ನವದೆಹಲಿ: ಏಕಾಮ್ರ ಕ್ರೀಡಾ ಸಾಹಿತ್ಯ ಉತ್ಸವ ತನ್ನ ಆರನೇ ಆವೃತ್ತಿಯೊಂದಿಗೆ ಹಿಂತಿರುಗುತ್ತಿದ್ದು, ನವೆಂಬರ್ 23ರಂದು ನವ ದೆಹಲಿಯ ಇಂಡಿಯಾ ಹ್ಯಾಬಿಟಾಟ್ ಸೆಂಟರ್ನಲ್ಲಿ ಈ ಉತ್ಸವ ನಡೆಯಲಿದೆ.
ಕ್ರೀಡೆ ಮತ್ತು ಸಾಹಿತ್ಯವನ್ನು ಸಂಭ್ರಮಿಸುವ ನಿಟ್ಟಿನಲ್ಲಿ ಮುನ್ನಡೆಯುತ್ತಿರುವ ಏಕಾಮ್ರ ಕ್ರೀಡಾಪಟುಗಳು, ಲೇಖಕರು ಮತ್ತು ಕ್ರೀಡಾ ಉತ್ಸಾಹಿಗಳನ್ನು ಒಟ್ಟುಗೂಡಿಸುತ್ತದೆ. ಕಳೆದ 5 ಆವೃತ್ತಿಗಳಲ್ಲಿ 125ಕ್ಕೂ ಹೆಚ್ಚು ಸ್ಪೀಕರ್ ಗಳಿಗೆ ಆತಿಥ್ಯ ನೀಡಿದೆ. 22 ಮಿಲಿಯನ್ ವೀಕ್ಷಣೆಗಳ ಮೂಲಕ ಏಕಾಮ್ರ ಆನ್ಲೈನ್ ವ್ಯಾಪ್ತಿಯನ್ನು ಗಳಿಸಿದೆ.
ಏಕಾಮ್ರ ಕ್ರೀಡೆ ಮತ್ತು ಸಾಹಿತ್ಯದ ಒಲಿಂಪಿಕ್ ಸ್ವರ್ಣ ಪದಕ ವಿಜೇತರು, ಲೇಖಕರು, ಭಾರತದ ಪ್ರಮುಖ ಕ್ರೀಡಾಪಟುಗಳು ಮತ್ತು ಕ್ರೀಡಾ ಆಡಳಿತ ಮತ್ತು ಕ್ರೀಡಾಪಟುಗಳ ಅಭಿವೃದ್ಧಿಯಲ್ಲಿ ಪ್ರಮುಖ ವ್ಯಕ್ತಿಗಳಿಗೆ ಆಮಂತ್ರಣ ನೀಡಿದೆ.
ಹಳೆಯ ಆವೃತ್ತಿಗಳಲ್ಲಿ ಭಾಗವಹಿಸಿದ್ದ ಪ್ರಭಾವಿ ವ್ಯಕ್ತಿಗಳಲ್ಲಿ ನೀರಜ್ ಚೋಪ್ರಾ, ಅಜಿಂಕ್ಯಾ ರಹಾನೆ, ವಿನೇಶ್ ಫೋಗಟ್, ಬೆನ್ ಜಾನ್ಸನ್, ಸ್ಟೆಫನಿ ರೈಸ್, ಜೆಫ್ ಥಾಮ್ಸನ್ ಮತ್ತು ಶೇಹನ್ ಕರುಣತಿಲಕ್ ಇರಲಿದ್ದಾರೆ. 6ನೇ ಆವೃತ್ತಿಯಲ್ಲಿ ಅನೇಕ ಅಂತಾರಾಷ್ಟ್ರೀಯ ಲೇಖಕರು ಮತ್ತು ಪ್ರಮುಖ ಪುಸ್ತಕ ಬಿಡುಗಡೆ ಕೂಡ ಇರಲಿದೆ.
ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ ಏಕಾಮ್ರ ಕ್ರೀಡಾ ಸಾಹಿತ್ಯದ ನಿರ್ದೇಶಕ ಸಂದೀಪ್ ಮಿಶ್ರಾ ಕ್ರೀಡೆಯು ಅತ್ಯುತ್ತಮ ಓದುವಿಕೆ ಎಂದು ನಾವು ನಂಬುತ್ತೇವೆ. ಇದು ನಮ್ಮ ಅಡಿಬರಹ ಕೂಡ. ಈ ಕ್ರೀಡಾ ಉತ್ಸವವು ಭುವನೇಶ್ವರ, ಗುರುಗ್ರಾಮ್, ಟೊರೊಂಟೊದ್ಯಾಂತ ಪ್ರಯಾಣಿಸಿದೆ. ಈ ವರ್ಷ ನಾವು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿದ್ದು, ಈ ಆವೃತ್ತಿಯಲ್ಲಿ ಸೇರ್ಪಡೆಯ ಕೊರತೆ, ಲಿಂಗ ವೈಷಮ್ಯ ಮುಂತಾದ ಕಠಿಣ ವಿಷಯಗಳನ್ನು ಚರ್ಚಿಸಲು ಸಾಧ್ಯವಾಗಲಿದೆ.