Advertisement

ಬಿಸಿಸಿಐ ಹೊಸ ಬಾಸ್‌ಗಳ ತಂಡದಲ್ಲಿ ಬಿಷನ್‌ ಬೇಡಿ, ರಾಮಚಂದ್ರ ಗುಹಾ?

11:43 AM Jan 20, 2017 | udayavani editorial |

ಹೊಸದಿಲ್ಲಿ : ವಿಶ್ವನೀಯ ಮೂಲಗಳಿಂದ ತಿಳಿದುಬಂದಿರುವ ಪ್ರಕಾರ ಪ್ರಖ್ಯಾತ ಸ್ಪಿನ್‌ ಮಾಂತ್ರಿಕ ಬಿಷನ್‌ ಸಿಂಗ್‌ ಬೇಡಿ ಅವರು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿಯ ಹೊಸ ಬಾಸ್‌ ಆಗಿದ್ದಾರೆ.

Advertisement

ಬೇಡಿ ಅವರೊಂದಿಗೆ ಖ್ಯಾತ ಅಂಕಣಕಾರ, ಚಿಂತಕ ರಾಮಚಂದ್ರ ಗುಹಾ, ವಿನೋದ್‌ ರಾಯ್‌ ಮತ್ತು ಫಾರೂಕ್‌ ಇಂಜಿನಿಯರ್‌ ಅವರು ಬಿಸಿಸಿಐ ನ ಹೊಸ ಬಾಸ್‌ಗಳಾಗುವ ಸಂಭವವಿದೆ.

ಸುಪ್ರೀಂ ಕೋರ್ಟ್‌ ಬಿಸಿಸಿಐ ನ ಹೊಸ ಆರು ಆಡಳಿತಗಾರರ ಹೆಸರುಗಳನ್ನು ಪ್ರಕಟಿಸಲಿದೆ. ಈ ಆಡಳಿತಗಾರರು ಜಸ್ಟಿಸ್‌ ಲೋಧಾ ಕಮಿಟಿಯ ಶಿಫಾರಸುಗಳ ಅನುಷ್ಠಾನದ ಮೇಲುಸ್ತುವಾರಿ ನಡೆಸಲಿದ್ದಾರೆ.

ಸುಪ್ರೀಂ ಕೋರ್ಟ್‌, ವಕೀಲ ಅನಿಲ್‌ ಬಿ ಧವನ್‌ ಮತ್ತು ಗೋಪಾಲ ಸುಬ್ರಮಣಿಯಂ ಅವರನ್ನು ಬಿಸಿಸಿಐ ಆಡಳಿತಗಾರರ ಹುದ್ದೆಗೆ ಉತ್ತಮ ಯೋಗ್ಯತೆ ಹಾಗೂ ನಂಬಿಗಸ್ಥರಿರುವ ವ್ಯಕ್ತಿಗಳನ್ನು ಹೆಸರಿಸುವಂತೆ ಕೇಳಿಕೊಂಡಿತ್ತು. 

ಈ ತಿಂಗಳ ಆದಿಯಲ್ಲಿ ಬಿಸಿಸಿಐ ಅಧ್ಯಕ್ಷ ಅನುರಾಗ್‌ ಠಾಕೂರ್‌ ಮತ್ತು ಕಾರ್ಯದರ್ಶಿ ಅಜಯ್‌ ಶಿರ್ಕೆ ಅವರನ್ನು ಸುಪ್ರೀಂ ಕೋರ್ಟ್‌ ವಜಾ ಮಾಡಿತ್ತು. ಕೋರ್ಟ್‌ ಆದೇಶ ಪಾಲನೆ ಮಾಡದಿದ್ದುದಕ್ಕೆ ಮತ್ತು ಬಿಸಿಸಿಐ ವ್ಯವಹಾರಗಳಲ್ಲಿ ಪಾರದರ್ಶಕತೆಯನ್ನು ಕಾಯ್ದುಕೊಳ್ಳದ ಕಾರಣಕ್ಕೆ ಅವರನ್ನು ಸುಪ್ರೀಂ ಕೋರ್ಟ್‌ ಹುದ್ದೆಯಿಂದ ವಜಾ ಮಾಡಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next