Advertisement
23 ಆರೋಗ್ಯ ಸೇವೆಯ 108 ವಾಹನ: ತುರ್ತು ಸಂದರ್ಭದಲ್ಲಿ ಮಾನವನ ಜೀವ ಉಳಿಸಲು ಪಯುಕ್ತವಾಗಿರುವ ಆರೋಗ್ಯ ಸೇವೆಯ 108 ಯೋಜನೆಯಡಿ ಜಿಲ್ಲೆಗೆ 23 ವಾಹನ ನೀಡಿದ್ದು,ಇಲ್ಲಿಯೂ 3 ಹೊಸ ಅಂಬ್ಯುಲೆನ್ಸ ನೀಡಲಾಗಿದೆ. ಬಾಗಲಕೋಟೆ ತಾಲೂಕಿನಲ್ಲಿ 5, ಜಮಖಂಡಿ-3, ರಬಕವಿ-ಬನಹಟ್ಟಿ-1, ಮುಧೋಳ-3, ಬೀಳಗಿ-3, ಹುನಗುಂದ-4, ಬಾದಾಮಿ ತಾಲೂಕಿನಲ್ಲಿ 4 ಸೇರಿ ಒಟ್ಟು 23 ಆಂಬ್ಯುಲೆನ್ಸ್ ವಾಹನಗಳು ಆರೋಗ್ಯ ಸೇವೆಯ 108 ಯೋಜನೆಯಡಿ ಕಾರ್ಯ ನಿರ್ವಹಿಸುತ್ತಿವೆ.
ಸೇವೆಗಾಗಿ ಪ್ರತ್ಯೇಕ ಆಂಬ್ಯುಲೆನ್ಸ್ ಹೊರತುಪಡಿಸಿ, ಪ್ರತಿಯೊಂದು ತಾಲೂಕು ಆಸ್ಪತ್ರೆಗೂ ನಗು-ಮಗು ವಿಶೇಷ ಅಂಬ್ಯುಲೆನ್ಸಗಳಿವೆ. ಈ ಆಂಬ್ಯುಲೆನ್ಸ್ ಗಳು, ಸರ್ಕಾರಿ ಆಸ್ಪತ್ರೆಗೆಯಲ್ಲಿ ಹೆರಿಗೆ ಮಾಡಿಸಿಕೊಂಡ ಮಹಿಳೆಯರು, ಹುಟ್ಟಿದ ಮಗುವಿನೊಂದಿಗೆ ಮನೆಗೆ ಬಿಟ್ಟು ಬರಲೆಂದೇ ಈ ನಗು-ಮಗು ಆಂಬ್ಯುಲೆನ್ಸ್ ಬಳಸಲಾಗುತ್ತದೆ. ಆದರೆ, ಈಚಿನ ದಿನಗಳಲ್ಲಿ ಈ ಆಂಬ್ಯುಲೆನ್ಸ್ ಗಳ ಸದ್ಭಳಕೆಯಾಗುತ್ತಿಲ್ಲ ಎಂಬ ಮಾತು ಕೇಳಿ ಬಂದಿದೆ.
Related Articles
ಕಾರ್ಯ ನಿರ್ವಹಿಸುತ್ತಿವೆ.
Advertisement
ಬಾದಾಮಿ ವಿಧಾನಸಭೆ ಮತಕ್ಷೇತ್ರ ವ್ಯಾಪ್ತಿಯ ಬಾದಾಮಿ ತಾಲೂಕಿನಲ್ಲಿ 108ನ 4 ಹಾಗೂ ಇಲಾಖೆಯಿಂದ 11 ಆಂಬ್ಯುಲೆನ್ಸ್ ಗಳಿವೆ. ಅಲ್ಲದೇ ನಮ್ಮ ಕ್ಷೇತ್ರದ ಶಾಸಕರೂ ಆಗಿರುವ ಮಾಜಿಸಿಎಂ ಸಿದ್ದರಾಮಯ್ಯ ಅವರು ತಮ್ಮ ಪ್ರದೇಶಾಭಿವೃದ್ಧಿ ನಿಧಿ ಯೋಜನೆಯಡಿ 2 ಹೊಸ ಆಂಬ್ಯುಲೆನ್ಸ್ ಅನ್ನು ಇಲಾಖೆಗೆ ನೀಡಿದ್ದಾರೆ. ಅದರಲ್ಲಿ ಗುಳೇದಗುಡ್ಡ ಮತ್ತು ಬಾದಾಮಿ ತಾಲೂಕಿಗೆ ಪ್ರತ್ಯೇಕ ತಲಾ ಒಂದೊಂದು ಆಂಬ್ಯುಲೆನ್ಸ್ ಬಳಸಲು ತಿಳಿಸಲಾಗಿದೆ. ಕ್ಷೇತ್ರದ ಪ್ರತಿ 10ರಿಂದ 15 ಕಿ.ಮೀ ವ್ಯಾಪ್ತಿಯಲ್ಲಿ ಆಂಬ್ಯುಲೆನ್ಸ್ ಸೇವೆ ದೊರೆಯಬೇಕು ಎಂಬುದು ನಮ್ಮ ಸಿದ್ದರಾಮಯ್ಯ ಅವರ ಬಯಕೆ.
– ಹೊಳಬಸು ಶೆಟ್ಟರ, ಕಾಂಗ್ರೆಸ್ ಮುಖಂಡ, ಗುಳೇದಗುಡ್ಡ-ಬಾದಾಮಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಜಿಲ್ಲೆಗೆ 9 ಹೊಸ ಅಂಬ್ಯುಲೆನ್ಸ ಬಂದಿದ್ದು, ಇಲಾಖೆಯ ನಿಯಮಾವಳಿ ಪ್ರಕಾರ ಸ್ಥಳೀಯ ಸಾರಿಗೆ ಇಲಾಖೆಯಲ್ಲಿ ನೋಂದಾವಣೆ ಮಾಡಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 46 ಆಂಬ್ಯುಲೆನ್ಸ್ ಇವೆ.
– ನಾಯ್ಕೋಡಿ ಆರೋಗ್ಯ ಮತ್ತು ಕಲ್ಯಾಣ ಇಲಾಖೆ – ಶ್ರೀಶೈಲ ಕೆ. ಬಿರಾದಾರ