Advertisement

ಕೇರಳದಲ್ಲಿ ರೂಪಾಂತರಿ ಕಾಟ; ಸೋಂಕು ಸ್ಫೋಟಗೊಳ್ಳಲು ಹೊಸ ಸ್ವರೂಪ ಕಾರಣ?

11:31 AM Feb 24, 2021 | Team Udayavani |

ಹೊಸದಿಲ್ಲಿ: ಕೋವಿಡ್ ಸೋಂಕಿನ ಅಬ್ಬರ ಇಳಿಯಿತು ಅಂದುಕೊಳ್ಳುವಷ್ಟರಲ್ಲೇ ಹಲವು ರಾಜ್ಯಗಳಲ್ಲಿ ದಿಢೀರನೆ  ಪ್ರಕರಣಗಳು ಸ್ಫೋಟಗೊಳ್ಳಲು “ಕೋವಿಡ್ ಹೊಸ ಸ್ವರೂಪ’ ಕಾರಣವೇ ಎಂಬ ಅನುಮಾನ ದಟ್ಟವಾಗುತ್ತಿದೆ.  ಮಹಾರಾಷ್ಟ್ರ ಹಾಗೂ ಕೇರಳದ ಸೋಂಕಿತರ ಮಾದರಿ ಗಳನ್ನು ಪರೀಕ್ಷೆಗೆ ಒಳಪಡಿಸಿದಾಗ ರೂಪಾಂತರಗೊಂಡ ಸೋಂಕಿನ ಅಂಶಗಳು ಇರುವುದು ಪತ್ತೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

Advertisement

ಇದನ್ನೂ ಓದಿ:ಕಾಂಗ್ರೆಸ್ ಎಲ್ಲೆಲ್ಲಿ ಅಧಿಕಾರ ಕಳೆದುಕೊಂಡಿದೆ? ಕೈ ಜಾರಿದ ಸಿಂಹಾಸನ ಒಂದು ಅವಲೋಕನ

ಆದರೆ ಈ ರಾಜ್ಯಗಳ ಕೆಲವು ಜಿಲ್ಲೆಗಳಲ್ಲಿ ಸೋಂಕು ವಿಪರೀತ ಹೆಚ್ಚಲು ಈ ರೂಪಾಂತರಿಯೇ ಕಾರಣ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ. ದೇಶದಲ್ಲಿ ಈವರೆಗೆ 187 ಮಂದಿಯಲ್ಲಿ ಯುಕೆ ರೂಪಾಂತರಿ ಸೋಂಕು ಕಾಣಿಸಿಕೊಂಡರೆ 6 ಮಂದಿಯಲ್ಲಿ ದಕ್ಷಿಣ ಆಫ್ರಿಕಾ ದಲ್ಲಿನ ಹೊಸ ಸ್ವರೂಪದ ಸೋಂಕು ದೃಢಪಟ್ಟಿದೆ. ಒಬ್ಬ ವ್ಯಕ್ತಿಯಲ್ಲಿ ಬ್ರೆಜಿಲ್‌ ರೂಪಾಂತರವಿರುವುದು ಪತ್ತೆಯಾಗಿದೆ ಎಂದು ನೀತಿ ಆಯೋಗದ ಸದಸ್ಯ ವಿ.ಕೆ. ಪೌಲ್‌ ಹೇಳಿದ್ದಾರೆ.

ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಮಂಗಳವಾರ 1.5 ಲಕ್ಷದ ಗಡಿಯಿಂದ ಕೆಳಗಿಳಿದಿದೆ. ಸದ್ಯ ಇದು 1,47,306 ಆಗಿದ್ದು, 21 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶ ಗಳಲ್ಲಿ 24 ಗಂಟೆಗಳಲ್ಲಿ ಯಾವುದೇ ಸೋಂಕು ಸಂಬಂಧಿ ಸಾವು ಸಂಭವಿಸಿಲ್ಲ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಸೋಮವಾರದಿಂದ ಮಂಗಳವಾರಕ್ಕೆ 24 ಗಂಟೆ ಗಳಲ್ಲಿ 10,587 ಮಂದಿಗೆ ಸೋಂಕು ದೃಢಪಟ್ಟಿದೆ.

ಪ್ರಧಾನಿ ಕಾರ್ಯಾಲಯದಲ್ಲಿ ಸಭೆ: ಈ ಎಲ್ಲ ಬೆಳವಣಿಗೆಗಳ ನಡುವೆಯೇ, ಪ್ರಧಾನ ಮಂತ್ರಿ ಕಾರ್ಯಾಲಯದಲ್ಲಿ ಮಂಗ ಳವಾರ ಮಹತ್ವದ ಸಭೆ ನಡೆದಿದೆ. ಆರೋಗ್ಯ ಕಾರ್ಯದರ್ಶಿ ರಾಜೇಶ್‌ ಭೂಷಣ್‌ ಸೇರಿದಂತೆ ಪ್ರಮುಖರು ಸಭೆಯಲ್ಲಿ ಭಾಗವಹಿಸಿದ್ದು, ದೇಶದ ಕೋವಿಡ್ ಸ್ಥಿತಿಗತಿ ಕುರಿತು ಪರಿ ಶೀಲನೆ ನಡೆಸಲಾಗಿದೆ ಎಂದು ಮೂಲಗಳು ಹೇಳಿವೆ.

Advertisement

39 ವಿದ್ಯಾರ್ಥಿಗಳಿಗೆ ಸೋಂಕು: ಮಹಾರಾಷ್ಟ್ರದ ಲಾತೂರ್‌ ನಗರದ ಹಾಸ್ಟೆಲ್‌ ವೊಂದರಲ್ಲಿ 9, 10ನೇ ತರಗತಿಯ 39 ವಿದ್ಯಾರ್ಥಿಗಳು ಹಾಗೂ ಐವರು ಸಿಬಂದಿಗೆ ಕೋವಿಡ್ ಸೋಂಕು ದೃಢಪಟ್ಟಿದೆ.

ಹಲವು ರಾಜ್ಯಗಳಲ್ಲಿ ನಿರ್ಬಂಧ: ಕೋವಿಡ್ ಸೋಂಕು ಹೆಚ್ಚಳ ಹಿನ್ನೆಲೆಯಲ್ಲಿ ಪಂಜಾಬ್‌ ಸರಕಾರ ಮಾ. 1ರಿಂದ ಒಳಾಂಗಣ ಹಾಗೂ ಹೊರಾಂಗಣ ಕಾರ್ಯಕ್ರಮಗಳಲ್ಲಿ ಜನರ ಸೇರುವಿಕೆಗೆ ನಿರ್ಬಂಧ ಹೇರಿದೆ. ಒಳಾಂಗಣ ಕಾರ್ಯಕ್ರಮದಲ್ಲಿ 100ಕ್ಕಿಂತ ಅಧಿಕ, ಹೊರಾಂಗಣಗಳಲ್ಲಿ 200ಕ್ಕಿಂತ ಹೆಚ್ಚು ಮಂದಿ ಸೇರುವಂತಿಲ್ಲ ಎಂದು ಸೂಚಿಸಿದೆ. ರಾಜಸ್ಥಾನದಲ್ಲೂ ಮದುವೆ ಸೇರಿದಂತೆ  ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವವರ ಸಂಖ್ಯೆಯನ್ನು 100ಕ್ಕೆ ಮಿತಿಗೊಳಿಸಲಾಗಿದೆ. ಇನ್ನು, ಮಧ್ಯಪ್ರದೇಶದ ಬಾಲಾಘಾಟ್‌ ನಲ್ಲಿ ರಾತ್ರಿ ಕರ್ಫ್ಯೂ ವಿಧಿಸಲಾಗಿದ್ದು, ರಾತ್ರಿ 10ರಿಂದ ಬೆ.6ರ ವರೆಗೆ ಸಾರ್ವಜನಿಕರ ಸಂಚಾರವನ್ನು ನಿರ್ಬಂಧಿಸಲಾಗಿದೆ.

ವಿಶ್ವ ಆರೋಗ್ಯ ಸಂಸ್ಥೆ ಅಥವಾ ಭಾರತೀಯ ವೈದ್ಯಕೀಯ ಸಂಸ್ಥೆಯಿಂದ ಸೂಕ್ತ ಪ್ರಮಾಣ ಪತ್ರ ದೊರೆಯುವವರೆಗೂ ಪತಂಜಲಿ ಕಂಪೆನಿಯ ಕೊರೊ ನಿಲ್‌ ಔಷಧದ ಮಾರಾಟಕ್ಕೆ ಮಹಾರಾಷ್ಟ್ರದಲ್ಲಿ ಅನುಮತಿ ನೀಡುವುದಿಲ್ಲ.
● ಅನಿಲ್‌ ದೇಶ್‌ ಮುಖ್‌,
ಮಹಾರಾಷ್ಟ್ರ ಗೃಹ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next