Advertisement

100 ನೇ ಟೆಸ್ಟ್ ಆಡುತ್ತೇನೆ ಎಂದು ನಾನು ಎಣಿಸಿಯೇ ಇರಲಿಲ್ಲ: ಕೊಹ್ಲಿ

06:11 PM Mar 03, 2022 | Team Udayavani |

ಮೊಹಾಲಿ : ವಿರಾಟ್ ಕೊಹ್ಲಿ ಭಾರತಕ್ಕಾಗಿ ಐತಿಹಾಸಿಕ ಟೆಸ್ಟ್ ಆಡಲು ಸಜ್ಜಾಗುತ್ತಿದ್ದು, ನಾನು ನೂರನೇ ಟೆಸ್ಟ್ ಆಡುತ್ತೇನೆ ಎಂದು ಎಣಿಸಿಯೇ ಇರಲಿಲ್ಲ ಎಂದು ಮಾಜಿ ನಾಯಕ ಹೇಳಿದ್ದಾರೆ.

Advertisement

100 ಟೆಸ್ಟ್‌ಗಳನ್ನು ಆಡಿದ ಮೈಲಿಗಲ್ಲು ಸಾಧಿಸಿದ 12 ನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಲು ಸಿದ್ಧರಾಗಿರುವ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಭಾರತದ ಕ್ರಿಕೆಟ್ ಲೋಕದ ಹೆಗ್ಗುರುತಾಗಿ ಕಾಣಿಸಿಕೊಳ್ಳಲಿದ್ದಾರೆ.

ಶುಕ್ರವಾರ ಶ್ರೀಲಂಕಾ ವಿರುದ್ಧ ಕೊಹ್ಲಿ 100ನೇ ಟೆಸ್ಟ್ ಆರಂಭವಾಗಲಿದ್ದು, ಭಾರತೀಯ ಆಟಗಾರರು ಮತ್ತು ಕ್ರಿಕೆಟ್ ಪ್ರೇಮಿಗಳಿಗೆ ಭಾರಿ ನಿರೀಕ್ಷೆ ಮೂಡಿಸಿದೆ.

“100 ಟೆಸ್ಟ್ ಪಂದ್ಯಗಳನ್ನು ಆಡುತ್ತೇನೆ ಎಂದು ನಾನು ಎಂದಿಗೂ ಯೋಚಿಸಲಿಲ್ಲ. ಇದು ಸುದೀರ್ಘ ಪ್ರಯಾಣವಾಗಿದೆ. ಆ 100 ಟೆಸ್ಟ್ ಪಂದ್ಯಗಳನ್ನು ಆಡುವ ಅವಧಿಯಲ್ಲಿ ನಾವು ಸಾಕಷ್ಟು ಕ್ರಿಕೆಟ್ ಆಡಿದ್ದೇವೆ. ಅಂತರಾಷ್ಟ್ರೀಯ ಕ್ರಿಕೆಟನ್ನು 100 ಕ್ಕೆ ತಲುಪಿಸಲು ಸಾಧ್ಯವಾಗಿದ್ದಕ್ಕಾಗಿ ನಾನು ಕೃತಜ್ಞನಾಗಿದ್ದೇನೆ. ಎಂದು ಕೊಹ್ಲಿ ಬಿಸಿಸಿಐ ಪೋಸ್ಟ್ ಮಾಡಿದ ವಿಡಿಯೋ ದಲ್ಲಿ ಹೇಳಿದ್ದಾರೆ.

Advertisement

ಕೊಹ್ಲಿ ಅವರ ಟೆಸ್ಟ್ ಅಂಕಿ ಅಂಶಗಳ ನೋಟ

ಇದುವರೆಗಿನ 99 ಪಂದ್ಯಗಳಲ್ಲಿ 168 ಇನಿಂಗ್ಸ್ ಆಡಿ 7,962 ರನ್‌ಗಳನ್ನು ಗಳಿಸಿದ್ದಾರೆ. 10 ಬಾರಿ ನಾಟ್ ಔಟ್ , ಪುಣೆಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಔಟಾಗದೆ 254* (ಅಕ್ಟೋಬರ್ 10-13, 2019) ಗರಿಷ್ಠ ಸ್ಕೋರ್ ಆಗಿದೆ.

50.39 ಸರಾಸರಿಯಲ್ಲಿ 55.67 ಸ್ಟ್ರೈಕ್ ರೇಟ್ ಹೊಂದಿದ್ದಾರೆ. 27 ಶತಕಗಳು, 28 ಅರ್ಧಶತಕಗಳು ಅವರ ಖಾತೆಯಲ್ಲಿ ಸೇರಿವೆ. 896 ಬೌಂಡರಿಗಳು, 24 ಸಿಕ್ಸರ್‌ಗಳು, 100 ಕ್ಯಾಚ್‌ಗಳು ಅವರ ಸಾಧನೆಯಾಗಿದೆ. ಜೂನ್ 20-23, 2011ರಲ್ಲಿ ಕಿಂಗ್ಸ್ಟನ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಚೊಚ್ಚಲ ಟೆಸ್ಟ್ ಆಡಿದ್ದರು.ಪಂದ್ಯದಲ್ಲಿ ಕೊಹ್ಲಿ ಸ್ಕೋರ್‌ಗಳು, 4 ಮತ್ತು 15 ಆಗಿತ್ತು!. ತವರಿನ 44 ಪಂದ್ಯಗಳಲ್ಲಿ 3766 ರನ್ ಗಳಿಸಿದ್ದು ಅವರ ಮಹತ್ವದ ಸಾಧನೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next