Advertisement

ರಾಜ್ಯದಲ್ಲಿ ಮತ್ತೆ ಎಂಟು ಕೋವಿಡ್ ಪಾಸಿಟಿವ್ ಪ್ರಕರಣ: 700 ದಾಟಿದ ಸೋಂಕಿತರ ಸಂಖ್ಯೆ

08:27 AM May 08, 2020 | keerthan |

ಬೆಂಗಳೂರು: ರಾಜ್ಯದಲ್ಲಿ ಇಂದು ಎಂಟು ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗಿದೆ. ಇದರಿಂದ ರಾಜ್ಯದ  ಕೋವಿಡ್-19 ಸೋಂಕಿತರ ಸಂಖ್ಯೆ 700 ದಾಟಿದೆ.

Advertisement

ಇಂದು ದಾವಣಗೆರೆ, ಕಲಬುರ್ಗಿ, ಬೆಳಗಾವಿ ಮತ್ತು ಬೆಂಗಳೂರು ನಗರ ಜಿಲ್ಲೆಗಳಲ್ಲಿ ಸೋಂಕು ಪ್ರಕರಣಗಳು ದೃಢವಾಗಿದೆ.

ದಾವಣಗೆರೆಯಲ್ಲಿ ಮೂವರು ಮಹಿಳೆಯರಿಗೆ ಕೋವಿಡ್-19 ಸೋಂಕು ದೃಢವಾಗಿದೆ. 55, 53, 40 ವರ್ಷದ ಮಹಿಳೆಯರಿಗೆ ಸೋಂಕು ಕೋವಿಡ್-19 ಸೋಂಖು ತಾಗಿರುವುದು ವರದಿಯಲ್ಲಿ ಖಚಿತವಾಗಿದೆ. ಅದರಲ್ಲಿ 55 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ. ಅವರು ರಕ್ತದೊತ್ತಡ, ಮಧುಮೇಹ ಮುಂತಾದ ರೋಗಗಳಿಮದ ಬಳಲುತ್ತಿದ್ದರು.

ಕಲಬುರಗಿಯಲ್ಲೂ ಮೂವರಿಗೆ ಸೋಂಕು ತಾಗಿರುವುದು ದೃಢವಾಗಿದೆ. ಸೋಂಕಿತ ಸಂಖ್ಯೆ 641ರ ಸಂಪರ್ಕದಿಂದ 36 ಮತ್ತು 41 ವರ್ಷದ ಪುರುಷರಿಗೆ ಸೋಂಕು ತಾಗಿದೆ. ಮತ್ತೊಂದು ಪ್ರಕರಣದಲ್ಲಿ ಸೋಂಕಿತ ಸಂಖ್ಯೆ 642ರ ಸಂಪರ್ಕದಿಂದ 35 ವರ್ಷದ ಪುರುಷನಿಗೆ ಸೋಂಕು ದೃಢವಾಗಿದೆ.

ಬೆಂಗಳೂರು ನಗರದ 49 ವರ್ಷದ ಮಹಿಳೆಗೆ ಕೋವಿಡ್-19 ಸೋಂಕು ದೃಢವಾಗಿದೆ. ಬೆಳಗಾವಿ ಜಿಲ್ಲೆಯ ಹಿರೇವಾಗೆವಾಡಿಯ 13 ವರ್ಷದ ಬಾಲಕಿಗೆ ಸೋಂಕು ತಾಗಿದೆ. ಈಕೆಗೆ ಸೋಂಕಿತ ಸಂಖ್ಯೆ 364ರ ಸಂಪರ್ಕದಿಂದ ಸೋಂಕು ತಾಗಿದೆ.

Advertisement

ರಾಜ್ಯದ ಒಟ್ಟು ಸೋಂಕಿತ ಸಂಖ್ಯೆ 701ಕ್ಕೆ ಮುಟ್ಟಿದೆ. ಅದರಲ್ಲಿ 30 ಜನರು ಸಾವನ್ನಪ್ಪಿದರೆ, 363 ಸೋಂಕಿತರು ಗುಣಮುಖರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next