ಪ್ರಸಕ್ತ ಸಾಲಿನಿಂದಲೇ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಅನುಷ್ಠಾನಕ್ಕೆ ಸರಕಾರ ನಿರ್ಧ ರಿ ಸಿದೆ. ಈ ಸಂಬಂಧ ರಾಜ್ಯದ ವಿವಿಧ ವಿಶ್ವವಿದ್ಯಾನಿಲಯಗಳು ಮಾಡಿ ಕೊಂಡಿ ರುವ ಸಿದ್ಧತೆ, ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರಲ್ಲಿರುವ ಗೊಂದಲ ನಿವಾರಣೆಗೆ ತೆಗೆದುಕೊಂಡ ಕ್ರಮಗಳು, ಪಠ್ಯ ಕ್ರ ಮ ದ ಲ್ಲಿನ ಹೊಸ ವಿಷಯಗಳ ಕುರಿ ತು “ಉದಯವಾಣಿ’ ಮುಂದಿಟ್ಟಿರುವ ಪಂಚಪ್ರಶ್ನೆಗಳಿಗೆ ಕುಲಪತಿಗಳ ಉತ್ತರ ಇಲ್ಲಿದೆ..
ಯಾವುದೇ ರೀತಿಯ ಗೊಂದಲ ಇಲ್ಲ:
ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ವ್ಯಾಪ್ತಿಯ ಎಲ್ಲ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಎನ್‌ಇಪಿ ಜಾರಿಗೆ ಸಂಪೂರ್ಣ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸಿಇಟಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಹೊಸ ಶಿಕ್ಷಣ ನೀತಿಯ ಪಠ್ಯಕ್ರಮ ಬೋಧಿಸಲಾಗುತ್ತದೆ.
ವಿಟಿಯು ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಗೊಂದಲ ಇಲ್ಲ. ಹೊಸದಾಗಿ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಎಲ್ಲ ಕಾಲೇಜುಗಳಲ್ಲಿ ಸ್ವಾಗತ ಸಮಾರಂಭ ಮಾಡುತ್ತಾರೆ. ಈ ಕಾರ್ಯಕ್ರಮದಲ್ಲಿ ಎನ್‌ಇಪಿ ಕುರಿತು ಮಾಹಿತಿ ನೀಡಲಾಗುವುದಲ್ಲದೆ ವಿದ್ಯಾರ್ಥಿಗಳಿಗೆ ಅಗತ್ಯ ತರಬೇತಿ ಸಹ ದೊರೆಯಲಿದೆ. ಇನ್ನು ಉಪನ್ಯಾಸಕರು ಈಗಾಗಲೇ ಕಾರ್ಯಾಗಾರ, ವಿಚಾರ ಸಂಕಿರಣ, ಚರ್ಚಾಗೋಷ್ಠಿ, ಸಂವಾದಗಳ ಮೂಲಕ ತರಬೇತಿ ಪಡೆದಿದ್ದಾರೆ.
ಖಂಡಿತಾ ಮಹತ್ತರ ಬದಲಾವಣೆ ಮಾಡುತ್ತಿದ್ದೇವೆ. ಜ್ಞಾನ, ಕೌಶಲ, ಸ್ಪರ್ಧಾತ್ಮಕ ಮನೋಭಾವ ಈ ಮೂರೂ ಅಂಶಗಳನ್ನೊಳಗೊಂಡಂತೆ ಎನ್‌ಇಪಿ ಪಠ್ಯಕ್ರಮ ಅಳವಡಿಸಲಾಗುತ್ತದೆ. ಎಂಜಿನಿಯರಿಂಗ್ ಕಾಲೇಜುಗಳು ಮತ್ತು ಕೈಗಾರಿಕೆಗಳ ನಡುವೆ ಇರುವ ಸಂಪರ್ಕದ ಅಂತರ ಕಡಿಮೆಯಾಗಲಿದೆ.
ಎನ್‌ಇಪಿಯಿಂದ ಉನ್ನತ ಶಿಕ್ಷಣದ ಗುಣಮಟ್ಟದಲ್ಲಿ ಖಂಡಿತಾ ಸುಧಾರಣೆ ಯಾಗಲಿದೆ. ಮುಖ್ಯವಾಗಿ ಬಹು ಕೌಶಲದ ಅಭಿವೃದ್ಧಿಯಾಗಲಿದೆ. ಎಲ್ಲ ಕಾಲೇಜುಗಳಲ್ಲಿ ಗುಣಮಟ್ಟದ ಶಿಕ್ಷಣ ಕೊಡಲು ಅನುಕೂಲ ವಾಗುವಂತೆ ಪ್ರತ್ಯೇಕ ಆಂತರಿಕ ಸೆಲ್ ತೆರೆಯಲಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳ, ಉಪನ್ಯಾಸಕರ ಶಿಕ್ಷಣ ಗುಣಮಟ್ಟ ಗಣನೀಯವಾಗಿ ಸುಧಾರಣೆ ಕಾಣಲಿದೆ. ಎಂಜಿನಿಯರಿಂಗ್ ಕಾಲೇಜ್‌ಗಳಲ್ಲಿ ಉಪನ್ಯಾಸಕರ ಕೊರತೆ ಇಲ್ಲ.
ಎಂಜಿನಿಯರಿಂಗ್‌ದಲ್ಲಿ ಡ್ರಾಪ್‌ಔಟ್ ಆಗುವ ಸಾಧ್ಯತೆ ಬಹಳ ಕಡಿಮೆ. ಎನ್‌ಇಪಿದಿಂದ ವಿದ್ಯಾರ್ಥಿಗಳಿಗೆ ಸಾಕಷ್ಟು ಅನುಕೂಲ ಇದೆ. ಎಲ್ಲಕ್ಕಿಂತ ಮುಖ್ಯವಾಗಿ ವಿವಿಧ ಕಾರಣಗಳಿಂದ ಅರ್ಧಕ್ಕೆ ಬಿಟ್ಟಿರುವವರು ಮತ್ತೆ ತಮ್ಮ ಅಧ್ಯಯನ ಮುಂದುವರಿಸಬಹುದು. ಡ್ರಾಪ್‌ಔಟ್ ಕಡಿಮೆ ಮಾಡುವ ಉದ್ದೇಶದಿಂದಲೇ ಹೊಸ ಶಿಕ್ಷಣ ನೀತಿ ಜಾರಿಗೆ ತರಲಾಗುತ್ತಿದೆ.
-ಪ್ರೊ| ಕರಿಸಿದ್ದಪ್ಪ ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಕುಲಪತಿ, ಬೆಳಗಾವಿ
ಪ್ರತೀ ವರ್ಷವೂ ಕೌಶಲಾಧಾರಿತ ಪಠ್ಯಕ್ರಮ:
ಮೈಸೂರು ವಿವಿ ವ್ಯಾಪ್ತಿಯ ಎಲ್ಲ ಪದವಿ ಕಾಲೇಜುಗಳಲ್ಲೂ ಅಧ್ಯಾಪಕರು ಮತ್ತು ಪ್ರಾಂಶುಪಾಲರಿಗೆ ಎನ್‌ಇಪಿ ಬಗ್ಗೆ ಕಾರ್ಯಾಗಾರ ನಡೆಸಲಾಗಿದೆ. ಮೊದಲ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಎನ್‌ಇಪಿ ಅನ್ವಯ ಆಗುವುದರಿಂದ ನೂತನ ಶಿಕ್ಷಣ ನೀತಿಯನ್ನು ಬೋಧಿಸಲು ಬೋಧಕವರ್ಗವನ್ನು ಅಣಿಗೊಳಿಸಲಾಗಿದೆ.
ನೂತನ ಶಿಕ್ಷಣ ನೀತಿಯ ಬಗ್ಗೆ ವಿದ್ಯಾರ್ಥಿಗಳಿಗಾಗಲಿ ಅಥವಾ ಉಪನ್ಯಾಸಕ ರಿಗೆ ಗೊಂದಲ ಉಂಟಾದರೆ ಅದನ್ನು ಬಗೆಹರಿಸಲು ವಿಶ್ವವಿದ್ಯಾನಿಲಯ ಮಟ್ಟದಲ್ಲಿ ನುರಿತ ಸಿಬಂದಿ ಯಿರುವ ಹೆಲ್ಪ್ಲೈನ್ ಆರಂಭಿಸಲಾಗಿದೆ. ಜತೆಗೆ ಎಲ್ಲ ಪದವಿ ಕಾಲೇಜುಗಳಲ್ಲೂ ಈ ಹೆಲ್ಪ್ ಲೈನ್ ಆರಂಭಿಸಲು ನಿರ್ಧರಿಸಲಾಗಿದೆ.
ನೂತನ ಶಿಕ್ಷಣ ನೀತಿಯಲ್ಲಿ ಬಿಎ, ಬಿಎಸ್ಸಿಯಲ್ಲಿ ಎರಡು ಪಠ್ಯಗಳು ಮೇಜರ್ ವಿಷಯವಾಗಿರುತ್ತವೆ. ಬಿಕಾಂ ಮತ್ತು ಬಿಸಿಎನಲ್ಲಿ ಎಂದಿನಂತೆ ಪಠ್ಯ ವಿಷಯಗಳಿರುತ್ತವೆ. ಜತೆಗೆ ಶೈಕ್ಷಣಿಕ ವರ್ಷ ದಲ್ಲಿ ವಿದ್ಯಾರ್ಥಿಗಳಿಗೆ ಕ್ರೆಡಿಟ್ ದೊರೆಯಲಿದ್ದು, ಇದು ಅವರ ಶೈಕ್ಷಣಿಕ ಪ್ರಗತಿಗೆ ಅನುಕೂಲವಾಗಲಿದೆ. ಪ್ರತೀ ವರ್ಷವೂ ಕೌಶಲಾಧಾರಿತ ಪಠ್ಯಕ್ರಮ ಇರಲಿದೆ.
ಸದ್ಯಕ್ಕೆ ಮೈಸೂರು ವಿವಿಯಲ್ಲಿ 30 ವಿದ್ಯಾರ್ಥಿಗಳಿಗೆ ಒಬ್ಬ ಶಿಕ್ಷಕರಿದ್ದಾರೆ. ಆದರೆ ಎನ್‌ಇಪಿಯಲ್ಲಿ 10 ವಿದ್ಯಾರ್ಥಿಗಳಿಗೆ ಒಬ್ಬ ಶಿಕ್ಷಕ ಇರಬೇಕು ಎಂದು ಹೇಳಲಾಗಿದೆ. ಮೊದಲ ವರ್ಷದ ಪದವಿ ವಿದ್ಯಾರ್ಥಿಗಳಿಗಷ್ಟೇ ಎನ್‌ಇಪಿ ಅನ್ವಯ ಆಗುವುದರಿಂದ ಶಿಕ್ಷಕರ ಕೊರತೆ ಸದ್ಯಕ್ಕೆ ಸಮಸ್ಯೆ ಆಗದಿದ್ದರೂ ಮುಂದಿನ ದಿನಗಳಲ್ಲಿ
ಎನ್‌ಇಪಿ ಅನುಷ್ಠಾನಕ್ಕೆ ಬಹುದೊಡ್ಡ ಸಮಸ್ಯೆ ಆಗುವುದರಲ್ಲಿ ಸಂದೇಹವಿಲ್ಲ.
ಕೌಟುಂಬಿಕ ಸಮಸ್ಯೆ, ವಿವಾಹ ಸೇರಿದಂತೆ ಇತರ ಕಾರಣಗಳಿಂದ ಡ್ರಾಪ್‌ಔಟ್ ಆಗಲಿದೆ. ಇದು ಶೇ.05ರಷ್ಟು ಮಾತ್ರ. ಪದವಿ ಹಂತದಲ್ಲಿ ಡ್ರಾಪ್‌ಔಟ್‌ಗೆ ಅವಕಾಶವಿದ್ದು, ಕಾಲೇಜು ಬಿಟ್ಟು ಕೆಲಸಕ್ಕೆ ಸೇರಿದವರು ಮತ್ತೆ ಕಾಲೇಜಿಗೆ ಸೇರಿಕೊಳ್ಳುವ ಅವಕಾಶ ನೀಡಲಾಗಿದೆ. ಆದ್ದರಿಂದ ಉನ್ನತ ಶಿಕ್ಷಣ ದಲ್ಲಿ ಡ್ರಾಪ್‌ಔಟ್ ಹೆಚ್ಚಾಗುವ ಆಂತಕ ಇಲ್ಲ.
– ಪ್ರೊ| ಜಿ. ಹೇಮಂತ ಕುಮಾರ್ ಕುಲಪತಿ, ಮೈಸೂರು ವಿವಿ
ಪಠ್ಯಕ್ರಮದಲ್ಲಿ ರಾಷ್ಟ್ರೀಯ ಗುಣಮಟ್ಟ :
ಎನ್‌ಇಪಿ ಅನುಷ್ಠಾನಕ್ಕೆ ಸರಕಾರದ ಆದೇಶ ಬರುವ ಮೊದಲೇ ಸಿದ್ಧತೆ ಆರಂಭಿಸಲು ಪ್ರಾಂಶುಪಾಲರು, ಅಧ್ಯಾಪಕರ ಜತೆ ಚರ್ಚೆ ನಡೆಸಿದ್ದೇವೆ. ಆನ್‌ಲೈನ್ ಕಾರ್ಯಾಗಾರ, ಕುಲಪತಿಗಳ ಜತೆ ಸಮಾಲೋಚನೆ ಮಾಡಿದ್ದೇವೆ. ಸಂಯೋಜಿತ ಕಾಲೇಜು, ಬೆಂಗಳೂರು ನಗರ ವಿವಿ ಕ್ಯಾಂಪಸ್ ನಲ್ಲಿ ವಿಷಯವಾರು ಚರ್ಚೆ ನಡೆಸಿ, ಮಾಡೆಲ್ ಪಠ್ಯಕ್ರಮವನ್ನು ರಚನೆ ಮಾಡಿದ್ದೇವೆ.
ಎನ್‌ಇಪಿಯಿಂದ ಪಠ್ಯಕ್ರಮ, ಬೋಧನಾ ಕ್ರಮ, ಮೌಲ್ಯಮಾಪನ, ಕಾಂಬಿನೇಶನ್ ಬದಲಾವಣೆ ಬಗ್ಗೆ ಉಪನ್ಯಾಸಕರಿಗೆ ಸರಣಿ ಕಾರ್ಯಕ್ರಮ ಮಾಡಿದ್ದೇವೆ. ಆರಂಭದಲ್ಲಿ ಉಪನ್ಯಾಸರಿಗೆ ಸ್ಪಷ್ಟ ಚಿತ್ರಣ ನೀಡುವ ಕಾರ್ಯ ಮಾಡಿದ್ದೇವೆ. ವಿದ್ಯಾರ್ಥಿಗಳಿಗಿರುವ ಅನುಕೂಲಗಳ ಬಗ್ಗೆ ತಿಳಿಸಿದ್ದೇವೆ.
ಎನ್‌ಇಪಿಯ ಮೂಲ ಆಶಯ ಏನು, ಶೈಕ್ಷಣಿಕ ಬದಲಾವಣೆ ಎಂಬುದರ ಬಗ್ಗೆ ಅರಿವು ಮೂಡಿಸಬೇಕು. ಪಠ್ಯಕ್ರಮದಲ್ಲಿ ಕ್ರೆಡಿಟ್ ವ್ಯವಸ್ಥೆ ಬರಲಿದೆ. ಕೌಶಲ, ಪ್ರಾಜೆಕ್ಟ್ ವರ್ಕ್ ಮೊದಲಾದವುಗಳು ಪಠ್ಯದ ಭಾಗವಾಗಲಿದೆ. ಮೂಲ ವಿಷಯದ ಜತೆಗೆ ಬೇರೆ ವಿಷಯಗಳನ್ನು ಓದಲು ಅವಕಾಶ ವಿದೆ. ಕೌಶಲಾಂಶಗಳು ಪ್ರತೀ ಸೆಮಿಸ್ಟರ್‌ನಲ್ಲಿ ಇರಲಿದೆ. ಇದರ ಜತೆ ಮೌಲ್ಯವನ್ನು ತುಂಬಲಾಗು ತ್ತದೆ. ರಾಷ್ಟ್ರೀಯ ಗುಣಮಟ್ಟ ಪಠ್ಯ ಕ್ರಮದಲ್ಲಿ ಬರಲಿದೆ.
ಶಿಕ್ಷಣದಲ್ಲಿ ಉಪನ್ಯಾಸಕರ ಕೊರತೆ ರಾಷ್ಟ್ರೀಯ ಸಮಸ್ಯೆ. ಇದು ನಿರ್ವಹಣೆಯಾಗಲೇಬೇಕು. ಪಠ್ಯಕ್ರಮದಲ್ಲಿ ಆಗಬೇಕಾದ ಬದಲಾವಣೆ ಎನ್‌ಇಪಿಯಿಂದ ಆಗಲಿದೆ. ಅನುದಾನ ಪ್ರಮಾಣವನ್ನು ಸರಕಾರ ಹೆಚ್ಚಿಸಬೇಕು.
ಪ್ರತೀ ವರ್ಷ ಎಕ್ಸಿಟ್, ಎಂಟ್ರಿ ಇರುವುದೇ ಡ್ರಾಪ್‌ಔಟ್ ತಪ್ಪಿಸಲು. ಉದ್ಯೋಗ ಸೇರಿದಂತೆ ಯಾವುದೋ ಕಾರಣಕ್ಕೆ ಮಧ್ಯದಲ್ಲಿ ಪದವಿ ತೊರೆದ ಅಭ್ಯರ್ಥಿ ಪುನಃ ಸೇರಲು ಅವಕಾಶವಿದೆ. ಈ ಮೊದಲು ಕಲಿತ ಕ್ರೆಡಿಟ್ ಹಾಗೆ ಇರಲಿದೆ. ಹೀಗಾಗಿ ಡ್ರಾಪ್‌ಔಟ್ ಇರುವುದಿಲ್ಲ.
-ಡಾ|ಲಿಂಗರಾಜ ಗಾಂಧಿ, ಕುಲಪತಿ, ಬೆಂಗಳೂರು ನಗರ ವಿವಿ