Advertisement

Murdeshwar-Bengaluru ನೂತನ ಎಕ್ಸಪ್ರೆಸ್ ರೈಲಿಗೆ ಚಾಲನೆ

10:51 PM Sep 17, 2023 | Team Udayavani |

ಭಟ್ಕಳ: ದೇಶದ ಪ್ರಮುಖ ಪ್ರವಾಸಿ ತಾಣವಾದ ಮುರ್ಡೇಶ್ವರದಿಂದ ಮೈಸೂರು ಮಾರ್ಗವಾಗಿ ಬೆಂಗಳೂರಿಗೆ ನೂತನ ಎಕ್ಸ್ ಪ್ರೆಸ್ ರೈಲಿಗೆ ಸೆ.17 ರಂದು ಚಾಲನೆ ನೀಡಲಾಯಿತು.

Advertisement

ಕೊಂಕಣ ರೈಲ್ವೆಯ ಅಧಿಕಾರಿಗಳು ನೀಡಿದ ಮಾಹಿತಿಯಂತೆ ರೈಲು ಬೆಂಗಳೂರು ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ನಿಂದ ಮೈಸೂರು ಮೂಲಕ ಮಂಗಳೂರು ಸೆಂಟ್ರಲ್ ಟರ್ಮಿನಲ್‌ಗೆ ಸಂಚರಿಸುತ್ತಿದ್ದ ರೈಲು ಸಂಖ್ಯೆ 16585 ನ್ನು ಈಗ ಮುರ್ಡೇಶ್ವರಕ್ಕೆ ವಿಸ್ತರಿಸಲಾಗಿದ್ದು ವಾರದಲ್ಲಿ ಏಳು ದಿನವೂ ಚಲಿಸುತ್ತದೆ.

ಈ ಹಿಂದೆ ಮಂಗಳೂರು ಸೆಂಟ್ರಲ್‌ನಿಂದ ಬೆಂಗಳೂರಿಗೆ ಹೊಗುತ್ತಿದ್ದಎಕ್ಸ್ ಪ್ರೆಸ್ ರೈಲು ಸಂಖ್ಯೆ 16586 ಇಂದಿನಿಂದ ಮುರ್ಡೇಶ್ವರದಿಂದ ತನ್ನ ಪ್ರಯಾಣವನ್ನು ಆರಂಭಿಸಿದೆ. ನಿಗದಿತ ವೇಳಾಪಟ್ಟಿಯಂತೆ ರೈಲು ಸಂಖ್ಯೆ 16585 ಬೆಂಗಳೂರಿನ ಸರ್ ವಿಶ್ವೇಶ್ವರಯ್ಯ ಟರ್ಮಿನಲ್‌ನಿಂದ ರಾತ್ರಿ 8:15 ಕ್ಕೆ ಹೊರಟು ಮಧ್ಯಾಹ್ನ 1 ಗಂಟೆಗೆ ಮುರ್ಡೇಶ್ವರ ತಲುಪುತ್ತದೆ

ಅದೇ ರೀತಿ ಎಕ್ಸ್ಪ್ರೆಸ್ ರೈಲು ಸಂಖ್ಯೆ 16586 ಮುರ್ಡೇಶ್ವರದಿಂದ ಮಧ್ಯಾಹ್ನ2:10 ಕ್ಕೆ ಹೊರಟು ಭಟ್ಕಳ, ಕುಂದಾಪುರ, ಉಡುಪಿ, ಸುರತ್ಕಲ್ ಬಿಟ್ಟು 6 ಕ್ಕೆ ಮಂಗಳೂರು ತಲುಪಲಿದೆ. ಮಂಗಳೂರಿನಿಂದ ಸಂಜೆ 6:35 ಕ್ಕೆ ಹೊರಡಲಿದ್ದು, ಮರುದಿನ ಬೆಳಗ್ಗೆ 3:15 ಕ್ಕೆ ಮೈಸೂರಿಗೆ ಆಗಮಿಸಿ ಬೆಳಗ್ಗೆ 7:15 ಕ್ಕೆ ಬೆಂಗಳೂರು ತಲುಪಲಿದೆ.

ಈ ರೈಲು ಮೊದಲಿನಂತೆ ಪಡೀಲ್ ಮತ್ತು ಮೈಸೂರಿನಲ್ಲಿ ನಿಲುಗಡೆ ಮಾಡುವುದನ್ನು ಮುಂದುವರಿಸುತ್ತಿದ್ದು ಹೆಚ್ಚುವರಿಯಾಗಿ ಸುರತ್ಕಲ್, ಮುಲ್ಕಿ, ಉಡುಪಿ, ಬಾರ್ಕೂರು, ಕುಂದಾಪುರ, ಬೈಂದೂರು ಮತ್ತು ಭಟ್ಕಳದಲ್ಲಿ ನಿಲುಗಡೆ ನೀಡಲಾಗಿದೆ ಎಂದೂ ತಿಳಿಸಲಾಗಿದೆ.

Advertisement

ಮುರ್ಡೇಶ್ವರ ರೈಲು ನಿಲ್ದಾಣದಲ್ಲಿ ನೂತನ ರೈಲಿಗೆ ಪೂಜೆ ಸಲ್ಲಿಸಿ ಉದ್ಘಾಟಿಸಲಾಯಿತು. ಉದ್ಘಾಟನಾ ಸಂದರ್ಭದಲ್ಲಿ ಕುಂದಾಪುರ ರೈಲ್ವೇ ಹಿತರಕ್ಷಣಾ ಸಲಹಾ ಸಮಿತಿ ಅಧ್ಯಕ್ಷ ಗಣೇಶ ಪುತ್ರನ್, ಗೌತಮ್, ವಿವೇಕ ನಾಯ್ಕ್, ಉತ್ತರ ಕನ್ನಡ ರೈಲ್ವೆ ಸಮಿತಿ ಅಧ್ಯಕ್ಷ ರಾಜು ಗಾಂವ್ಕರ್, ಸದಸ್ಯ ಜಾರ್ಜ್ ಫರ್ನಾಂಡೀಸ್, ಎಸ್.ಎಸ್. ಕಾಮತ್, ಶಂಕರ್ ದೇವಾಡಿಗ, ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next