ಬೆಳಗಾವಿ: ಬಜರಂಗದಳ ಬ್ಯಾನ್ ಮಾಡುತ್ತೇವೆ ಎಂದು ಎಲ್ಲೂ ಹೇಳಿಲ್ಲ ಎಂದು ನೂತನ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಸಚಿವರಾದ ಬಳಿಕ ಸತೀಶ್ ಜಾರಕಿಹೊಳಿ ಮತ್ತು ಲಕ್ಷ್ಮೀ ಜಾರಕಿಹೊಳಿ ಮೊದಲ ಬಾರಿಗೆ ಜಿಲ್ಲೆಗೆ ಭೇಟಿ ನೀಡಿದರು.
ಪ್ರಣಾಳಿಕೆಯಲ್ಲಿ ಬಜರಂಗದಳ ಬ್ಯಾನ್ ಮಾಡುತ್ತೇವೆ ಎಂದಿದ್ದೀರಿ, ಯಾವಾಗ ಮಾಡುತ್ತೀರಿ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಜಾರಕಿಹೊಳಿ, ಬ್ಯಾನ್ ಮಾಡಲು ಅಂತಹ ತರಾತುರಿ ಏನಿಲ್ಲ ಎಂದರು.
ಈ ವೇಳೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಮಧ್ಯಪ್ರವೇಶ ಮಾಡಿ, ‘ಅಲ್ಲ ಸರ್ ಪ್ರಣಾಳಿಕೆಯಲ್ಲಿ ಏನು ಹೇಳಿದ್ದೇವೆ ಅಂದರೆ ಗದ್ದಲ ಮಾಡಿದ್ರೆ ಮಾತ್ರ. ಬಂದ್ ಮಾಡುತ್ತೇವೆಂದು ಎಲ್ಲೂ ಹೇಳಿಲ್ಲ ಎಂದರು.
Related Articles
ಉದಾಹರಣೆ ಕೊಟ್ಟಿದ್ದೀವಿ ಅಷ್ಟೇ, ಆರ್‌ಎಸ್‌ಎಸ್ ಉದಾಹರಣೆ ಕೊಟ್ಟಿದ್ದೀವಿ ಎಂದು ಸತೀಶ ಜಾರಕಿಹೊಳಿ ಹೇಳಿದರೆ, ಬಂದ್ ಮಾಡುತ್ತೇವೆಂದು ಎಲ್ಲೂ ಹೇಳಿಲ್ಲ ಎಂದು ಸಚಿವೆ ಹೆಬ್ಬಾಳ್ಕರ್ ಹೇಳಿದರು.
ಇದನ್ನೂ ಓದಿ:IPL Final ಇಂದು ಚೆನ್ನೈ- ಗುಜರಾತ್ ಫೈನಲ್ ಪಂದ್ಯ: ಹೇಗಿದೆ ಅಹಮದಾಬಾದ್ ನ ಹವಾಮಾನ ವರದಿ?
ಸಿದ್ದರಾಮಯ್ಯ ಐದು ವರ್ಷ ಸಿಎಂ ಆಗಿರ್ತಾರಾ ಎಂದು ಮಾಧ್ಯಮಗಳ ಪ್ರಶ್ನೆಗೆ ನೋಡೋಣ, ಯಾರೇ ಇದ್ದರೂ ಕಾಂಗ್ರೆಸ್‌ನವರೇ ಮುಖ್ಯಮಂತ್ರಿ ಇರುತ್ತಾರೆ ಎಂದರು.
ಅಧಿಕಾರ ಹಂಚಿಕೆ ಸೂತ್ರ ವಿಚಾರವಾಗಿ ಮಾತನಾಡಿದ ಜಾರಕಿಹೊಳಿ, ಅದು ನಮಗೆ ಗೊತ್ತಿಲ್ಲ, ಫಾರ್ಮುಲಾ ಅರ್ಧ ಆಗಿದೆಯೋ, ಹನ್ನೆರಡು ಹನ್ನೆರಡು ಆಗಿದೆಯೋ ಗೊತ್ತಿಲ್ಲ ಅದು ಯಾವ ರೀತಿ ಮಾತುಕತೆ ಆಗಿದೆ ಗೊತ್ತಿಲ್ಲ ಎಂದರು.
ಖಾತೆ ಹಂಚಿಕೆ ಗೊಂದಲದ ಬಗ್ಗೆ ಮಾತನಾಡಿದ ಅವರು, ಖಾತೆ ಹಂಚಿಕೆ ಈಗಾಗಲೇ ಫೈನಲ್ ಆಗಿದೆ, ಈಗ ಏನು ಲಿಸ್ಟ್ ಬಂದಿದೆ ಅದೇ ಫೈನಲ್. ಬಿಡುಗಡೆಯಾಗಿರುವ ಪಟ್ಟಿಯೇ ಅಂತಿಮ. ರಾಜ್ಯಪಾಲರಿಂದ ಅಂತಿಮ ಮುದ್ರೆ ಸಿಗಬೇಕಿದೆ ಅಷ್ಟೇ ಎಂದರು.