ಮುಂಬೈ: ಫೆ.10ರಂದು ಪ್ರಧಾನಿ ನರೆಂದ್ರ ಮೋದಿ ಮುಂಬೈ-ಶಿರಡಿ ಮತ್ತು ಮುಂಬೈ-ಸೋಲಾಪುರ ನಡುವಿನ ವಂದೇ ಭಾರತ್ ರೈಲುಗಳಿಗೆ ಮುಂಬೈನ ಛತ್ರಪತಿ ಶಿವಾಜಿ ಟರ್ಮಿನಲ್‌ನಲ್ಲಿ ಹಸಿರು ನಿಶಾನೆ ತೋರಿಸಿದ್ದಾರೆ.
ವಂದೇ ಭಾರತ್ ಎಕ್ಸ್‌ಪ್ರೆಸ್ ಭಾರತ ಸರ್ಕಾರದ ಅತ್ಯಂತ ಮಹತ್ವಾಕಾಂಕ್ಷೆಯ ರೈಲಾಗಿದ್ದು, ಕೇಂದ್ರ ಸರ್ಕಾರದ ರೈಲ್ವೇ ಸಚಿವರಾದ ಅಶ್ವಿನಿ ವೈಷ್ಣವ್ ಅವರ ಮುತುವರ್ಜಿಯಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಭಾರತದಲ್ಲಿ ತಯಾರಾಗುತ್ತಿವೆ.
ಇದೀಗ ಕೇಂದ್ರ ಸರ್ಕಾರದ ಸಚಿವರ ಪೈಕಿ ಅತೀ ಹೆಚ್ಚು ಪದವಿ ಪಡೆದ ಸಚಿವ ಎಂಬ ಖ್ಯಾತಿಗೆ ಪಾತ್ರವಾಗಿರುವ ಅಶ್ವಿನಿ ವೈಷ್ಣವ್ ಅವರ ಸಿಂಪ್ಲಿಸಿಟಿಗೆ ನೆಟ್ಟಿಗರು ತಲೆ ಬಾಗಿದ್ದಾರೆ.
ಫೆ.10ರ ವಂದೇ ಭಾರತ್ ರೈಲುಗಳ ಬಿಡುಗಡೆ ಸಂದರ್ಭದಲ್ಲಿ ಕೆಲವೊಂದಷ್ಟು ವಿದ್ಯಾರ್ಥಿಗಳು ರೈಲನ್ನು ನೋಡಲು ರೈಲಿನ ಒಳಗೆ ಬರುತ್ತಾರೆ. ಆಗ ಸ್ವತಃ ರೈಲ್ವೇ ಸಚಿವರಾದ ಅಶ್ವಿನಿ ವೈಷ್ಣವ್ ಅವರೇ ಮುಂದೆ ನಿಂತು ಅವರಿಗೆ ರೈಲಿನ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತಾರೆ. ವಿದ್ಯಾರ್ಥಿಗಳಿಗೆ ಕೇವಲ ರೈಲಿನ ಒಳಗಷ್ಟೇ ಅಲ್ಲದೆ ವಿದ್ಯಾರ್ಥಿಗಳನ್ನು ರೈಲಿನಿಂದ ಹೊರಗೆ ಕರೆಸಿ ರೈಲಿನ ಚಕ್ರಗಳು, ಬ್ರೇಕ್ ವ್ಯವಸ್ಥೆ ಬಗ್ಗೆಯೂ ಮಾಹಿತಿ ನೀಡಿದ್ದಾರೆ. ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಸಚಿವರು ಉತ್ತರಿಸಿದ್ದಾರೆ.
ಅತ್ಯಂತ ಲವಲವಿಕೆಯಿಂದಲೇ ಸಚಿವರು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದ್ದು, ಅದರ ವಿಡಿಯೋವನ್ನೂ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಈ ವಿಡಿಯೋ ವೈರಲ್ ಆಗಿದ್ದು ಸಚಿವರ ಸಿಂಪ್ಲಿಸಿಟಿಗೆ, ಉತ್ಸಾಹಕ್ಕೆ ಭಾರೀ ಮಚ್ಚುಗೆ ವ್ಯಕ್ತವಾಗಿದೆ.