Advertisement

ಹಳೆಯ ಕೃಷಿ ಉಪಕರಣಕ್ಕೆ ರೈತನ ಹೊಸ ಪ್ರಾತ್ಯಕ್ಷಿಕೆ!

12:28 PM Sep 26, 2017 | |

ಧಾರವಾಡ: ಹೂಡುವುದಕ್ಕೆ ಎಂತಹ ನೇಗಿಲು ಬೇಕು, ಬಿತ್ತುವುದಕ್ಕೆ ಎಂತಹ ಕೂರಿಗೆ ಬೇಕು, ಎತ್ತುಗಳನ್ನು ಶೃಂಗರಿಸಲು ಬಳಕೆಯಾಗುವ ವಸ್ತುಗಳು ಯಾವುವು, ಎರಡು ಸಾಲಿನ ಮಧ್ಯ ಮಿಶ್ರ ಬೆಳೆ ಬೆಳೆಯುವಾಗ ಹಿರಿಯರು ಅದಕ್ಕಾಗಿ ನಿರ್ಮಿಸಿದ್ದ ಕೃಷಿ ಉಪಕರಣಗಳು ಹೇಗಿದ್ದವು ಎಂದು ಕೇಳಿದರೆ ಬಹುಶಃ ಯುವ ಪೀಳಿಗೆಗೆ ಗೊತ್ತೇ ಇರಲಿಕ್ಕಿಲ್ಲ.

Advertisement

ಆದರೆ ತಾವು ಚಿಕ್ಕವರಿದ್ದಾಗಿನಿಂದ ಇಂದಿನವರೆಗೂ ಕೃಷಿಯಲ್ಲಿ ಬಳಕೆಯಾಗುತ್ತಿದ್ದ ದೇಶಿ ಜ್ಞಾನ ಪರಂಪರೆ ಆಧರಿಸಿದ ಎಲ್ಲ ಕೃಷಿ ಸಾಧನ ಮತ್ತು ಉಪಕರಣಗಳ ಚಿಕ್ಕಚಿಕ್ಕ ಮಾದರಿ ಮಾಡಿಟ್ಟಿದ್ದಾರೆ ಗದಗ ಜಿಲ್ಲೆಯ ರೋಣದ ಮಲ್ಲಯ್ಯ ಗುರುಬಸಪ್ಪನಮಠ. ಕೃಷಿ ಮೇಳದಲ್ಲಿ ಮಾತ್ರವಲ್ಲ,

ತಮ್ಮ ಮನೆಯಲ್ಲಿಯೂ ಈ ಕೃಷಿ ಉಪಕರಣಗಳಿಗೆ ಒಂದು ಜಾಗ ಮಾಡಿಟ್ಟಿರುವ ಅವರು, ಇದೀಗ ಧಾರವಾಡ ಕೃಷಿ ಮೇಳದಲ್ಲೂ ಕೃಷಿ ಉಪಕರಣಗಳನ್ನು ಕಿರು ಪ್ರಾತ್ಯಕ್ಷಿಕೆ ಮಾಡಿ ನಾಲ್ಕು ದಿನಗಳ ಕಾಲ ಇಲ್ಲಿಗೆ ಭೇಟಿ ಕೊಟ್ಟ ರೈತರಿಗೆ, ಕೃಷಿ ಆಸಕ್ತರಿಗೆ ಇವುಗಳ ಮಹತ್ವನ್ನು ಸಾರಿ ಸಾರಿ ಹೇಳಿದರು. 68 ವರ್ಷ ವಯಸ್ಸಿನ ಮಲ್ಲಯ್ಯ ಅವರು, ಶಾಲೆ ಕಲಿತಿದ್ದು ಅಷ್ಟಕ್ಕಷ್ಟೇ.

ಆದರೂ, ಕೃಷಿಯಲ್ಲಿನ ಅನೇಕ ತಂತ್ರಗಳು, ಅವುಗಳನ್ನು ಜಾರಿಗೊಳಿಸಲು ಬಳಕೆಯಾಗುವ ಅನೇಕ ವಿಧಾನಗಳ ಕುರಿತು ನಿರರ್ಗಳವಾಗಿ ಮಾತನಾಡುತ್ತಾರೆ. ಕೃಷಿ ಮೇಳದ ಕೊನೆಯ ದಿನದ ಸಂಜೆವರೆಗೂ ತಮ್ಮ ಮಳಿಗೆಯಲ್ಲಿ ಕುಳಿತುಕೊಂಡು ಭೇಟಿ ಕೊಟ್ಟ ರೈತರಿಗೆಲ್ಲ ದೇಶಿ ಕೃಷಿ ಉಪಕರಣಗಳ ಮಹತ್ವ ಹೇಳಿಕೊಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next