Advertisement

ಯುಎಇನಲ್ಲಿ ಹೊಸದಾಗಿ 41 ಕೋವಿಡ್ 19 ವೈರಸ್ ಪ್ರಕರಣ ಪತ್ತೆ

09:39 AM Mar 31, 2020 | Hari Prasad |

ಯುನೈಟೆಡ್‌ ಅರಬ್‌ ಎಮಿರೇಟ್ಸ್‌ನಲ್ಲಿ (ಯುಎಇ) ಸೋಮವಾರ ಹೊಸದಾಗಿ 41 ಕೋವಿಡ್ 19 ವೈರಸ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಆ ದೇಶದಲ್ಲಿ ಕೋವಿಡ್ 19 ವೈರಸ್ ಪೀಡಿತರ ಸಂಖ್ಯೆ 611ಕ್ಕೇರಿದೆ. ಇದರ ನಡುವೆಯೇ, ಮೂವರು ಸೋಂಕಿತರು ಚಿಕಿತ್ಸೆ ಫ‌ಲಕಾರಿಯಾಗದೇ ಸೋಮವಾರ ಕೊನೆಯುಸಿರೆಳೆದಿದ್ದಾರೆ ಎಂದು ಯುಎಇ ಆರೋಗ್ಯ ಇಲಾಖೆ ತಿಳಿಸಿದೆ.

Advertisement

ಇದರಿಂದ ಕೋವಿಡ್ 19 ವೈರಸ್ ಗೆ ಯುಎಇನಲ್ಲಿ ಸಾವಿಗೀಡಾದವರ ಸಂಖ್ಯೆ ಐದಕ್ಕೇರಿದೆ.  ಸೋಮವಾರ ಅಸುನೀಗಿದವರಲ್ಲಿ ಒಬ್ಟಾತ 48 ವರ್ಷದವನಾಗಿದ್ದು, ಆತ ಹೃದಯ ಸಂಬಂಧಿ ಕಾಯಿಲೆ ಹಾಗೂ ಮಧುಮೇಹದಿಂದ ಬಳಲುತ್ತಿದ್ದ. ಮತ್ತೂಬ್ಬ 42 ವರ್ಷದ ಮಹಿಳೆ, ಹೃದ್ರೋಗದಿಂದ ಬಳಲುತ್ತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next