Advertisement
ದ.ಕ. ಜಿಲ್ಲೆಯಲ್ಲಿ 119 ಹಾಗೂ ಉಡುಪಿ ಜಿಲ್ಲೆಯಲ್ಲಿ 30 ಶಿಶುಗಳು ಜನಿಸಿದ್ದು, ಜಿಲ್ಲಾ ಸರಕಾರಿ ಲೇಡಿಗೋಶನ್ ಆಸ್ಪತ್ರೆಯಲ್ಲಿ 19 ಶಿಶುಗಳ ಜನನವಾಗಿವೆ. 119 ಶಿಶುಗಳ ಪೈಕಿ ಗಂಡು ಮತ್ತು ಹೆಣ್ಣು ಶಿಶುಗಳೆಷ್ಟು ಎಂಬ ಸಂಖ್ಯೆ ಲಭ್ಯವಾಗಿಲ್ಲ. ಲೇಡಿಗೋಶನ್ ಆಸ್ಪತ್ರೆಯಲ್ಲಿ ಜನಿಸಿದ 19 ಶಿಶುಗಳ ಪೈಕಿ 9 ಸಿಸೇರಿಯನ್ ಹೆರಿಗೆ, 9 ಸಹಜ ಹೆರಿಗೆಗಳಾಗಿವೆ. 19ರಲ್ಲಿ 11 ಗಂಡು, 8 ಹೆಣ್ಣು ಶಿಶುಗಳಾಗಿವೆ. 119 ಶಿಶುಗಳು ಕೂಡ ಡಿ. 31ರ ಮಧ್ಯರಾತ್ರಿ 12 ಗಂಟೆಯಿಂದ ಜ. 1ರ ರಾತ್ರಿ 9 ಗಂಟೆಯವರೆಗಿನ 21 ಗಂಟೆ ಅವಧಿಯಲ್ಲಿ ಜನಿಸಿದ ಶಿಶುಗಳಾಗಿವೆ.
ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ 4 ಹೆರಿಗೆ ಗಳಾಗಿದ್ದು 3 ಗಂಡು, 1ಹೆಣ್ಣು ಮಗು ಜನಿಸಿದೆ. ಅದರಲ್ಲಿ ಸಿಸೇರಿಯನ್ 3 ಮತ್ತು 1 ನಾರ್ಮಲ್ ಹೆರಿಗೆ. ಉಡುಪಿಯ ಆದರ್ಶ ಆಸ್ಪತ್ರೆಯಲ್ಲಿ ಒಂದು ನಾರ್ಮಲ್ ಹಾಗೂ ಸಿಸೇರಿ ಯನ್ ಹೆರಿಗೆಯಲ್ಲಿ 1 ಗಂಡು, 1 ಹೆಣ್ಣು ಮಗುವಿನ ಜನನವಾಗಿದೆ. ಉಡುಪಿ ಗಾಂಧಿ ಆಸ್ಪತ್ರೆಯಲ್ಲಿ ಒಂದು ಸಿಸೇರಿಯನ್ ಹೆರಿಗೆಯಾಗಿದ್ದು, ಇದು ಹೆಣ್ಣಾಗಿದೆ. ಮಿಶನ್ ಆಸ್ಪತ್ರೆಯಲ್ಲಿ 1 ಸಿಸೇರಿಯನ್ ಹಾಗೂ 3 ಸಹಜ ಹೆರಿಗೆ ಯಾಗಿದೆ. ಇದರಲ್ಲಿ ಒಂದು ಗಂಡು, 3 ಹೆಣ್ಣು ಮಗು ಜನನವಾಗಿದೆ.
Related Articles
ಜಿಲ್ಲೆಯಲ್ಲಿ ಒಟ್ಟು 30 ಹೆರಿಗೆಯಾಗಿದೆ. ಅದರಲ್ಲಿ ಸರಕಾರಿ ಆಸ್ಪತ್ರೆಗಳಲ್ಲಿ 11 ಸಹಜ ಹಾಗೂ 8 ಸಿಸೇರಿಯನ್ ಆಗಿದೆ. ಖಾಸಗಿ ಆಸ್ಪತ್ರೆಯಲ್ಲಿ 3 ಸಹಜ ಹಾಗೂ 8 ಸಿಸೇರಿಯನ್ ಹೆರಿಗೆಯಾಗಿದೆ. ಅದರಲ್ಲಿ 13 ಗಂಡು, 17 ಹೆಣ್ಣು ಮಕ್ಕಳು. 2020ರ ಜ.1ರಂದು 16 ಗಂಡು, 12 ಹೆಣ್ಣು ಮಕ್ಕಳು ಜನಿಸಿದ್ದರು. ಕಳೆದ ಬಾರಿಗೆ ಹೋಲಿಕೆ ಮಾಡಿದರೆ ಈ ಬಾರಿ ನವಜಾತ ಶಿಶುಗಳಲ್ಲಿ ಹೆಣ್ಣು ಮಕ್ಕಳ ಸಂಖ್ಯೆಯಲ್ಲಿ ಏರಿಕೆಯಾಗಿದ್ದು, ಗಂಡು ಮಗುವಿನ ಜನನ ಸಂಖ್ಯೆ ಕಡಿಮೆ ಇದೆ. ರಾತ್ರಿ 12 ಗಂಟೆಯೊಳಗೆ ಇನ್ನೂ ಹೆರಿಗೆಯಾಗುವ ಸಾಧ್ಯತೆಗಳಿವೆ.
Advertisement
ಫ್ಯಾನ್ಸಿ ನಂಬರ್ವ್ಯಾಮೋಹಕ್ಕೊಳಗಾಗಿ ಜ. 1ರ ಹೊಸ ವರ್ಷದಂದೇ ಶಿಶು ಜನನವಾಗಬೇಕಂಬ ದೃಷ್ಟಿಯಿಂದ ಕೆಲವರು ಸಿಸೇರಿಯನ್ ಮೊರೆ ಹೋಗುವುದಿದೆ. ಆದರೆ, ಶುಕ್ರವಾರ ಜನಿಸಿದ ಶಿಶುಗಳ ಪೈಕಿ ಅಂತಹ ಒತ್ತಡಗಳಿರಲಿಲ್ಲ. ಬದಲಾಗಿ ಸಹಜ ಹೆರಿಗೆ ಸಾಧ್ಯವಾಗದ್ದನ್ನು ಸಿಸೇರಿಯನ್ ಮಾಡಲಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಆದರೆ ಉಡುಪಿಯಲ್ಲಿ ಸಿಸೇರಿಯನ್ ಸಂಖ್ಯೆ ಜಾಸ್ತಿ ಇದೆ. ಇದು ಹೊಸ ವರ್ಷದಂದು ಜನಿಸಬೇಕೆಂಬ ಒತ್ತಡ ಇರಬಹುದೇ ಎಂಬ ಸಂದೇಹಗಳಿವೆ. ವಿಶೇಷ ದಿನವೆಂದು ಸಿಸೇರಿಯನ್ ಸಲ್ಲದು
ಸಿಸೇರಿಯನ್ ಹೆರಿಗೆ ಮಾಡಿಸಲೇಬೇಕಾದ ಸಂದರ್ಭ ಬಂದರೆ ಅದು ಅನಿವಾರ್ಯ. ಆದರೆ ದಿನ ಸರಿಯಾಗಿಲ್ಲ ಅಥವಾ ಹೊಸ ವರ್ಷ, ವಿಶೇಷ ದಿನಗಳಂದು ಶಿಶು ಜನನವಾಗಬೇಕೆಂದು ಅನಗತ್ಯವಾಗಿ ಸಿಸೇರಿಯನ್ ಮೊರೆ ಹೋಗುವುದು ಸರಿಯಲ್ಲ. ಇತ್ತೀಚೆಗೆ ಕೆಲವೆಡೆ ಇಂತಹದ್ದು ನಡೆಯುತ್ತಿದ್ದು, ಆತಂಕಕಾರಿ ಸಂಗತಿ. ಶಿಶು ಜನನ ಆಗಬೇಕಾದ ಅವಧಿಗೆ ಆಗಬೇಕೇ ವಿನಾ ಅವಧಿಪೂರ್ವಕವಾಗಿ ಮಾಡಿಸಿಕೊಳ್ಳುವುದು ತಪ್ಪು. ಈ ಬಗ್ಗೆ ಪೋಷಕರು ಅರಿತುಕೊಳ್ಳಬೇಕು.
-ದುರ್ಗಾಪ್ರಸಾದ್, ವೈದ್ಯಕೀಯ ಅಧೀಕ್ಷಕರು ಲೇಡಿಗೋಶನ್ ಸರಕಾರಿ ಆಸ್ಪತ್ರೆ ಮಂಗಳೂರು