂಕು ಎರಡು ಕ್ಷೇತ್ರ ಕಳೆದುಕೊಂಡರೂ ಈ ಬಾರಿ ಆರು ಕ್ಷೇತ್ರಗಳನ್ನು ಹೊಂದಿದೆ. ಈ ಬಾರಿ ತಾಲೂಕಿನಲ್ಲಿ ಕರಡಿಗುಡ್ಡ ಎಸ್‌. ಎನ್‌. ಹೊಸ ಜಿಪಂ ಕ್ಷೇತ್ರದ ಸ್ಥಾನ ಪಡೆದುಕೊಂಡಿದೆ.

Advertisement

ಹೌದು, ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಸ್ಥಾನ ಪಡೆದ ಪಟ್ಟದಕಲ್ಲ, ಚಾಲುಕ್ಯ ಅರಸರ ರಾಜಧಾನಿ ಬಾದಾಮಿ, 12 ತಿಂಗಳೂ ಬತ್ತದ ಮಹಾಕೂಟ ಹೊಂಡ ಹೀಗೆಹಲವು ಐತಿಹಾಸಿಕ ಪ್ರವಾಸಿ ತಾಣ ಹೊಂದಿರುವ ಬಾದಾಮಿ ತಾಲೂಕಿನ ಆರು ಜಿ.ಪಂ. ಕ್ಷೇತ್ರಗಳು, ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿನಿಧಿಸುವ ಬಾದಾಮಿ ಹಾಗೂ ಗಣಿ ಮತ್ತು ಭೂ ವಿಜ್ಞಾನ ಖಾತೆ ಸಚಿವ ಮುರುಗೇಶ ನಿರಾಣಿ ಪ್ರತಿನಿಧಿಸುವ ಬೀಳಗಿ ವಿಧಾನಸಭೆ ಕ್ಷೇತ್ರದಡಿ ಹಂಚಿಕೆಯಾಗಲಿವೆ. ಮೊದಲಿದ್ದ 2 ಕ್ಷೇತ್ರದ ಹೆಸರು ಉಳಿಕೆ: ಈ ತಾಲೂಕಿನಲ್ಲಿ ಕಳೆದ ಬಾರಿ ಅನವಾಲ, ಹಂಸನೂರ, ಜಾಲಿಹಾಳ, ನಂದಿಕೇಶ್ವರ, ಮುಷ್ಠಿಗೇರಿ, ನೀಲಗುಂದ, ಕಟಗೇರಿ ಸೇರಿ ಒಟ್ಟು ಆರು ಜಿಪಂ ಕ್ಷೇತ್ರಗಳಿದ್ದವು. ಅದರಲ್ಲಿ ಹಂಸನೂರ ಮತ್ತು ಕಟಗೇರಿ, ಗುಳೇದಗುಡ್ಡ ತಾಲೂಕಿನಡಿ ಬರುತ್ತಿದ್ದವು. ಇದೀಗ ಗುಳೇದಗುಡ್ಡ ತಾಲೂಕಿನಲ್ಲೂ

ಹೊಸ ಕ್ಷೇತ್ರಗಳನ್ನು ರಚನೆ ಮಾಡುತ್ತಿದ್ದು, ಉಳಿದ ಐದು ಕ್ಷೇತ್ರಗಳನ್ನು ಪುನರ್‌ವಿಂಗಡಿಸಿ, ಆರು ಕ್ಷೇತ್ರಗಳನ್ನು ಹೊಸದಾಗಿ ರಚಿಸಲು ಪ್ರಸ್ತಾವನೆ ಸಲ್ಲಿಕೆಯಾಗಿದೆ.

16 ತಾಪಂ ಕ್ಷೇತ್ರಗಳು: ಕಳೆದ ಬಾರಿ ಗುಳೇದಗುಡ್ಡ ಹಾಗೂ ಬಾದಾಮಿ ಸೇರಿ ಬಾದಾಮಿ ತಾಲೂಕು ಪಂಚಾಯಿತಿ ಇತ್ತು. ಆಗ ಒಟ್ಟು 7 ಜಿಪಂ ಕ್ಷೇತ್ರಗಳು, 25 ತಾಪಂ ಕ್ಷೇತ್ರಗಳಿದ್ದವು. ಈ ಬಾರಿ ಗುಳೇದಗುಡ್ಡ ಪ್ರತ್ಯೇಕಗೊಂಡಿದ್ದು, ಬಾದಾಮಿ ತಾಲೂಕಿನಲ್ಲಿಯೇ ಈ ಬಾರಿ 6 ಜಿ.ಪಂ. ಕ್ಷೇತ್ರ ಹಾಗೂ 16 ತಾ.ಪಂ.ಕ್ಷೇತ್ರಗಳನ್ನು ಪುನರ್‌ವಿಂಗಡಣೆ ಮಾಡಲು ತಯಾರಿ ಮಾಡಿಕೊಳ್ಳಲಾಗಿದೆ.ಬಾದಾಮಿ ತಾಪಂ ವ್ಯಾಪ್ತಿಯಡಿಸೂಳಿಕೇರಿ, ಹಲಕುರ್ಕಿ, ಜಲಗೇರಿ,ನರೇನೂರ, ಉಗಲವಾಟ,ನೀರಲಕೇರಿ, ಕರಡಿಗುಡ್ಡ ಎಸ್‌.ಎನ್‌. ಖಾನಾಪುರ ಎಸ್‌. ಕೆ, ನರಸಾಪುರ, ಹೆಬ್ಬಳ್ಳಿ, ಮುತ್ತಲಗೇರಿ, ಬೇಲೂರ, ಜಾಲಿಹಾಳ, ಪಟ್ಟದಕಲ್ಲ, ನಂದಿಕೇಶ್ವರ, ಆಡಗಲ್ಲ ತಾಪಂ ಕ್ಷೇತ್ರಗಳಾಗಿ ಸ್ಥಾನ ಪಡೆಯಲಿವೆ.

ಪ್ರತಿಷ್ಠೆಯಾಗಲಿದೆ ಮೀಸಲಾತಿ: ಬಾದಾಮಿ ತಾಲೂಕಿನ ಆರು ಕ್ಷೇತ್ರಗಳಿಗೆ ಮೀಸಲಾತಿ ವಿಂಗಡಣೆ ಪ್ರತಿಷ್ಠೆಯಾಗಲಿದೆ ಎಂಬ ಮಾತು ಕೇಳಿ ಬರುತ್ತಿದೆ. ಈ ತಾಲೂಕಿನಿಂದ ಜಿಪಂಗೆ ಆಯ್ಕೆಯಾದವರಿಗೆ ಈವರೆಗೆ ಜಿಪಂ ಅಧ್ಯಕ್ಷ ಸ್ಥಾನ ಸಿಕ್ಕಿಲ್ಲ ಎಂಬ ಮಾತಿದೆ. ಹೀಗಾಗಿ ಈ ಬಾರಿ ಆಡಳಿತ ಪಕ್ಷ ಬಿಜೆಪಿ, ಈ ಕ್ಷೇತ್ರದಲ್ಲಿ ಅತಿಹೆಚ್ಚು ಸ್ಥಾನ ಗೆಲ್ಲಿಸಬೇಕೆಂಬ ಗುರಿ ಹಾಕಿಕೊಂಡಿದೆ. ಅದಕ್ಕೆ ಕಾರಣ, ಬಿಜೆಪಿ ಜಿಲ್ಲಾ ಅಧ್ಯಕ್ಷರು, ಸಂಸದರು ಇದೇ ತಾಲೂಕಿನವರು. ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕರೂ ಆಗಿರುವ ಮಾಜಿ ಸಿಎಂ ಸಿದ್ದರಾಮಯ್ಯ ಬಾದಾಮಿ ವಿಧಾನಸಭೆ ಪ್ರತಿನಿಧಿಸುತ್ತಿದ್ದಾರೆ. ಇಲ್ಲಿ ಬಿಜೆಪಿ ಅತಿ ಹೆಚ್ಚು ಸ್ಥಾನ ಗೆದ್ದು, ಬಿಜೆಪಿ ಪ್ರಾಬಲ್ಯ ತೋರಿಸುವ ಗುರಿ ಹಾಕಿಕೊಳ್ಳಲಾಗಿದೆ ಎಂಬ ಮಾತುಕೇಳಿ ಬರುತ್ತಿದೆ. ಆದರೆ, ಸಿದ್ದರಾಮಯ್ಯ ಶಾಸಕರಾದಬಳಿಕ, ಕ್ಷೇತ್ರದಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯ,ಹಿಂದೆಂದೂ ಕಾಣಿಸಿಲ್ಲ ಎಂಬುದು ದಿಟ. ಅವರಕ್ಷೇತ್ರದಲ್ಲಿ ಕಾಂಗ್ರೆಸ್‌ ಪ್ರಾಬಲ್ಯ ಮೆರೆಯಬೇಕು.ಅಷ್ಟೂ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು, ಕಾಂಗ್ರೆಸ್‌ ರಣತಂತ್ರ ರೂಪಿಸುತ್ತಿದೆ ಎನ್ನಲಾಗಿದೆ.

Advertisement

 ಹಲಕುರ್ಕಿ ಜಿ.ಪಂ. ಕ್ಷೇತ್ರ : ಈ ಕ್ಷೇತ್ರದಡಿ ಸೂಳಿಕೇರಿ, ಕಲಗೊಂಬ, ಕೆರಕಲಮಟ್ಟಿ, ಹೂಲಗೇರಿ, ಬಂದಕೇರಿ,ಯರಗೊಪ್ಪ ಇನಾಂ, ಅಗಸನಕೊಪ್ಪಲ,ಮಾಳಗಿ, ಹಲಕುರ್ಕಿ, ಮೇಲಿನ ಹಲಕುರ್ಕಿ, ಚಿಕ್ಕಮುಚ್ಚಳಗುಡ್ಡ, ಹಿರೇಮುಚ್ಚಳಗುಡ್ಡ, ಬೇಡರಬೂದಿಹಾಳ, ಹುಲ್ಲಿಕೇರಿ ಇನಾಂ, ಯಂಕಂಚಿ, ಮಣಿನಾಗರ, ಗುಬ್ಬೇರಕೊಪ್ಪ, ಮತ್ತಿಕಟ್ಟಿ, ಕಡಪಟ್ಟಿ ಎಸ್‌.ಕೆ

ಅಂದಾಜು ಮತದಾರರು: 28,142

ಜಲಗೇರಿ ಜಿ.ಪಂ. ಕ್ಷೇತ್ರ :

ನೀರಬೂದಿಹಾಳ, ಯಂಡಿಗೇರಿ, ಕರಡಿಗುಡ್ಡ ಎಸ್‌.ಎ,ಜಲಗೇರಿ (ಕೃಷ್ಣಾಪುರ),ಗಂಗನಬೂದಿಹಾಳ, ಅನವಾಲ, ಹನಮನೇರಿಇನಾಂ, ಕಲಬಂದಕೇರಿ, ಕೈನಕಟ್ಟಿ, ಕಾಡರಕೊಪ್ಪ,ಹೊಸಕೋಟಿ, ಶೀಪರಮಟ್ಟಿ, ಜಂಗವಾಡ,ಹವಳಖೋಡ, ಬೆಳ್ಳಿಖೀಂಡಿ, ಫಕೀರಬೂದಿಹಾಳ,ಹನಮನೇರಿ (ಸರಕಾರ), ಚಿಂಚಲಕಟ್ಟಿ, ಸಾಗನೂರ, ನರೇನೂರ.

ಅಂದಾಜು ಮತದಾರರು: 27,741

ಕರಡಿಗುಡ್ಡ ಎಸ್‌.ಎನ್‌ ಜಿ.ಪಂ. ಕ್ಷೇತ್ರ :

ಮಮಟಗೇರಿ, ಉಗಲವಾಟ, ಹಳಗೇರಿ, ತಪ್ಪಸಕಟ್ಟಿ,ಕಲ್ಲಾಪುರ ಎಸ್‌.ಕೆ,ನೀರಲಕೇರಿ, ರಡ್ಡೇರತಿಮ್ಮಾಪುರ, ಮುಷ್ಠಿಗೇರಿ,ಕರಡಿಗುಡ್ಡ ಎಸ್‌.ಎನ್‌. ಹನಮಸಾಗರ,ಕಾಕನೂರ, ಚಿಮ್ಮನಕಟ್ಟಿ, ಕರ್ಲಕೊಪ್ಪ, ಹಾಲಿಗೇರಿ, ಆಲೂರ ಎಸ್‌.ಕೆ, ಗೋವನಕೊಪ್ಪ,ಹಾಗನೂರ, ಬೀರನೂರ, ತಳಕವಾಡ.

ಅಂದಾಜು ಮತದಾರರು: 34,060

ನಂದಿಕೇಶ್ವರ ಜಿ.ಪಂ. ಕ್ಷೇತ :

ಸತತ 3ನೇ ಬಾರಿಯೂಈ ಕ್ಷೇತ್ರ ತನ್ನ ಸ್ಥಾನಉಳಿಸಿಕೊಂಡಿದ್ದು, ಈಕ್ಷೇತ್ರದಡಿ ನಂದಿಕೇಶ್ವರ, ನೆಲವಗಿ, ಗೋವಣಕಿ,ಮಂಗಳೂರ, ಶಿರಬಡಗಿ, ನವಿಲಹೊಳೆ,ಹಿರೇನಸಬಿ, ಗೋನಾಳ, ಪಟ್ಟದಕಲ್ಲ, ಬಾಚಿನಗುಡ್ಡ, ಬಿ.ಎನ್‌. ಜಾಲಿಹಾಳ, ಆಡಗಲ್ಲ,ಕಬ್ಬಲಗೇರಿ, ಕೆಂದೂರ, ಕುಟಕನಕೇರಿ.

ಅಂದಾಜು ಮತದಾರರು: 28,827

ಮುತ್ತಲಗೇರಿ ಜಿಪಂ ಕ್ಷೇತ್ರ :

ನೀಲಗುಂದಬಲದಾಗಿ ಹೊಸದಾಗಿ ರಚನೆಯಾಗಲಿರುವ ಮುತ್ತಲಗೇರಿ ಜಿಪಂ ವ್ಯಾಪ್ತಿಯಲ್ಲಿ ನೀಲಗುಂದ,ತಿಮ್ಮಾಪುರ ಎಸ್‌.ಎನ್‌, ಮುತ್ತಲಗೇರಿ, ಆಲದಕಟ್ಟಿ,ಯರಗೊಪ್ಪ ಎಸ್‌.ಬಿ., ಶಿವಪುರ, ಕಿತ್ತಲಿ, ಕಳಸ, ಸುಳ್ಳ, ನರಸಾಪುರ, ವಡವಟ್ಟಿ, ಬಂಕನೇರಿ, ಬೆಳವಲಕೊಪ್ಪ,ಕುಳಗೇರಿ ಕ್ರಾಸ್‌, ಖಾನಾಪುರ ಎಸ್‌.ಕೆ, ಚಿರ್ಲಕೊಪ್ಪ,ಸೋಮನಕೊಪ್ಪ, ಹೆಬ್ಬಳ್ಳಿ, ಲಖಮಾಪುರ, ಮಮರಡ್ಡಿಕೊಪ್ಪ, ಮಲ್ಲಾಪುರ ಎಸ್‌.ಎಲ್‌.

ಅಂದಾಜು ಮತದಾರರು: 36,581

ಜಾಲಿಹಾಳ ಜಿಪಂ ಕ್ಷೇತ್ರ :

ಈ ಕ್ಷೇತ್ರ ಈ ಬಾರಿಯೂ ಮುಂದುವರೆದಿದ್ದು,ಕ್ಷೇತ್ರದಡಿ ಕೆಲಹಳ್ಳಿಗಳ ಬದಲಾವಣೆ ಮಾಡಲಾಗಿದೆ.ಚೋಳಚಗುಡ್ಡ, ನಾಗರಾಳ ಎಸ್‌.ಬಿ, ಖ್ಯಾಡ,ಜಾಲಿಹಾಳ, ಹೊಸೂರ, ಗಿಡ್ಡನಾಯಕನಾಳ,ಗುಡ್ಡದಮಲ್ಲಾಪುರ, ನಸಗುನ್ನಿ, ಅನಂತಗಿರಿ,ಕಾತರಕಿ, ಜಕನೂರ, ಬೂದಿಹಾಳ, ನೀರಲಗಿ,ತಮಿನಾಳ, ಮಣ್ಣೇರಿ, ಚಿಕ್ಕನಸಬಿ, ಬೇಲೂರ, ಢಾಣಕಶಿರೂರ.

ಅಂದಾಜು ಮತದಾರರು: 32,153

 

-ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next