Advertisement

ಕೋವಿಡ್ ವಿರುದ್ಧ ನೆದರ್ಲೆಂಡ್‌ ವಿಜ್ಞಾನಿಗಳಿಂದ ಪ್ರತಿಕಾಯ ಸೃಷ್ಟಿ

12:21 AM May 07, 2020 | Hari Prasad |

ನೆದರ್ಲೆಂಡ್‌ನ‌ ತಜ್ಞರು ಕೋವಿಡ್ ವೈರಸ್ಸನ್ನು ಮಣಿಸುವ ಮೊನೊಕ್ಲೊನಲ್‌ ಪ್ರತಿಕಾಯಗಳನ್ನು ಲ್ಯಾಬ್‌ನಲ್ಲಿ ಸೃಷ್ಟಿಸಿದ್ದಾರೆ.

Advertisement

ಆರಂಭಿಕ ಪರೀಕ್ಷೆಯಲ್ಲಿ ಪ್ರತಿಕಾಯಗಳು, ಕೋವಿಡ್ ವೈರಾಣುಗಳನ್ನು ತಟಸ್ಥಗೊಳಿಸಿದ್ದು, ಈ ಬಗ್ಗೆ ಇನ್ನಷ್ಟು ಸಂಶೋಧನೆಗಳು ನಡೆಯಬೇಕಿದೆ. ‘47ಡಿ11 ಎಂಬ ಈ ಮೊನೊಕ್ಲೊನಲ್‌ ಪ್ರತಿಕಾಯ, ಕೋವಿಡ್ ವೈರಸ್ ನ ಮೇಲ್ಮೈನಲ್ಲಿರುವ ದುರ್ಬಲ ಕಿರೀಟದ ಮೇಲೆ ದಾಳಿ ಮಾಡಿ, ನಂತರ ದೇಹದ ಕೋಶದೊಳಕ್ಕೆ ಸೇರಿಕೊಳ್ಳುತ್ತದೆ’ ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ.

ಮೊನೊಕ್ಲೊನಲ್‌ ಎನ್ನುವುದು ಲ್ಯಾಬ್‌ನಲ್ಲಿ ಸೃಷ್ಟಿಸಬಹುದಾದ, ಪ್ರೊಟಿನ್‌ಯುಕ್ತ ಪ್ರತಿಕಾಯ. ಸೋಂಕಿಗೆ ಕಾರಣವಾಗುವ ವೈರಸ್‌, ಬ್ಯಾಕ್ಟೀರಿಯಾಗಳನ್ನು ಬೇಗನೆ ಆಹುತಿ ತೆಗೆದುಕೊಳ್ಳುವ ಗುಣ ಹೊಂದಿದೆ. ಇದನ್ನು ಮೊದಲು ಇಲಿಗಳ ಮೇಲೆ ಪ್ರಯೋಗಿಸಿ, ನಂತರವಷ್ಟೇ ಮಾನವ ಆವೃತ್ತಿಯನ್ನು ಸೃಷ್ಟಿಸಬೇಕಾಗುತ್ತದೆ.

ಕ್ಯಾನ್ಸರ್‌ ಚಿಕಿತ್ಸೆಗೆ ಇವು ಬಳಕೆಯಾಗುತ್ತಿದ್ದು, ರೋಗಿಗಳಲ್ಲಿ ತಕ್ಕಮಟ್ಟಿಗೆ ಚೇತರಿಕೆ ನೀಡುವಲ್ಲಿಯೂ ಸಫ‌ಲವಾಗಿವೆ. ನೆದರ್ಲೆಂಡ್‌ನ‌ ಅಟರೆಕ್ಟ್ ವಿವಿಯ ತಜ್ಞರಿಂದ ಮತ್ತಷ್ಟು ಸಂಶೋಧನೆಯಲ್ಲಿ ನಿರತರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next