ಬೆಂಗಳೂರು: ರಾಜ್ಯದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ ಮತ್ತಷ್ಟು ಏರಿಕೆಯಾಗಿದೆ. ಇಂದು ರಾಜ್ಯದಲ್ಲಿ 19 ಹೊಸ ಸೋಂಕಿತರ ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 692ಕ್ಕೆ ಏರಿಕೆಯಾಗಿದೆ.
ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿ 13 ಸೋಂಕು ಪ್ರಕರಣಗಳು ಪತ್ತೆಯಾಗಿದ್ದರೆ, ದಕ್ಷಿಣ ಕನ್ನಡದಲ್ಲಿ ಮೂರು, ಬೆಂಗಳೂರು ನಗರದಲ್ಲಿ ಎರಡು, ಕಲಬುರಗಿಯಲ್ಲಿ ಒಂದು ಪ್ರಕರಣ ದೃಢವಾಗಿದೆ.
ಸೋಂಕಿತ ಸಂಖ್ಯೆ 607ರ ಸಂಪರ್ಕದಿಂದ ಬಾಗಲಕೋಟೆ ಜಿಲ್ಲೆಯಲ್ಲಿ ಸೋಂಕು ಹರಡಿದೆ. 13 ಜನರ ಕೋವಿಡ್-19 ಸೋಂಕಿತರನ್ನು ನಿಗಧಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ದಕ್ಷಿಣ ಕನ್ನಡದಲ್ಲಿ ಮಂಗಳೂರಿನ ಬೋಳೂರಿನ ಇಬ್ಬರಿಗೆ ಸೋಂಕು ತಾಗಿದೆ. ಸೋಂಕಿತ ಸಂಖ್ಯೆ 536ರ ಸಂಪರ್ಕದಿಂದ ಇಬ್ಬರಿಗೆ ಸೋಂಕು ತಾಗಿದೆ. ಬಂಟ್ವಾಳದ ಪಿ- 390 ಸಂಖ್ಯೆ ಸೋಂಕಿತರಿಂದ 16 ವರ್ಷದ ಬಾಲಕಿಗೆ ಸೋಂಕು ತಾಗಿದೆ.
ಸೋಂಕಿತ ಸಂಖ್ಯೆ 654ರ ಸಂಪರ್ಕದಿಂದ ಬೆಂಗಳೂರು ನಗರದ ಇಬ್ಬರಿಗೆ ಸೋಂಕು ತಾಗಿದೆ. 40 ವರ್ಷದ ಮಹಿಳೆ ಮತ್ತು 25 ವರ್ಷದ ಯುವಕನಿಗೆ ಸೋಂಕು ದೃಢವಾಗಿದೆ.
ಕಲಬುರಗಿಯ 52 ವರ್ಷದ ಪುರುಷನಿಗೆ ಸೋಂಕು ತಾಗಿರುವುದು ದೃಢವಾಗಿದ್ಉ, ಈತನಿಗೆ ಸೋಂಕಿತ ಸಂಖ್ಯೆ 610ರ ಸಂಪರ್ಕದಿಂದ ಸೋಂಕು ತಾಗಿದೆ.
ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 690ಕ್ಕೆ ಏರಿಕೆಯಾಗಿದೆ. ಇವರಲ್ಲಿ 29 ಜನರು ಸಾವನ್ನಪ್ಪಿದರೆ, 345 ಜನರು ಗುಣಮುಖರಾಗಿದ್ದಾರೆ. ಮತ್ತು ಓರ್ವ ಕೋವಿಡ್ ಅಲ್ಲದ ಕಾರಣದಿಂದ ಸಾವನ್ನಪ್ಪಿದ್ದಾನೆ.