Advertisement

FASTag ಇಂದಿನಿಂದ ಫಾಸ್ಟಾಗ್‌ನ ಹೊಸ ನಿಯಮಗಳು ಜಾರಿ

11:43 PM Jul 31, 2024 | Team Udayavani |

ಹೊಸದಿಲ್ಲಿ: ಫಾಸ್ಟಾಗ್‌ ನಿಯಮ ಗಳಲ್ಲಿ ಕೆಲವು ಪ್ರಮುಖ ಬದಲಾವಣೆ ಗಳಾಗಿದ್ದು ಆ.1ರಿಂದ ನೂತನ ನಿಯಮಗಳು ಅನ್ವಯವಾಗಲಿವೆ. ಎಲ್ಲ ನಿಯಮ ಗಳನ್ನು ಅನುಸರಿಸಲು ಅಕ್ಟೋಬರ್‌ 31ರ ಗಡುವನ್ನು ಕೇಂದ್ರ ಸರಕಾರ ನೀಡಿದೆ.

Advertisement

ನೂತನ ನಿಯಮಗಳ ಪ್ರಕಾರ, 3 ಅಥವಾ 5 ವರ್ಷಗಳ ಹಿಂದೆ ನೀಡಿರುವ ಎಲ್ಲಾ ಫಾಸ್ಟಾಗ್‌ಗಳ ಕೆವೈಸಿ ಅನ್ನೂ ವಿತರಕ ಸಂಸ್ಥೆಗಳು ಅ.31ರ ಒಳಗಾಗಿ ಪೂರ್ಣಗೊಳಿಸಬೇಕು.

5 ವರ್ಷಕ್ಕಿಂತ ಹಳೆಯದಾದ ಫಾಸ್ಟಾಗ್‌ಗಳನ್ನು ಬದಲಿ ಸ ಬೇಕು. ಎಲ್ಲ ಫಾಸ್ಟಾಗ್‌ ಗಳಿಗೂ ವಾಹನಗಳ ನೋಂದಣಿ ನಂಬರ್‌, ಚಾಸ್ಸಿ ನಂಬರ್‌ ಲಿಂಕ್‌ ಆಗಿರ ಬೇಕು. ಹೊಸದಾಗಿ ವಾಹನ ಖರೀದಿ ಸಿದವರೂ 90 ದಿನಗಳ ಒಳಗೆ ಫಾಸ್ಟಾಗ್‌ಗೆ ನೋಂದಣಿ ಸಂಖ್ಯೆ ಲಿಂಕ್‌ ಮಾಡ ಬೇಕು. ಎಲ್ಲ ಫಾಸ್ಟಾಗ್‌ಗಳಿಗೂ ಮೊಬೈಲ್‌ ನಂಬರ್‌ ಲಿಂಕ್‌ ಮಾಡು ವುದು ಕಡ್ಡಾಯವಾಗಿದೆ.

ವಿತರಕರು ತಮ್ಮೆಲ್ಲÉ ದತ್ತಾಂಶಗಳನ್ನು ಪರಿಶೀಲಿಸಿ ಅಪ್‌ಡೇಟ್‌ ಮಾಡಬೇಕಿದೆ. ಜತೆಗೆ ಫಾಸ್ಟ್‌ ಟ್ಯಾಗ್‌ ಅಳವಡಿಸಿರುವ ಪ್ರತಿಯೊಂದು ವಾಹನದ ಫ್ರಂಟ್‌ ಮತ್ತು ಸೈಡ್‌ನ‌ ಸ್ಪಷ್ಟ ಫೋಟೋಗಳನ್ನೂ ಅಪ್‌ಲೋಡ್‌ ಮಾಡಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next