Advertisement

ಉತ್ತರ ಪ್ರದೇಶ: ಹಳಿ ತಪ್ಪಿದ ರೈಲು;ಕನಿಷ್ಠ 7 ಮಂದಿ ಪ್ರಯಾಣಿಕರು ಸಾವು

09:16 AM Oct 10, 2018 | Team Udayavani |

ರಾಯ್‌ ಬರೇಲಿ : ದೆಹಲಿ -ಮಾಲ್ಡಾ ನಡುವೆ ಸಂಚರಿಸುವ ನ್ಯೂ ಫ‌ರಕ್ಕಾ ಎಕ್ಸ್‌ಪ್ರೆಸ್‌ ರೈಲು ಬುಧವಾರ ಬೆಳಗ್ಗೆ  ಹಳಿ ತಪ್ಪಿದ್ದು ಕನಿಷ್ಠ 7 ಮಂದಿ ಪ್ರಯಾಣಿಕರು ಸಾವನ್ನಪ್ಪಿದ್ದು 21 ಕ್ಕೂ ಹೆಚ್ಚು  ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

Advertisement

ಬೆಳಗ್ಗೆ 6 ಗಂಟೆಯ ವೇಳೆಗೆ ರೈಲಿನ ಇಂಜಿನ್‌ ಮತ್ತು 6 ಬೋಗಿಗಳು ಹಳಿ ತಪ್ಪಿವೆ ಎಂದು ವರದಿಯಾಗಿದೆ.

ಸ್ಥಳಕ್ಕೆ ಎನ್‌ಡಿಆರ್‌ಎಫ್ ಪಡೆ ದೌಡಾಯಿಸಿದ್ದು ರಕ್ಷಣಾ ಕಾರ್ಯನಡೆಸಿದೆ. 

ಕೇಂದ್ರ ರೈಲ್ವೇ ಸಚಿವ ಪಿಯೂಷ್‌ ಗೋಯಲ್‌ ಅವರು ಮೃತರಿಗೆ ತಲಾ 5 ಲಕ್ಷ ರೂಪಾಯಿ  ಮತ್ತು ಗಾಯಾಳುಗಳಿಗೆ ತಲಾ 1 ಲಕ್ಷ ರೂಪಾಯಿ ಪರಿಹಾರ ಧನವನ್ನು ಘೋಷಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next