ನೆಟ್ಟಣ ಪೇಟೆಯ ಸಮೀಪ ಹರಿಯುತ್ತಿರುವ ಹೊಳೆಗೆ ಸೇತುವೆ ನಿರ್ಮಿಸಲಾಗಿತ್ತು. ಆದರೆ ಭಾರೀ ಮಳೆ ಬಂದಲ್ಲಿ ಈ ಸೇತುವೆ ಮುಳುಗಡೆಯಾಗಿ ಸಂಚಾರಕ್ಕೆ ಅಡ್ಡಿಯಾಗಿತ್ತು. ಈ ಹಿನ್ನಲೆಯಲ್ಲಿ ಸಮೀಪದಲ್ಲೇ ಹೊಸ ಸೇತುವೆ ನಿರ್ಮಾಣ ಗೊಂಡು ಎರಡು ವರ್ಷಗಳ ಹಿಂದೆ ಸಂಚಾರಕ್ಕೆ ಮುಕ್ತವಾಗಿತ್ತು. ಹಳೆ ಸೇತುವೆ ನಿರುಪಯುಕ್ತವಾಗಿತ್ತು. ಇದೀಗ ಹಳೆ ನಿರುಪಯುಕ್ತ ಸೇತುವೆಯನ್ನು ಯಂತ್ರದ ಸಹಾಯದಿಂದ ತೆರವು ನಡೆಯಿತು.
Advertisement
ಮಳೆಗಾಲದಲ್ಲಿ ಈ ಮುಳುಗು ಸೇತು ವೆಗಳು ಮುಳುಗಿ ಸಂಚಾರಕ್ಕೆ ಅಡಚನೆ ಯಾಗುತ್ತಿದ್ದು, ಹಲವಾರು ಕಾರ್ಯ ಕ್ರಮಗಳಿಗೆ, ಅಗತ್ಯ ಕೆಲಸ ಕಾರ್ಯ ಗಳಿಗೆ ತೆರಳಲು ಸಂಕಷ್ಟ ಪಡಬೇಕಾದ ಸ್ಥಿತಿ ನಿರ್ಮಾಣವಾಗುತ್ತಿತ್ತು. ಈ ಮುಳುಗು ಸೇತುವೆಗಳು ಮಳೆಗಾಲದ ಸಮಯದಲ್ಲಿ ವರ್ಷಕ್ಕೆ 3-4 ದಿನವಾದರೂ ಮುಳು ಗಡೆಯಾಗುತ್ತಿತ್ತು. ಈ ಸಂದ ರ್ಭದಲ್ಲಿ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗುತ್ತಿತ್ತು. ರಜೆ ಸಿಕ್ಕಿರುವುದು ಒಂದು ರೀತಿಯಲ್ಲಿ ಆ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ ಖುಷಿಯ ವಿಷಯವೂ ಆಗುತ್ತಿತ್ತು.
ಒಟ್ಟಿನಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಡಬ ತಾಲೂಕಿನಲ್ಲಿ ಹೆಚ್ಚಿನ ಮುಳುಗು ಸೇತುವೆಗಳಿಗೆ ಬದಲಿ ಹೊಸ ಸೇತುವೆಗಳು ಈಗಾಗಲೇ ನಿರ್ಮಾಣ ಗೊಂಡಿರುವುದರೊಂದಿಗೆ, ಮುಳುಗು ಸೇತುವೆ ಸಮಸ್ಯೆ ಮುಕ್ತಿ ಕಾಣುವ ಹಂತದಲ್ಲಿದೆ. ಈ ಹಿಂದೆ ಮುಳುಗು ಸೇತುವೆ ಯಿಂದ ಪಡುತ್ತಿದ್ದ ಸಂಕಷ್ಟದಿಂದ ಮುಕ್ತಿ ಸಿಕ್ಕಿದೆ. ಬಿಳಿನೆಲೆ ಕೈಕಂಬ ಬಳಿಯ ಕೋಟೆ ಹೊಳೆಗೆ ನೂತನ ಸೇತುವೆ ಮಂಜೂರು ಗೊಂಡಿದ್ದು ಶೀಘ್ರ ಇಲ್ಲಿಗೂ ಹೊಸ ಸೇತುವೆ ನಿರ್ಮಾಣವಾಗಲಿದೆ. ಹೊಸ ಸೇತುವೆ ನಿರ್ಮಾಣವಾದ ಹಿನ್ನೆಲೆಯಲ್ಲಿ ಹಳೆ ಸೇತುಗಳ ತೆರವು ನಡೆಸ ಲಾಗುತ್ತದೆ. ಮುಂಜಾಗ್ರತಾ ಕ್ರಮದ ಹಿನ್ನೆಲೆ ಯಲ್ಲೂ ಈ ಕಾರ್ಯ ನಡೆಸ ಲಾಗುತ್ತದೆ ಎಂದು ಲೋಕೋ ಪಯೋಗಿ ಇಲಾಖೆ ಅಧಿಕಾರಿಗಳು ಪ್ರತಿಕ್ರಿಯೆ ನೀಡಿದ್ದಾರೆ.
Related Articles
ಕಡಬ ಸಮೀಪದ ಹೊಸಮಠದಲ್ಲಿ ಗುಂಡ್ಯ ಹೊಳೆಗೆ ನಿರ್ಮಿಸಲಾಗಿದ್ದ ಹಾಗೂ ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಕುಮಾರಧಾರಾ ನದಿಗೆ ನಿರ್ಮಿಸಲಾಗಿದ್ದ ಹಳೆ ಸೇತುವೆಯನ್ನು ಕಳೆದ ವರ್ಷ ಯಂತ್ರದ ಸಹಾಯದಿಂದ ತೆರವು ಮಾಡಲಾಗಿತ್ತು. ಇದೀಗ ನೆಟ್ಟಣದ ಹಳೆ ಸೇತುವೆ ಆ ಪಟ್ಟಿಗೆ ಸೇರಿತು. ಅಂದಿನ ಕಾಲದಲ್ಲಿ ನಿರ್ಮಾಣ ಗೊಂಡ ಈ ಹಳೆಯ ಮುಳುಗು ಸೇತುವೆ ಇನ್ನು ನೆನಪು ಮಾತ್ರ.
Advertisement