Advertisement
ಹಾರಾಡಿ-ಚಿಕ್ಕ ಪುತ್ತೂರು ನಡುವಿನ ಸಂಪರ್ಕ ರಸ್ತೆ:
Related Articles
Advertisement
ಹಲವು ವರ್ಷಗಳಿಂದ ರಸ್ತೆ ನಿರ್ಮಾಣಕ್ಕೆ ನಗರಸಭೆ ವತಿಯಿಂದ ಪ್ರಯತ್ನ ನಡೆಯು ತ್ತಿದೆ. ಖಾಸಗಿ ಜಾಗದಲ್ಲಿ ರಸ್ತೆ ಹಾದು ಹೋಗಬೇಕಾದ ಕಾರಣ ಭೂ-ಮಾಲಕರ ಒಪ್ಪಿಗೆಯ ಅಗತ್ಯವಿತ್ತು. ಕೆಲವೆಡೆ ವಿರೋಧ ವ್ಯಕ್ತವಾದ ಕಾರಣ ನಿರೀಕ್ಷಿತ ಪ್ರಗತಿ ಕಂಡಿರಲಿಲ್ಲ. ಶಾಸಕರು, ನಗರಸಭೆ ಅಧ್ಯಕ್ಷರ ಸಹಿತ ಜನಪ್ರತಿನಿಧಿಗಳು ಭೂ ಮಾಲಕರ ಜತೆ ಮಾತುಕತೆ ನಡೆಸಿದ ಪರಿಣಾಮ ಹೆಚ್ಚಿನ ಮಾಲಕರು ರಸ್ತೆಗೆ ಜಾಗ ನೀಡಲು ಸಮ್ಮತಿ ನೀಡಿದ್ದಾರೆ. ಒಂದು ಕಡೆಯಲ್ಲಿ ಸಮ್ಮತಿ ಸಿಕ್ಕಿಲ್ಲ. ಇದರ ಭೂ ಮಾಲಕರ ಮನವೊಲಿಸುವ ಕಾರ್ಯ ನಡೆಯುತಿದ್ದು ಇದು ಪೂರ್ಣಗೊಂಡಲ್ಲಿ ಸಂಪರ್ಕ ರಸ್ತೆ ನಿರ್ಮಾಣಕ್ಕೆ ಇರುವ ಅಡ್ಡಿ ದೂರವಾಗಲಿದೆ
ಏನು ಪ್ರಯೋಜನ? :
ಉಪ್ಪಿನಂಗಡಿಯಿಂದ ಪುತ್ತೂರು ನಗರ ಅಥವಾ ನಗರದಿಂದ ಉಪ್ಪಿನಂಗಡಿಗೆ ಸಂಚರಿಸುವ ವಾಹನಗಳು ಮುಖ್ಯ ರಸ್ತೆಯ ಮೂಲಕ ಬೊಳುವಾರಿನಲ್ಲಿ ಉಪ್ಪಿನಂಗಡಿ ರಸ್ತೆಯನ್ನು ಸಂಧಿಸುತ್ತವೆ. ಹೊಸ ಸಂಪರ್ಕ ರಸ್ತೆ ನಿರ್ಮಾಣದಿಂದ ಉಪ್ಪಿನಂಗಡಿಯಿಂದ ಬರುವ ವಾಹನಗಳು ಬೊಳುವಾರಿಗೆ ಬರುವ ಪ್ರಮೇಯ ತಪ್ಪಲಿದೆ. ನೇರವಾಗಿ ಹಾರಾಡಿಯಿಂದ ಮಡಿವಾಳಕಟ್ಟೆ ಖಾಸಗಿ ಬಸ್ ನಿಲ್ದಾಣದ ಮೂಲಕ ನಗರಕ್ಕೆ ಪ್ರವೇಶಿಸಬಹುದು. ಇದರಿಂದ ಕೇಂದ್ರ ಬಸ್ ನಿಲ್ದಾಣದಿಂದ ಬೊಳುವಾರು ತನಕದ ಟ್ರಾಫಿಕ್ ಒತ್ತಡ ತಗ್ಗಲಿದೆ. ಎರಡು ಕಿ.ಮೀ. ದೂರ ಸುತ್ತು ಬಳಸುವ ದೂರವು ತಗ್ಗಲಿದೆ.
2 ಕೋಟಿ ರೂ. ವೆಚ್ಚ :
ಭೂ ಸ್ವಾಧೀನಕ್ಕೆ ಒಪ್ಪಿಗೆ ದೊರೆಯ ಬೇಕಾದ ಸ್ಥಳ ಹೊರತುಪಡಿಸಿ ಉಳಿದ ಕೆಲ ಭಾಗಗಳಲ್ಲಿ ನಗರೋತ್ಥಾನದ ಅನುದಾನದಲ್ಲಿ ಚರಂಡಿ ನಿರ್ಮಾಣ, ಮಣ್ಣು ಹಾಕಿ ಸಮತಟ್ಟು ಮಾಡುವ ಕೆಲಸ ನಡೆದಿದೆ. ಮಧ್ಯಮ ಪಥದ ರಸ್ತೆ ನಿರ್ಮಾಣ ಸೇರಿ ರಸ್ತೆ ಕಾಮಗಾರಿ ಪೂರ್ಣಕ್ಕೆ 2 ಕೋ.ರೂ.ಅನುದಾನ ತಗಲಬಹುದು ಎಂದು ನಿರೀಕ್ಷಿಸಲಾಗಿದ್ದು ಬೇರೆ ಬೇರೆ ಯೋಜನೆಗಳ ಮೂಲಕ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ-ಜೀವಂಧರ್ ಜೈನ್,ನಗರಸಭೆ ಅಧ್ಯಕ್ಷ