Advertisement

ನೂತನ ಕಟ್ಟಡ ಉದ್ಘಾಟನೆಗೆ ಸಿದ್ಧ

09:49 PM Jan 24, 2021 | Team Udayavani |

ಪುಂಜಾಲಕಟ್ಟೆ: ಗುಣ ಮಟ್ಟದ ಶಿಕ್ಷಣಕ್ಕೆ ಖಾಸಗಿ ಕಾಲೇಜುಗಳಂತೆ ಸರಕಾರಿ ಕಾಲೇಜುಗಳಲ್ಲೂ ಸಕಲ ಸೌಲಭ್ಯಗಳನ್ನು ಸರಕಾರ ಒದಗಿಸುತ್ತಿದ್ದು, ವಿದ್ಯಾರ್ಥಿಗಳನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗುತ್ತಿದೆ. ಮಣಿನಾಲ್ಕೂರು ಸರಕಾರಿ ಪ.ಪೂ. ಕಾಲೇಜು ನೂತನ ಕಟ್ಟಡದೊಂದಿಗೆ ಹೊಸ ರೂಪ ಪಡೆದಿದೆ.

Advertisement

ಗ್ರಾಮೀಣ ಪ್ರದೇಶವಾದ ಮಣಿನಾಲ್ಕೂರು ಸರಕಾರಿ ಪದವಿ ಪೂರ್ವ ಕಾಲೇಜು ಆರಂಭಗೊಂಡು ಸುಮಾರು 30 ವರ್ಷಗಳ ಬಳಿಕ ಇದೀಗ ಕೆಲವೊಂದು ಸವಲತ್ತುಗಳೊಡನೆ ಸ್ವಂತ ಕಟ್ಟಡದಲ್ಲಿ ಕಾರ್ಯಾ ರಂಭಿಸಲು ಸಿದ್ಧಗೊಂಡಿದೆ. ಕಾಲೇಜಿನ ನೂತನ ಕಟ್ಟಡ ಶೀಘ್ರ ಉದ್ಘಾಟನೆಗೊಳ್ಳಲಿದೆ.

ನೂತನ ಕಟ್ಟಡ ಸಹಿತ ಸವಲತ್ತುಗಳು :

ಸರಕಾರದ ಆರ್‌ಐಡಿಎಫ್‌ ಫಂಡ್‌ನ‌ 55 ಲಕ್ಷ ರೂ. ಅನುದಾನದಲ್ಲಿ 2 ತರಗತಿ ಕೊಠಡಿ, ಕೊಳವೆ ಬಾವಿ, ಶೌಚಾಲಯಗಳು ನಿರ್ಮಾಣಗೊಂಡಿದ್ದು, ಹಳೆಯ ಕಟ್ಟಡವನ್ನು ನವೀಕರಿಸಲಾಗುತ್ತಿದೆ. ಜತೆಗೆ ಪ್ರೌಢಶಾಲಾ ವಿಭಾಗಕ್ಕೆ ಕೊಳವೆಬಾವಿ, ಕಟ್ಟಡ ದುರಸ್ತಿ, ಗೋಡೆಗೆ ಬಣ್ಣ, ಟೈಲ್ಸ್‌ ಅಳವಡಿಕೆ ಕಾಮಗಾರಿಗಳು ನಡೆಯುತ್ತಿದೆ.

ವೆಂಕಟರಮಣ ಐತಾಳ ಅವರ ಮುತುವರ್ಜಿಯಿಂದ ವಗ್ಗ-ಉಳಿ ರಸ್ತೆಯಲ್ಲಿ ಮಣಿನಾಲ್ಕೂರು ಗ್ರಾಮದ ಉಜಿರಂಡಿಪಲ್ಕೆಯಲ್ಲಿ ಸ. ಪ್ರೌಢ ಶಾಲೆಯ ಬಳಿ ವಾಣಿಜ್ಯ, ಕಲಾ ವಿಭಾಗದೊಂದಿಗೆ 1991ರಲ್ಲಿ ಆರಂಭಗೊಂಡ ಪ.ಪೂ. ಕಾಲೇಜಿನ ತರಗತಿಗಳು ಪ್ರಸ್ತುತ ಪ್ರೌಢಶಾಲಾ ಕಟ್ಟಡದಲ್ಲೇ ನಡೆಯುತ್ತಿದೆ. 2009ರಲ್ಲಿ ಜೆಒಸಿ ತರಗತಿ ಆರಂಭಗೊಂಡು 2011ರಲ್ಲಿ ಸ್ಥಗಿತಗೊಂಡಿತು.

Advertisement

55 ಲಕ್ಷ ರೂ. ಅನುದಾನ :

ಸುಮಾರು 30 ವರ್ಷಗಳ ಬಳಿಕ ಇದೀಗ ಕೆಲವೊಂದು ಸವಲತ್ತುಗಳೊಡನೆ ಸ್ವಂತ ಕಟ್ಟಡದಲ್ಲಿ ಕಾರ್ಯಾರಂಭಿಸಲು ಸಿದ್ಧ

ಬೇಡಿಕೆಗಳು  :

ಉಪನ್ಯಾಸಕ ಹುದ್ದೆಗಳು, ದೈಹಿಕ ಶಿಕ್ಷಣ ನಿರ್ದೇಶಕ, ಸಿಬಂದಿ ಹುದ್ದೆ ಭರ್ತಿಯಾಗಬೇಕಾಗಿದೆ. ಕಂಪ್ಯೂಟರ್‌ಗಳು, ಪೀಠೊಪಕರಣಗಳು, ಸಿ.ಸಿ. ಕೆಮರಾ, ಆಟದ ಮೈದಾನ, ಆವರಣಗೋಡೆ, ಇತರ ಕೊಠಡಿಗಳ ನವೀಕರಣ ಮೊದಲಾದ ಸವಲತ್ತುಗಳು ದೊರೆಯಬೇಕಾಗಿದೆ.

ಬಂಟ್ವಾಳ ಶಾಸಕ ರಾಜೇಶ್‌ ನಾೖಕ್‌ ಉಳಿಪ್ಪಾಡಿಗುತ್ತು ಅವರ ವಿಶೇಷ ಆಸ್ಥೆಯಿಂದ ಅನುದಾನ ಮಂಜೂರುಗೊಂಡಿದ್ದು,ಕಟ್ಟಡ ಕಾಮಗಾರಿ ಪೂರ್ಣಗೊಳ್ಳುತ್ತಿದ್ದು, ಶೀಘ್ರ ಉದ್ಘಾಟನೆಗೊಳ್ಳಲಿದೆ. -ರಾಮಕೃಷ್ಣ ಮಯ್ಯ,  ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರು.

ಗ್ರಾಮೀಣ ಪ್ರದೇಶದಲ್ಲಿ ಕಾಲೇಜು ಸುಸಜ್ಜಿತಗೊಂಡಲ್ಲಿ ವಿದ್ಯಾರ್ಥಿಗಳಿಗೆ ವರದಾನವಾಗಲಿದೆ. ಮಣಿನಾಲ್ಕೂರು ಸರಕಾರಿ ಪ.ಪೂ.ಕಾಲೇಜು ಪ್ರಸ್ತುತ ಒಂದೊಂದೇ ಸೌಕರ್ಯವನ್ನು ಹೊಂದುತ್ತಾ ಬರುತ್ತಿದೆ. ನೂತನ ಕಟ್ಟಡದಲ್ಲಿ ಉತ್ತಮ ಶಿಕ್ಷಣಕ್ಕೆ ಆದ್ಯತೆ ನೀಡಲಾಗುತ್ತದೆ. -ಸ್ಮಿತಾ,  ಪ್ರಾಂಶುಪಾಲರು,ಮಣಿನಾಲ್ಕೂರು ಸ.ಪ.ಪೂ. ಕಾಲೇಜು.

Advertisement

Udayavani is now on Telegram. Click here to join our channel and stay updated with the latest news.

Next