Advertisement
“ಕಾಶ್ಮೀರದಲ್ಲಿ ಇಂಟರ್ನೆಟ್ ಸಂಪರ್ಕಕ್ಕೆ ನಿರ್ಬಂಧ ಹೇರಿದ್ದರ ವಿಚಾರವಾಗಿ ನಾವು (ಸುಪ್ರೀಂಕೋರ್ಟ್) ಇಂಟರ್ನೆಟ್ ಬಳಕೆ ಅಭಿವ್ಯಕ್ತಿ ಸ್ವಾತಂತ್ರ್ಯದ ಭಾಗ ಎಂದು ಹೇಳಿದ್ದೇವೆ. ಇಂತಹ ಅನೇಕ ಪ್ರಶ್ನೆಗಳು ಉದ್ಭವಿಸುತ್ತವೆ. ಉದಾಹರಣೆಗೆ ಧ್ವನಿವರ್ಧಕ ಬಳಸಿ ಮದುವೆ ಮಂಟಪಗಳಲ್ಲಿ ಜೋರು ಧ್ವನಿಯಲ್ಲಿ ಮ್ಯೂಸಿಕ್ ಕೇಳುವುದು, ಮಂದಿರ, ಮಸೀದಿಗಳಲ್ಲಿ ಧ್ವನಿ ವರ್ಧಕ ಬಳಸಲಾಗುತ್ತದೆ. ಹಾಗಾಗಿ, ಧ್ವನಿ ವರ್ಧ ಕಗಳ ಬಳಕೆಯನ್ನು ಸಂವಿಧಾನ ಖಾತರಿಪಡಿಸಿರುವ ಅಭಿವ್ಯಕ್ತಿ ಸ್ವಾತಂತ್ರ್ಯದ ಭಾಗವಾಗಿ ಪರಿಗಣಿಸಬಹುದೇ ಎಂಬ ಬಗ್ಗೆ ನಿರ್ಧರಿಸಬೇಕಾಗಿದೆ ಎಂದರು.
Related Articles
Advertisement
ನ್ಯಾಯಮೂರ್ತಿಗಳಾದ ಮೋಹನ ಶಾಂತನಗೌಡರ್, ಅಬ್ದುಲ್ ನಜೀರ್, ಎ.ಎಸ್.ಬೋಪಣ್ಣ ಮಾತನಾಡಿದರು. ಕರ್ನಾಟಕ ನ್ಯಾಯಾಂಗ ಅಧಿಕಾರಿಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನಗೌಡ, ಪ್ರಧಾನ ಕಾರ್ಯದರ್ಶಿ ಎ.ಸೋಮಶೇಖರ್ ಮತ್ತಿತರರಿದ್ದರು.
“ಭೂದೇವಿಯ ಮುಕುಟದ ನವಮಣಿ’: ಸಿಜೆಐ: ರಾಷ್ಟ್ರಕವಿ ಕುವೆಂಪು ಅವರ ನಾಡಗೀತೆಯ “ಭೂದೇವಿಯ ಮುಕುಟದ ನವಮಣಿಯೆ’ ಸಾಲನ್ನು ಕನ್ನಡದಲ್ಲಿ ಓದಿದ ಸಿಜೆಐ ನ್ಯಾ.ಬೋಬ್ಡೆ, “ಬೆಂಗಳೂರನ್ನು ನಾನು “ಸಿಲಿಕಾನ್ ವ್ಯಾಲಿ ಆಫ್ ಇಂಡಿಯಾ’ ಎಂದಷ್ಟೇ ಕರೆಯಲು ಬಯಸುವುದಿಲ್ಲ. ಏಕೆಂದರೆ, ಈ ನಾಡು ಬಹಳ ಪುರಾತನ ನಾಗರಿಕತೆ ಹೊಂದಿದ್ದು, ಇದು ಭಾರತೀಯ ಸಂಸ್ಕೃತಿಯ ಪ್ರಧಾನ ಕೇಂದ್ರ. ಕರ್ನಾಟಕ ಅನೇಕ ಖ್ಯಾತನಾಮ ಹಾಗೂ ಪ್ರತಿಭಾವಂತ ನ್ಯಾಯಾಧೀಶರನ್ನು ದೇಶಕ್ಕೆ ನೀಡಿದೆ. ಕಾನೂನು ಪಂಡಿತರನ್ನು ಕೊಟ್ಟಿದೆ. ಸಿವಿಲ್ ನ್ಯಾಯದ ಹಲವು ಮಹತ್ವದ ತೀರ್ಪುಗಳು ಕರ್ನಾಟಕದಿಂದ ಬಂದಿರುವುದು ಹೆಮ್ಮೆಯ ಸಂಗತಿ ಎಂದರು. ಸಾಂಪ್ರದಾಯಿಕ ಮೈಸೂರು ಪೇಟ ಧರಿಸಿಯೇ ಅವರು ಭಾಷಣ ಮಾಡಿದ್ದು ಗಮನ ಸೆಳೆಯಿತು.
ವ್ಯಾಜ್ಯಗಳನ್ನು ಮಧ್ಯಸ್ಥಿಕೆ, ರಾಜಿ-ಸಂಧಾನಗಳ ಮೂಲಕ ಇತ್ಯರ್ಥಪಡಿಸುವ ಅವಕಾಶ ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗುತ್ತಿಲ್ಲ. ಕೆಲವೊಮ್ಮೆ ಬಳಸಿದರೂ ನಿರೀಕ್ಷಿತ ಯಶಸ್ಸು ಸಿಕ್ಕಿಲ್ಲ. ಅಯೋಧ್ಯೆ ವಿವಾದದಲ್ಲಿ ಅದರ ಅನುಭವ ಕಂಡಿದ್ದೇವೆ. ಮಧ್ಯಸ್ಥಿಕೆ ಮೂಲಕ ವಿವಾದ ಬಗೆಹರಿಯಬಹುದು ಎಂದು ಭಾವಿಸಲಾಗಿತ್ತು. ಆದರೆ, ಅದು ಆಗಲಿಲ್ಲ. ಮಧ್ಯಸ್ಥಿಕೆ, ರಾಜಿ-ಸಂಧಾನ ಕಾಲದ ಬೇಡಿಕೆ ಆಗಿದೆ.-ನ್ಯಾ.ಎ.ಎಸ್.ಬೋಬ್ಡೆ, ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ