ಮುಂಬಯಿ: ನೆರೂಲ್ ಪೂರ್ವದ ಸೆಕ್ಟರ್-29, ಪ್ಲಾಟ್ ನಂಬರ್ -16ರಲ್ಲಿರುವ ಶ್ರೀ ಗಣಪತಿ ಅಯ್ಯಪ್ಪ ದುರ್ಗಾ ದೇವಿ ಕ್ಷೇತ್ರದಲ್ಲಿ ಅಖಂಡ ಹರಿನಾಮ ಸಂಕೀರ್ತನೆಯು ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ನಡೆಯಿತು.
ಧಾರ್ಮಿಕ ಕಾರ್ಯಕ್ರಮವಾಗಿ ಸಂಪೂರ್ಣ ಒಂದು ದಿನದ ಅಹೋರಾತ್ರಿ ಅಖಂಡ ಹರಿನಾಮ ಸಂಕೀರ್ತನೆ ನೂರಾರು ಭಕ್ತಾದಿಗಳ ಸಮ್ಮುಖದಲ್ಲಿ ನಡೆಯಿತು.
ಮುಂಜಾನೆ 7.30ಕ್ಕೆ ಮಂದಿರದ ಪ್ರಧಾನ ಅರ್ಚಕರಾದ ಶ್ರೀ ಕೃಷ್ಣ ಭಟ್ ಅವರು ಪ್ರಾರ್ಥನೆಗೈದು ದೀಪ ಪ್ರಜ್ವಲನೆಯೊಂದಿಗೆ ಅಖಂಡ ಭಜನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮುಂಬಯಿ ಹಾಗೂ ನವಿ ಮುಂಬಯಿ ಪರಿಸರದ ಒಟ್ಟು 16 ಭಜನ ಮಂಡಳಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವು.
ಶ್ರೀ ಗಣಪತಿ ಅಯ್ಯಪ್ಪ ದುರ್ಗಾದೇವಿ ಭಜನಾ ಮಂಡಳಿ ನೆರೂಲ…, ಸದ್ಗುರು ನಿತ್ಯಾನಂದ ಭಜನಾ ಮಂಡಳಿ ಸಿಬಿಡಿ ಬೇಲಾಪುರ, ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ಸುéತ್ಸವ ಭಜನಾ ಮಂಡಳಿ ಡೊಂಬಿವಲಿ, ಶ್ರೀ ವಜ್ರಮಾತಾ ಮಹಿಳಾ ಭಜನಾ ಮಂಡಳಿ ಮಹಾರಾಷ್ಟ್ರ ಘಟಕ ಮುಂಬಯಿ, ಶ್ರೀ ಖಾಂದೇಶ್ವರ ಭಜನಾ ಮಂಡಳಿ ಖಾಂದ ಕಾಲೋನಿ, ಸದ್ಗುರು ಶ್ರೀ ಕೃಷ್ಣ ಭಜನಾ ಮಂಡಳಿ ವಿಲೇಪಾರ್ಲೆ, ಗೋಕುಲ್ ಭಜನಾ ಮಂಡಳಿ ಸಯನ್, ಶ್ರೀ ಮಣಿಕಂಠ ಭಜನಾ ಮಂಡಳಿ, ನ್ಯೂ ಪನ್ವೇಲ್, ಸದ್ಗುರು ನಿತ್ಯಾನಂದ ಭಜನಾ ಮಂಡಳಿ ಸಾಕಿನಾಕಾ, ಬ್ರಹ್ಮಲಿಗೇಶ್ವರ ಭಜನಾ ಮಂಡಳಿ ಭಾಂಡೂಪ್, ಶ್ರೀ ಶನೀಶ್ವರ ಭಜನಾ ಮಂಡಳಿ ನೆರೂಲ್, ಶ್ರೀ ಮೂಕಾಂಬಿಕಾ ಭಜನಾ ಮಂಡಳಿ ಘನ್ಸೋಲಿ, ಶ್ರೀ ಉಮಾ ಮಹೇಶ್ವರಿ ಭಜನಾ ಮಂಡಳಿ ಜೆರಿಮೆರಿ, ಶ್ರೀ ರಾಮ ಭಜನಾ ಮಂಡಳಿ ಮುಂಬಯಿ, ಶ್ರೀ ಅಯ್ಯಪ್ಪ ಭಜನಾ ಮಂಡಳಿ ಅಜೆªಪಾಡಾ, ಸೀವುಡ್ ಭಕ್ತ ವೃಂದ ಸೀವುಡ್ ಭಜನ ಮಂಡಳಿಗಳು ಪಾಲ್ಗೊಂಡಿದ್ದವು.
ಕೊನೆಯಲ್ಲಿ ಮಂದಿರದ ಭಜನಾ ಮಂಡಳಿಯವರಿಂದ ಕುಣಿತ ಭಜನೆ ನಡೆಯಿತು. ಕೊನೆಯಲ್ಲಿ ಭಜನ ಮಂಗಳಾರತಿ ನಡೆದು ಅಖಂಡ ಭಜನೆಯು ಸಮಾಪ್ತಿಗೊಂಡಿತು. ಈ ಸಂದರ್ಭದಲ್ಲಿ ಮಂದಿರದ ಅಧ್ಯಕ್ಷರು, ವಿಶ್ವಸ್ತರು, ಗುರುಸ್ವಾಮಿ, ಸದಸ್ಯರು ಹಾಗೂ ಶಿಬರದ ಎÇÉಾ ಸ್ವಾಮಿಗಳು ಉಪಸ್ಥಿತರಿದ್ದರು.
ಈ ಭಜನಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಹಕರಿಸಿದ ಎÇÉಾ ಭಜನಾ ಮಂಡಳಿ ಗಳಿಗೂ, ಶಿಬಿರದ ಎಲ್ಲಾ ಸ್ವಾಮಿಗಳಿಗೂ ಸಹಕರಿಸಿದ ಭಕ್ತಾದಿ ಗಳಿಗೂ ಕೃತಜ್ಞತೆ ಸಲ್ಲಿಸಲಾಯಿತು.
ಕ್ಷೇತ್ರದ ಪ್ರಥಮ ವಾರ್ಷಿಕ ಉತ್ಸವ ಹಾಗೂ ಧರ್ಮ ಶಾಸ್ತಾ ಭಕ್ತ ವೃಂದ ಚಾರಿಟೆಬಲ್ ಟ್ರಸ್ಟ್‌ನ 28ನೇ ವಾರ್ಷಿಕ ಶ್ರೀ ಅಯ್ಯಪ್ಪ ಮಂಡಲ ಪೂಜೆಯ ಸಂದರ್ಭ ಆಯೋಜಿಸಲಾಗಿದ್ದ ಲಕ್ಕಿಡಿಪ್ ಡ್ರಾದ ಪ್ರಥಮ ಬಹುಮಾನ ದ್ವಿಚಕ್ರ ವಾಹನದ ಕೀಯನ್ನು ವಿಜೇತ ರಾದ ಆಕಾಶ್ ಶೆಟ್ಟಿ ಜುಯಿ ಗಾಂವ್ ಅವರಿಗೆ ಮಂದಿರದ ಪದಾಧಿಕಾರಿಗಳು ನೀಡಿದರು.