ಬೆಂಗಳೂರು : ರಾಜ್ಯದಲ್ಲಿ ಜಾರಿಗೆ ತಂದಿರುವ ಹೊಸ ಶಿಕ್ಷಣ ನೀತಿಯ ಮೂಲಕ ಭಾರತವನ್ನು ಮತ್ತಷ್ಟು ಬಲಗೊಳಿಸಲು ಬ್ರಿಟಿಷ್ ಕೌನ್ಸಿಲ್ ನೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಾ.ಅಶ್ವತ್ಥ ನಾರಾಯಣ ಹೇಳಿದ್ದಾರೆ.
ಬ್ರಿಟಿಷ್ ಕೌನ್ಸಿಲ್ ಜೊತೆಗೆ ಕರ್ನಾಟಕ ರಾಜ್ಯ ಸರ್ಕಾರದ ಒಪ್ಪಂದ ಮಾಡಿಕೊಂಡ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಉಪ ಮುಖ್ಯಮಂತ್ರಿಗಳು ಹೊಸ ಶಿಕ್ಷಣ ನೀತಿಯ ಪ್ರಕಾರ ಒಪ್ಪಂದ ಮಾಡಿಕೊಂಡಿದ್ದು,ಉನ್ನತ ಶಿಕ್ಷಣ, ಸಂಶೋಧನೆಯಲ್ಲಿ ಹೆಚ್ಚಿನ ಆದ್ಯತೆ ನೀಡಲಾಗುವುದು. ಎರಡೂ ರಾಷ್ಟ್ರಗಳು ಸೇರಿ ಸಂವಾದ, ತಜ್ಞರ ಜೊತೆ ಚರ್ಚೆ ಮಾಡುವ ಮೂಲಕ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ನೀಲ ನಕ್ಷೆ ಸಿದ್ದಪಡಿಸಲಾಗುವುದು. ಇಂಗ್ಲಿಷ್ ಭಾಷೆಯ ಕಲಿಕೆಗೆ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲು ಯೋಜನೆ ರೂಪಿಸಲಾಗುವುದು ಎಂದು ತಿಳಿಸಿದರು.
ಸಂಶೋಧನೆ, ನಾವಿಣ್ಯತೆ ತರಲು ಪ್ರಾವೀಣ್ಯತೆ ಪಡೆದಿರುವ ಸಂಸ್ಥೆಗಳ ಸಹಕಾರ ಪಡೆಯಲಾಗುವುದು. ಇದು ಎರಡೂ ರಾಷ್ಟ್ರಗಳ ಸಂಬಂಧ ಬಲಗೊಳಿಸುತ್ತದೆ. ವಿದ್ಯಾರ್ಥಿಗಳಿಗೆ ಕಾಂಬಿನೇಷನ್ ಆಯ್ಕೆಗೆ ಹೆಚ್ಚಿನ ಅವಕಾಶ ಕಲ್ಪಿಸಲಾಗುವುದು. ಕ್ರಿಯೆಟಿವ್ ಲರ್ನಿಂಗ್, ಕ್ರಿಟಿಕಲ್ ಲರ್ನಿಂಗ್, ಸೋಸಿಯಲ್ ಲರ್ನಿಂಗ್ ಎಲ್ಲದರ ಬಗ್ಗೆಯೂ ವಿನಿಮಯ ಮಾಡಿಕೊಳ್ಳಲಾಗುವುದು. ಸಂಪನ್ಮೂಲವನ್ನು ಸರಿಯಾಗಿ ಬಳಕೆ ಮಾಡಿಕೊಳ್ಳಲಾಗುವುದು. ಇದಕ್ಕೆ ಹೆಚ್ಚಿನ ಹಣದ ಅವಶ್ಯಕತೆ ಇಲ್ಲ ಎಂದಿದ್ದಾರೆ.
ಇದನ್ನೂ ಓದಿ:ಬಿಜೆಪಿ ಹಿರಿಯ ಮುಖಂಡ, ಗೋಂಡಾ ಕ್ಷೇತ್ರದ ಮಾಜಿ ಸಂಸದ ಸತ್ಯದೇವ್ ಕೋವಿಡ್ ನಿಂದ ಸಾವು
ಡಿಗ್ರಿ ಕಾಲೇಜುಗಳಿಗೆ ವಿವಿ ಮಾನ್ಯತೆ ನೀಡಲಾಗುವುದು. ಕಾಲಕ್ಕೆ ತಕ್ಕಂತೆ ವಿದ್ಯಾರ್ಥಿಗಳು ಬದಲಾಗುವಂತೆ ಮಾಡಲಾಗುವುದು. ಗುಣಮಟ್ಟ ಕೆಲವೇ ಶಿಕ್ಷಣ ಸಂಸ್ಥೆಗಳಿಗೆ ಮೀಸಲಾಗಿರುವುದನ್ನು ಎಲ್ಲ ಸಂಸ್ಥೆಗಳಿಗೂ ದೊರೆಯುವಂತೆ ಮಾಡಲಾಗುವುದು ಎಂದರು.