Advertisement
ಮಗನಿಗೆ ಸೋನಿಯಾ ಗಾಂಧಿ ಅವರು ಅಧಿಕಾರವನ್ನು ಹಸ್ತಾಂತರಿಸುವ ಮೂಲಕ ನೆಹರೂ ಕುಟುಂಬದ 6ನೇ ವ್ಯಕ್ತಿ ರಾಹುಲ್ ಗಾಂಧಿ ಪಕ್ಷದ ಸಾರಥ್ಯ ವಹಿಸಿಕೊಂಡಂತಾಗಿದೆ.
Related Articles
Advertisement
ಎಐಸಿಸಿ ಅಧ್ಯಕ್ಷರಾಗಿ ರಾಹುಲ್ ಗಾಂಧಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಪಕ್ಷದ ಕೇಂದ್ರ ಕಚೇರಿ ಸೇರಿದಂತೆ ಎಲ್ಲೆಡೆ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ಅಧ್ಯಕ್ಷೆಯಾಗಿ ಇದು ನನ್ನ ಕೊನೆಯ ಭಾಷಣ:ಸೋನಿಯಾ ಗಾಂಧಿ
ನಾನು ಅಧ್ಯಕ್ಷೆಯಾದ ಸಂದರ್ಭದಲ್ಲಿ ತುಂಬಾ ಕಠಿಣ ಸವಾಲುಗಳಿದ್ದವು, ಕಾಂಗ್ರೆಸ್ ದುರ್ಬಲವಾಗಿದ್ದಾಗ ನಾನು ಅಧ್ಯಕ್ಷೆಯಾಗಿದ್ದೆ. ಇಂದಿರಾಜಿ ನನ್ನ ಮಗಳಂತೆ ಕಂಡಿದ್ದರು. ಭಾರತೀಯ ಸಂಸ್ಕೃತಿಯನ್ನು ಇಂದಿರಾಜಿ ನನಗೆ ಕಲಿಸಿದರು. ಅದರಂತೆ ಇಂದಿರಾ ಹತ್ಯೆಯಾದಾಗ ತಾಯಿಯನ್ನು ಕಳೆದುಕೊಂಡ ಅನುಭವವಾಗಿತ್ತು ಎಂದು ಸೋನಿಯಾ ಗಾಂಧಿ ಹೇಳಿದರು.
ಪುತ್ರ ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಹಿನ್ನೆಲೆಯಲ್ಲಿ ಸಭೆಯನ್ನು ಉದ್ದೇಶಿಸಿ ನಿರ್ಗಮನ ಅಧ್ಯಕ್ಷೀಯ ಭಾಷಣ ಮಾಡಿದ ಅವರು, ನೂತನವಾಗಿ ಅಧಿಕಾರ ವಹಿಸಿಕೊಂಡ ರಾಹುಲ್ ಗೆ ಅಭಿನಂದನೆ ಮತ್ತು ಸದಾ ಆಶೀರ್ವಾದ ಇದೆ ಎಂದರು.
ರಾಜೀವ್ ಗಾಂಧಿ ವಿವಾಹದ ಬಳಿಕ ನನಗೆ ರಾಜಕೀಯದ ಪರಿಚಯವಾಯಿತು. ನಾನು ಗಂಡ, ಮಕ್ಕಳನ್ನು ರಾಜಕೀಯವಾಗಿ ದೂರ ಇಡಲು ಬಯಸಿದ್ದೆ. ಆದರೆ ವಿಧಿಯಾಟ ಎಂಬಂತೆ ಎಲ್ಲವೂ ನಡೆದು ಹೋಯಿತು ಎಂದು ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.