Advertisement

ಗೋರೆಗಾಂವ್‌ ಪಶ್ಚಿಮದಲ್ಲಿ ಮೋಡೆಲ್‌ ಬ್ಯಾಂಕಿನ ನೂತನ 24ನೇ ಶಾಖೆ ಉದ್ಘಾಟನೆ

11:56 AM May 02, 2019 | Vishnu Das |

ಮುಂಬಯಿ:ಯಾವತ್ತೂ ಶ್ರಮ ಜೀವನದಿಂದಲೇ ಸಾಧನೆಯ ಸಿದ್ಧಿ ಸಾಧ್ಯವಾಗುವುದು. ನಾವು ಪರಸ್ಪರ ಎಷ್ಟು ದಯಾಳುಗಳಾಗಿ ಹಸನ್ಮುಖೀಗಳಾಗಿ ವ್ಯವಹರಿಸುತ್ತೇವೆಯೋ ಅದೇ ನಮ್ಮ ಪಾಲಿಗೆ ಸಮೃದ್ಧಿಯ ಆಶೀರ್ವಾದವಾಗಿ ಫಲಿಸುತ್ತದೆ. ಹಣದ ವ್ಯವಹಾರ ಜೀವನೋಪಾಯವಷ್ಟೇ. ಹಣ ಎನ್ನುವುದು ವ್ಯವಹಾರ ಚಲಾವಣಾ ಕ್ರಿಯೆಯೇ ಹೊರತು ಬದುಕಲ್ಲ. ಆದರೆ ಜೀವನ ಅನ್ನುವುದು ವಿಶ್ವಾಸದ ಪ್ರತೀಕವಾಗಿದೆ.

Advertisement

ನಂಬಿಕೆ-ವಿಶ್ವಾಸವೇ ಹಣಕಾಸು ವ್ಯವಹಾರದ ಯಶಸ್ಸು ಆಗಿದೆ. ಇಬ್ಬರೊಳಗಿನ ವಿಶ್ವಾಸವೇ ಆರ್ಥಿಕ ಭದ್ರತೆ ಆಗಿರುತ್ತದೆ ಎಂದು ಗ್ರಾಮೀಣ್‌ ಕ್ಯಾಪಿಟಲ್‌ ಇಂಡಿಯಾ ಲಿಮಿಟೆಡ್‌ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ರೋಯ್‌ಸ್ಟನ್‌ ಬ್ರಗನಾl ನುಡಿದರು.
ಮಹಾರಾಷ್ಟ್ರ ದಿನಾಚರಣೆ ಮತ್ತು ವಿಶ್ವ ಕಾರ್ಮಿಕ ದಿನದ ಶುಭಾವಸರವಾದ ಮೇ 1 ರಂದು ಗೋರೆಗಾಂವ್‌ ಪಶ್ಚಿಮದ ಎಂ. ಜಿ. ರಸ್ತೆಯಲ್ಲಿನ ಏಕ್‌ವೀರ ಪ್ರಸಾದ್‌ ಕಟ್ಟಡದಲ್ಲಿ ಮೋಡೆಲ್‌ ಕೋ. ಆಪರೇಟಿವ್‌ ಬ್ಯಾಂಕ್‌ ಲಿಮಿಟೆಡ್‌ ಇದರ 24ನೇ ನೂತನ ಶಾಖೆಯನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿ ಶುಭಹಾರೈಸಿದರು.

ಮೋಡೆಲ್‌ ಬ್ಯಾಂಕ್‌ನ ಕಾರ್ಯಾಧ್ಯಕ್ಷ ಆಲ್ಬರ್ಟ್‌ ಡಬ್ಲೂé.ಡಿ’ಸೋಜಾ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಗೋರೆಗಾಂವ್‌ ಪಶ್ಚಿಮದ ಅವರ್‌ ಲೇಡಿ ಆಫ್‌ ರೋಸರಿ ಚರ್ಚ್‌ನ ಮುಖ್ಯ ಧರ್ಮಗುರು ರೆ| ಫಾ| ಡಾ| ಫ್ರಾನ್ಸಿಸ್‌ ಕರ್ವಾಲೋ ಅವರು ದೀಪ ಪ್ರಜ್ವಲಿಸಿ ಆಶೀರ್ವಚನಗೈದು, ಜನ ಸೇವೆಯಷ್ಟೇ ಹಣ ಸೇವೆಯೂ ಮುಖ್ಯ. ಕಾರಣ ಧನವೇ ಜೀವನೋಪಯದ ಶಕ್ತಿಯಾಗಿದೆ. ಯಾವುದೇ ಕ್ಷೇತ್ರದಲ್ಲೂ ಸಾಧನೆ ಮಾಡಿದ್ದಲ್ಲಿ ಯಶಸ್ಸು ಸಾಧ್ಯವಾಗುವುದು ಎನ್ನುವುದನ್ನು ಮೋಡೆಲ್‌ ಬ್ಯಾಂಕಿನ ಮಹತ್ಕಾರ್ಯದಿಂದ ಅರ್ಥೈಯಿಸಬಹುದು. ಹಣಕಾಸು ವ್ಯವಹಾರದಲ್ಲಿ ಧನ ಲಾಭಕ್ಕಿಂತ ಸಂಬಂಧ ಲಾಭವೇ ಪ್ರಧಾನವಾದುದು. ಇದು ಜೀವ ಪ್ರೋತ್ಸಾಹಕ್ಕೆ ಉತ್ತೇಜನವಾಗಿ ವಿಶ್ವಾಸವಾಗಿ ಬೆಳೆಯುವುದು ಎಂದರು.

ಬ್ಯಾಂಕ್‌ನ ಸಂಸ್ಥಾಪಕಾಧ್ಯಕ್ಷ ಜೋನ್‌ ಡಿಸಿಲ್ವಾ ವೇದಿಕೆಯಲ್ಲಿ ಉಪಸ್ಥಿತರಿದ್ದು ಮಾತನಾಡಿ, ಬ್ಯಾಂಕ್‌ ಆಗಿ ಪರಿವರ್ತನೆಗೊಂಡ ಬಳಿಕದ 20 ವರ್ಷಗಳಲ್ಲಿ 24 ಶಾಖೆಗಳನ್ನೊಳಗೊಂಡ ಬ್ಯಾಂಕ್‌ ದಕ್ಷ ಸೇವೆಯಿಂದಲೇ ಗ್ರಾಹಕರ ವಿಶ್ವಾಸ ಗಳಿಸಿ ಕನಿಷ್ಠಾವಧಿಯಲ್ಲಿ ಸ್ವಂತಿಕೆಯ ಪ್ರತಿಷ್ಠೆ ರೂಢಿಸಿಕೊಂಡಿದೆ. ಆಧುನಿಕ ಬದುಕನ್ನು ಹರಸುವ ಯುವ ಜನತೆಗೆ ವಿಪುಲ ಸೇವಾವಕಾಶ ಒದಗಿಸಿ ಅವರಲ್ಲಿನ ಕೌಶಲ್ಯತೆಯನ್ನು ವೃದ್ಧಿಸಿ ಉದ್ಯಮಿಗಳಾಗುವತ್ತ ಪ್ರೋತ್ಸಾಹಿಸುತ್ತಿದೆ ಎಂದು ನುಡಿದು ಎಲ್ಲರ ಸಹಕಾರ ಬಯಸಿದರು.

ಕಾರ್ಯಕ್ರಮದಲ್ಲಿ ಬ್ಯಾಂಕಿನ ಉಪ ಕಾರ್ಯಾಧ್ಯಕ್ಷ ವಿಲಿಯಂ ಸಿಕ್ವೇರಾ, ನಿರ್ದೇ ಶಕರುಗಳಾದ ವಿನ್ಸೆಂಟ್‌ ಮಥಾಯಸ್‌, ಸಿಎ ಪೌಲ್‌ ನಝರೆತ್‌, ಥೋಮಸ್‌ ಡಿ.ಲೋಬೊ, ಅಬ್ರಹಾಂ ಕ್ಲೇಮೆಂಟ್‌ ಲೊಬೋ, ಸಂಜಯ್‌ ಶಿಂಧೆ, ನ್ಯಾಯವಾದಿ ಪಿಯುಸ್‌ ವಾಸ್‌, ಬೆನೆಡಿಕ್ಟಾ ರೆಬೆಲ್ಲೋ, ಮರಿಟಾ ಡಿಮೆಲ್ಲೋ, ಬ್ಯಾಂಕ್‌ನ ಸಿಇಒ, ಮಹಾ ಪ್ರಬಂಧಕ ವಿಲಿಯಂ ಎಲ್‌.ಡಿಸೋಜಾ, ಉನ್ನತಾಧಿಕಾರಿಗಳಾದ ರಾಯ್ನ ಬ್ರಾಂಕೋ, ಜೆಸನ್‌ ಮಾರ್ಟಿಸ್‌, ಅನಿಲ್‌ ಮಿನೇಜಸ್‌, ಬೀಯೆಟಾ ಕಾರ್ವಾಲೋ, ಬಾಂಬೇ ಕಥೋಲಿಕ್‌ ಸಭಾ ಇದರ ಆ್ಯಂಟನಿ ಡಾಯಸ್‌, ಅಲೆಕ್ಸ್‌ ಡಿಸೋಜಾ ಗೋರೆಗಾಂವ್‌, ಕೊಂಕಣಿ ಸೇವಾ ಮಂಡಳ್‌ ಗೋರೆಗಾಂವ್‌ ಅಧ್ಯಕ್ಷ ಜೋನ್ಸನ್‌ ಡಿಸೋಜಾ, ಕಾರ್ಯದರ್ಶಿ ರಿಚಾರ್ಡ್‌ ಡೆಸಾ, ತಮಿಳ್‌ ಕ್ಯಾಥೋಲಿಕ್‌ ಅಸೋಸಿಯೇಶನ್‌ ಗೋರೆಗಾಂವ್‌ ಅಧ್ಯಕ್ಷ ಮಣಿ ಸೆಲ್ವಾಂ, ಸೈಂಟ್‌ ಥೋಮಸ್‌ ಅಕಾಡೆಮಿ ಗೋರೆಗಾಂವ್‌ ಇದರ ಪ್ರಾಂಶುಪಾಲೆ ಭಗಿನಿ ಸಿ. ರಮೊನಾ, ಅಲ್ಬನ್‌ ಬ್ರಗನl, ಹೆಸರಾಂತ್‌ ಸಂಗೀತಗಾರ ಹೆನ್ರಿ ಡಿಸೋಜಾ, ಕಟ್ಟಡದ ಮಾಲಕಿ ಡಾ| ಇಂದು ಮಹಾಜನ್‌, ಉದ್ಯಮಿ ಕಾರೋಲಿನ್‌ ಪಿರೇರಾ, ಸ್ಥಾನೀಯ ಗಣ್ಯರು ಸೇರಿದಂತೆ ಬ್ಯಾಂಕಿನ ಷೇರುದಾರರು, ಗ್ರಾಹಕರು, ಹಿತೈಷಿಗಳು ಉಪಸ್ಥಿತರಿದ್ದು ಮೋಡೆಲ್‌ ಬ್ಯಾಂಕಿನ ಶ್ರೇಯೋಭಿವೃದ್ಧಿಗೆ
ಶುಭ ಹಾರೈಸಿದರು.

Advertisement

ಬ್ಯಾಂಕಿನ ಉಪ ಕಾರ್ಯಾಧ್ಯಕ್ಷ ವಿಲಿಯಂ ಸಿಕ್ವೇರಾ ಸ್ವಾಗತಿಸಿ, ಅತಿಥಿಗಳನ್ನು ಪುಷ್ಪಗುತ್ಛವನ್ನಿತ್ತು ಗೌರವಿಸಿದರು. ನಿರ್ದೇಶಕ ಥೋಮಸ್‌ ಡಿ’ಲೋಬೊ ಪ್ರಸ್ತಾವನೆಗೈದರು. ಎಡ್ವರ್ಡ್‌ ರಾಸ್ಕಿನ್ಹಾ ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಶಾಖಾ ಪ್ರಬಂಧಕಿ ರೈನಾ ಫೆರ್ನಾಂಡಿಸ್‌ ಪ್ರಾರ್ಥನೆಗೈದು ವಂದಿಸಿದರು.

ದೇಶಕ್ಕಾಗಿ ಕೊಡುಗೆ ನೀಡುವುದಕ್ಕಿಂತ ಉತ್ತಮ ಕೆಲಸ ಬೇರೇನೂ ಇಲ್ಲ. ನಾಗರಿಕರು ತಮ್ಮ ಕರ್ತವ್ಯವನ್ನು ಬ್ಯಾಂಕ್‌ನಲ್ಲಿ ಇಲ್ಲಿಯವರೆಗೆ ಸುಮಾರು 70,000 ಷೇರುದಾರರಿದ್ದು, 37 ಕೋಟಿ ರೂ. ಷೇರು ಮೊತ್ತ ಹೊಂದಿದೆ. ಸದ್ಯ 1,030 ಕೋಟಿ ರೂ. ಠೇವಣಿ ಹೊಂದಿ ಒಟ್ಟು 1,600 ಕೋಟಿ ರೂ. ವ್ಯವಹಾರ ನಡೆಸಿದೆ. ಆ ಪೈಕಿ 570 ಕೋಟಿ ರೂ. ಮುಂಗಡ ಠೇವಣಿಯೊಂದಿಗೆ ಮುನ್ನಡೆಯುತ್ತಿದೆ. ನಗುಮುಖದ ಸೇವೆಯೇ ನಮ್ಮ ಧ್ಯೇಯವಾಗಿದ್ದು, ಯಾವತ್ತೂ ಚಿಕ್ಕದಾದುದೇ ಅಧಿಕ ಫಲೋತ್ಪಾದಕ ಅನ್ನುವಂತೆ ನಮ್ಮದು ಕಿರಿಯ ಬ್ಯಾಂಕ್‌ ಆಗಿದ್ದರೂ ಹಿರಿತನವುಳ್ಳದ್ದಾಗಿ ಸೇವಾ ಸತ್ಪಲತೆ ಹೊಂದಿದೆ. ಕಡಿಮೆ ಬಡ್ಡಿದೊಂದಿಗೆ ಹೆಚ್ಚು ಸೇವೆಗಳನ್ನು ನೀಡುತ್ತಾ ಮಾನವೀಯ ಮೌಲ್ಯಗಳನ್ನು ಗೌರವಿಸಿ ಪ್ರೋತ್ಸಾಹಿಸುತ್ತಾ ಸೇವೆಯಲ್ಲಿ ಕಾರ್ಯತೃಪ್ತವಾಗಿದೆ.
– ಆಲ್ಬರ್ಟ್‌ ಡಿಸೋಜಾ,
ಕಾರ್ಯಾಧ್ಯಕ್ಷರು, ಮೋಡೆಲ್‌ ಕೋ. ಆಪರೇಟಿವ್‌ ಬ್ಯಾಂಕ್‌

ಚಿತ್ರ-ವರದಿ : ರೋನ್ಸ್‌ ಬಂಟ್ವಾಳ್‌

Advertisement

Udayavani is now on Telegram. Click here to join our channel and stay updated with the latest news.

Next