ಚೈತನ್ಯ ತುಂಬುವ ಕೆಲಸ ಸದ್ದಿಲ್ಲದೆ ಆರಂಭಗೊಂಡಿದೆ. ಜಿಲ್ಲೆಯ ಸಾಂಪ್ರದಾಯಿಕ ಬೆಳೆ ಭತ್ತ ಮತ್ತು ಕಬ್ಬಿಗೆ
ನೀರು ಹವಣಿಸಲಾಗದೆ, ರೈತರು ತೆಂಗು ಬೆಳೆಯತ್ತ ಒಲವು ತೋರುತ್ತಿದ್ದಾರೆ.
Advertisement
ತೋಟಗಾರಿಕಾ ಇಲಾಖೆಯೂ ಇದಕ್ಕೆ ಉತ್ತೇಜನ ನೀಡಲು ತೆಂಗು ಸಸಿಗಳನ್ನು ಕಡಿಮೆ ಬೆಲೆಯಲ್ಲಿ ನೀಡಲು ಮುಂದಾಗಿದೆ. ತೆಂಗು ಬೆಳೆಗೆ ಬೇಡಿಕೆ ಹೆಚ್ಚಿರುವುದನ್ನುಮನಗಂಡ ತೋಟಗಾರಿಕೆ ಇಲಾಖೆ ಪ್ರಸ್ತುತ ವಿವಿಧ ಫಾರಂಗಳಲ್ಲಿ 2.50 ಲಕ್ಷ ದಿಂದ 3 ಲಕ್ಷದವರೆಗೆ ತೆಂಗು ಬಿತ್ತನೆ ನಡೆಸಿದೆ. ಇದರಲ್ಲಿ 1 ಲಕ್ಷ ಸಸಿಗಳನ್ನು ಮಾರಾಟ ಮಾಡಲಾಗಿದ್ದು, ಇನ್ನೂ 1.75 ಲಕ್ಷ ಸಸಿಗಳು ಮಾರಾಟಕ್ಕಿವೆ.
ತೆಂಗಿನ ಸಸಿಗಳನ್ನು ಬೆಳೆಸಿದ್ದು, ಅವುಗಳನ್ನು ಶೇ. 40 ರಿಂದ 100 ರಿಯಾಯ್ತಿ ದರದಲ್ಲಿ ರೈತರಿಗೆ ವಿತರಿಸಲಾಗು ತ್ತಿದೆ. ನಾಟಿ ತಳಿ ಮತ್ತು ಹೈಬ್ರೀಡ್ ತಳಿಗಳ ಸಸಿಗಳು ಮಾರಾಟಕ್ಕೆ ಲಭ್ಯವಿದ್ದು, ಅವುಗಳನ್ನು ರೈತರು ತೆಗೆದುಕೊ ಳ್ಳಬಹುದು. ನಾಟಿ ತಳಿಯ ಸಸಿಗಳಿಗೆ ಪ್ರತಿಯೊಂದಕ್ಕೆ 50 ರೂ., ಅದನ್ನು ಪಹಣಿ ಮತ್ತಿತರ ದಾಖಲೆಗಳನ್ನು ನೀಡಿ ದಲ್ಲಿ 52 ರೂ.ಗಳನ್ನು ಹಿಂದಿರುಗಿಸಲಾಗುವುದು. ಅದೇ ರೀತಿ ಹೈಬ್ರಿàಡ್ ತಳಿಯ ಸಸಿಗಳು 150 ರೂ. ದರದಲ್ಲಿ ದೊರೆಯಲಿದ್ದು, ಶೇ. 40ರಷ್ಟು ರಿಯಾಯಿತಿ ಇದೆ. ಹೈಬ್ರೀಡ್ 4 ವರ್ಷಕ್ಕೆ ಫಲ: ನಾಟಿ ತಳಿಯ ಸಸಿಗಳು 6 ರಿಂದ 7 ವರ್ಷಗಳಲ್ಲಿ ಫಲ ನೀಡಿದರೆ, ಹೈಬ್ರೀಡ್ ತಳಿ
ಸಸಿಗಳು ಕೇವಲ 4 ವರ್ಷಗಳಲ್ಲಿ ಫಲ ನೀಡುತ್ತವೆ. ಸಾಂಪ್ರದಾಯಿಕ ತಿಪಟೂರು ಮತ್ತು ಹೈಬ್ರೀಡ್ ಮಾದರಿಯ ತಳಿಗಳನ್ನು ಸಸಿ ಮಾಡಿ ಹೈಬ್ರೀಡ್ ಸಸಿಗಳನ್ನು ಬೆಳೆಸಲಾಗಿದೆ. ಇಲಾಖೆಯ ಪರಿಣಿತರು ಮತ್ತು ವಿ.ಸಿ. ಫಾರಂನ ತೋಟಗಾರಿಕೆ ವಿಜ್ಞಾನಿಗಳು ಕಾಯಿಗಳನ್ನು ಆಯ್ಕೆ ಮಾಡುತ್ತಾರೆ. ಪರಿಣಿತರ ಸಹಾಯದಿಂದ ಪ್ರಗತಿಪರ ರೈತರ ತೋಟಗಳಿಂದಲೂ ಸಸಿಗಳನ್ನು ಉತ್ಪಾದಿಸುವ ಕಾರ್ಯ ನಡೆದಿದೆ.
Related Articles
ಸಾವಿರಕ್ಕೂ ಹೆಚ್ಚು ತೆಂಗಿನ ಮರಗಳು ಜಿಲ್ಲೆಯಲ್ಲಿ ಬಲಿ ತೆಗೆದುಕೊಂಡಿದೆ. ಮತ್ತೂಂದೆಡೆ ಜಿಲ್ಲೆಯಲ್ಲಿ ಶೇ.30ಕ್ಕೂ
ತೆಂಗಿನ ಮರಗಳು ವಯಸ್ಸಾಗಿವೆ. ಇನ್ನೊಂದೆಡೆ ಪೆನ್ಸಿಲ್ ಕಟ್ ಇತರ ರೋಗಬಾಧೆಯೂ ಕಾಡುತ್ತಿದೆ.
Advertisement
ಬೆಳೆ ಪದ್ಧತಿ ಬದಲಾವಣೆ: ನಾಲ್ಕು ವರ್ಷಗಳಿಂದ ಮುಂಗಾರು ಕಣ್ಣಾಮುಚ್ಚಾಲೆ, 2014ರ ನಂತರ ಕೆರೆ,ತೊರೆಗಳಲ್ಲಿ ನೀರಿಲ್ಲದಿರುವುದು, ಮಳೆ ಕೊರತೆ, ಕಾವೇರಿ ವಿವಾದದಿಂದ ರೈತರು ಬೇಸಿಗೆ ಬೆಳೆ ಬೆಳದಿಲ್ಲ. ಭತ್ತ,ಕಬ್ಬಿಗೆ ಹೆಚ್ಚು ನೀರು ಬೇಕಾಗುವುದರಿಂದ ನೀರಿಗೂ ತೊಂದರೆಯಾಗಿದೆ. ಅಲ್ಲದೆ ಏಷ್ಯಾದಲ್ಲಿಯೇ ಮಂಡ್ಯದ ಎಳನೀರಿಗೆ ಉತ್ತಮ ಮಾರುಕಟ್ಟೆಯಿರುವುದರಿಂದ ತೆಂಗು ಕೃಷಿಗೆ ತೋಟಗಾರಿಕಾ ಇಲಾಖೆ ಸಹಾಯಹಸ್ತ ನೀಡಿದೆ. ಸಸಿಗಳು ಎಲ್ಲೆಲ್ಲಿ ಲಭ್ಯ ಮಂಡ್ಯ ಫಾರಂ (13,662 ಸಸಿಗಳು), ಪುರ (32,367),ದುದ್ದ (11,939), ಪೂರಿಗಾಲಿ (16,500), ಮದ್ದೂರು(6,735), ಮಲ್ಲಸಂದ್ರ ಕಾವಲ್ (10,494), ಜವರನಹಳ್ಳಿ (13,959),ಹಳೇಬೀಡು (8,403), ಶ್ರೀರಂಗಪಟ್ಟಣ (3,678), ಗಾಮನಹಳ್ಳಿ (10,050) ಮುರುಕನಹಳ್ಳಿ ಫಾರಂ (11,550 ಸಸಿಗಳು). ಈ ಸ್ಥಳಗಳಲ್ಲಿರುವ ನರ್ಸರಿಗಳಲ್ಲಿ ಸಸಿಗಳು ಲಭ್ಯವಿದೆ. ಜಿಲ್ಲೆಯ ರೈತರು ತೆಂಗು ಬೆಳೆಯುತ್ತ ಆಕರ್ಷಿತರಾಗುತ್ತಿರುವುದು ನಿಜ. ಈಗಾಗಲೇ 1 ಲಕ್ಷ ಸಸಿಗಳನ್ನು ಮಾರಾಟ ಮಾಡಿದ್ದು, ಇನ್ನೂ 1.50 ಲಕ್ಷ ಸಸಿಗಳು ನಮ್ಮಲ್ಲಿವೆ. ವಾಣಿಜ್ಯ ಬೆಳೆ ತೆಂಗಿಗೆ ಹೆಚ್ಚಿನ ಉತ್ತೇಜನ ನೀಡುತ್ತಿದ್ದೇವೆ. ರೈತರೂ ಆದ್ಯತೆ ನೀಡುತ್ತಿದ್ದಾರೆ.
– ರಾಜು, ಉಪ ನಿರ್ದೇಶಕ, ತೋಟಗಾರಿಕೆ ಇಲಾಖೆ ಮಂಡ್ಯ ಮಂಜುನಾಥ್