ಕಾಸರಗೋಡು: ಅಮಲು ಪದಾರ್ಥ ಹ್ಯಾಶಿಸ್ ಆಯಿಲ್ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿ ಹೊಸದುರ್ಗ ಪಡನ್ನಕ್ಕಾಡ್ ಬಿಸ್ಮಿಲ್ಲಾ ಮಂಜಿಲ್‌ನ ರಿಯಾಸ್ ಎ.ಸಿ.(29)ಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ(ದ್ವಿತೀಯ) ಹತ್ತು ವರ್ಷ ಕಠಿನ ಸಜೆ ಮತ್ತು ಒಂದು ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದೆ. ದಂಡ ಪಾವತಿಸದಿದ್ದಲ್ಲಿ ಮೂರು ತಿಂಗಳು ಹೆಚ್ಚುವರಿ ಸಜೆ ಅನುಭವಿಸುವಂತೆ ತೀರ್ಪಿನಲ್ಲಿ ತಿಳಿಸಿದೆ. 2022 ಸೆ.29 ರಂದು ಬೇಕಲ ಕೋಟೆ ಸಮೀಪ ರಿಯಾಸ್‌ನನ್ನು ಬೇಕಲ ಪೊಲೀಸರು ಬಂಧಿಸಿದ್ದರು.
Advertisement
ಕೆರೆಗೆ ಬಿದ್ದು ಸಾವುಕಾಸರಗೋಡು: ಮರದ ರೆಂಬೆ ಕಡಿಯಲು ಮರಕ್ಕೆ ಹತ್ತಿದ ಬೆಳ್ಳೂರು ಕಕ್ಕೆಬೆಟ್ಟು ನಿವಾಸಿ ಬಾಬು ನಾಯ್ಕ(60) ಅವರು ಕೆರೆಗೆ ಬಿದ್ದು ಸಾವಿಗೀಡಾದರು. ಮರ ಕಡಿಯುತ್ತಿದ್ದ ಸಂದರ್ಭದಲ್ಲಿ ಆಯ ತಪ್ಪಿ ಕೆರೆಗೆ ಬಿದ್ದಿದ್ದು, ಅಗ್ನಿಶಾಮಕ ದಳ ಅವರನ್ನು ಮೇಲಕ್ಕೆತ್ತಿದರೂ, ರಕ್ಷಿಸಲು ಸಾಧ್ಯವಾಗಲಿಲ್ಲ.
ಕಾಸರಗೋಡು: ಇಪ್ಪತ್ತರ ಯುವತಿಗೆ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ತಿರುವನಂತಪುರ ಆಟಿಂಗಲ್ ನಿವಾಸಿ ಶ್ಯಾಂಜಿತ್(26) ವಿರುದ್ಧ ನೀಲೇಶ್ವರ ಪೊಲೀಸರು ಕೇಸು ದಾಖಲಿಸಿದ್ದಾರೆ. ಯುವಕನ ಅಪಹರಣ : ಬಂಧನ
ಕಾಸರಗೋಡು: ಚಟ್ಟಂಚಾಲ್ ಕುನ್ನಾರದ ಕೆ.ಅರ್ಶಾದ್(26) ಅವರನ್ನು ಕಾರಿನಲ್ಲಿ ಬಂದು ಅಪಹರಿಸಿದ ಪ್ರಕರಣಕ್ಕೆ ಸಂಬಂಧಿಸಿ ಆಲಂಪಾಡಿ ಅಕ್ಕರಪಳ್ಳ ನಿವಾಸಿ ಅಮೀರಲಿ(26)ನನ್ನು ಮೇಲ್ಪರಂಬ ಪೊಲೀಸರು ಬಂಧಿಸಿದ್ದಾರೆ.
Related Articles
ಕುಂಬಳೆ: ಪೆರ್ಮುದೆಯ ಹೊಟೇಲ್ ವ್ಯಾಪಾರಿ ರಾಮಕೃಷ್ಣ ಅವರ ಮನೆಯಿಂದ ಬೆಳ್ಳಿ ಆಭರಣಗಳು, 20 ಸಾವಿರ ರೂ. ನಗದು, ದಾಖಲೆ ಪತ್ರಗಳನ್ನು ಕಳವು ಮಾಡಿದ ಘಟನೆ ನಡೆದಿದೆ. ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
Advertisement