ಬೈಲಹೊಂಗಲ: ನಿತ್ಯವೂ ನೂರಾರು ಬಸ್‌ಗಳ ಓಡಾಟ, ಸಾವಿರಾರು ಜನರ ಪಯಣ, ಸದಾ ಜನಸಂಖ್ಯೆಯಿಂದ ತುಂಬಿ ತುಳುಕುವ ಈ ಬಸ್ ನಿಲ್ದಾಣ ಸರಿಯಾದ ನಿರ್ವಹಣೆ ಇಲ್ಲದೆ ಹಾಳು ಕೊಂಪೆಯಂತಾಗಿದೆ.
ಹೌದು. ತಾಲೂಕಿನ ನೇಸರಗಿ ಗ್ರಾಮದ ಬಸ್ ನಿಲ್ದಾಣದಸ್ಥಿತಿಯಿದಾಗಿದೆ. ಬಸ್ ನಿಲ್ದಾಣ ಸುತ್ತಮುತ್ತ ಎಲ್ಲೆಂದರಲ್ಲಿ ಕಸ, ಗುಟ್ಕಾ ಹಾಗೂ ಪ್ಲಾಸ್ಟಿಕ್‌ಗಳನ್ನು ಹಾಕಲಾಗುತ್ತಿದೆ.ಪ್ರಯಾಣಿಕರು ಮೂಗುಮುಚ್ಚಿಕೊಂಡುಹೋಗುವ ಪರಿಸ್ಥಿತಿ ಎದುರಾಗಿದೆ.ಬಸ್ ನಿಲ್ದಾಣದಲ್ಲಿ ಎಲ್ಲೆಂದರಲ್ಲಿ ಕಸ ಚೆಲ್ಲಾಪಿಲ್ಲಿಯಾಗಿ ಬಿದ್ದಿರುತ್ತದೆ. ಬಲಗಡೆಇರುವ ಹಳೆಯ ಶೌಚಾಲಯದ ಬದಲಾಗಿ ಈಗ ಹೊಸದಾಗಿ ಎಡಗಡೆಗೆ ಶೌಚಾಲಯ ನಿರ್ಮಾಣವಾಗಿದ್ದು, ಹಳೆಯ ಶೌಚಾಲಯವನ್ನು ಹಾಗೆ ಬಿಡಲಾಗಿರುವುದರಿಂದ ನಿಲ್ದಾಣದಲ್ಲಿ ಸ್ಥಳಾವಕಾಶದ ಕೊರತೆ ಕಂಡು ಬರುತ್ತದೆ. ಹೀಗಾಗಿ ಹಳೆಯ ಶೌಚಾಲಯ ತೆರುವುಗೊಳಿಸಿದಲ್ಲಿ ಬಸ್ ನಿಲ್ಲಲು ಅನುಕೂಲವಾಗಲಿದೆ.
ಅಸಮರ್ಪಕ ಶುದ್ಧ ಕುಡಿಯುವ ನೀರಿನ ಘಟಕ: ಬಸ್ ನಿಲ್ದಾಣಕ್ಕೆ ಬರುವ ಪ್ರಯಾಣಿಕರಿಗೆ ಸುಸಜ್ಜಿತ ಸಮರ್ಪಕ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಇದ್ದರೂ ಸರಿಯಾಗಿ ಬಳಕೆಯಾಗುತ್ತಿಲ್ಲ. ಕಲುಷಿತ ಬಸ್ ನಿಲ್ದಾಣದಲ್ಲಿಹರಿದಾಡುವುದರಿಂದ ನೀರುಸರಾಗವಾಗಿ ಚರಂಡಿ ಸೇರುತ್ತಿಲ್ಲ. ಬಸ್‌ನಿಲ್ದಾಣದಲ್ಲಿ ನೀರು ನಿಂತು ಕಪ್ಪೆ ಮಾಂಸ ಹಿಡಿದು ಬೈಕ್ ಸವಾರರು ಸ್ಕಿಡ್ಡಾಗಿ ಬಿದ್ದಪ್ರಕರಣಗಳು ನಡೆದಿವೆ. ಇಲ್ಲಿಯಟ್ಯಾಂಕ್‌ನ್ನು ಸ್ವಚ್ಚಗೊಳಿಸದೆ ಬಹಳಷ್ಟು ದಿನಗಳಾಗಿವೆ. ಕುಳಿತುಕೊಳ್ಳುವ ಕಲ್ಲು ಹಾಸುಗಳು ಅಲ್ಲಲ್ಲಿ ಬಿದ್ದಿವೆ.
ಅವುಗಳನ್ನು ಸರಿಯಾಗಿ ಜೋಡಿಸಿದರೆ ಕುಳಿತುಕೊಳ್ಳಲು ಪ್ರಯಾಣಿಕರಿಗೆಅನುಕೂಲವಾಗುತ್ತದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಸ್ವಚ್ಛತೆ ಕಾಪಾಡುವ ದೃಷ್ಟಿಯಿಂದ ಸರಕಾರಲಕ್ಷಾಂತರ ರೂ. ವ್ಯಯ ಮಾಡುತ್ತಿದೆ.ಆದರೆ ಯಾಕೋ ಏನೋ ಬಸ್ ನಿಲ್ದಾಣ ಈ ಎಲ್ಲದರಿಂದ ವಂಚಿತವಾದಂತಾಗಿದೆ.
ನೇಸರಗಿ ಬಸ್ ನಿಲ್ದಾಣದಲ್ಲಿ ಸ್ವಚ್ಛತೆ ಹಾಗೂ ಶಿಸ್ತು ಮರೀಚಿಕೆಯಾಗಿದೆ. ನೇಸರಗಿ ಬಸ್ ನಿಲ್ದಾಣದ ಸುಸ್ಥಿತಿಯ ಬಗ್ಗೆಕೂಡಲೇ ಸಂಬಂಧಪಟ್ಟವರು ಕ್ರಮ ಜರುಗಿಸಬೇಕು.
-ರಮೇಶ್ ರಾಯಪ್ಪಗೋಳ, ರಾಜ್ಯಾಧ್ಯಕ್ಷ, ಜೈ ಭೀಮ್ ಸಂಘರ್ಷ ಸಮಿತಿ ಅಂಬೇಡ್ಕರ್ ವಾಣಿ.