Advertisement
ಧಾರ್ಮಿಕ ಕಾರ್ಯಕ್ರಮವಾಗಿ ಜ. 23 ರಂದು ಬೆಳಗ್ಗೆ 9 ರಿಂದ ದೇವತಾ ಪ್ರಾರ್ಥನೆ, ತೋರಣ ಮುಹೂರ್ತ, ಸ್ವಸ್ತಿ ಪುಣ್ಯಾಹ ವಾಚನ, ದ್ವಾದಶ ನಾಳಿಕೇರ ಗಣಯಾಗ, ಮುಖ್ಯಪ್ರಾಣ ದೇವರಿಗೆ ನವಕ ಪ್ರಧಾನ ಹೋಮ, ಅಪರಾಹ್ನ 2 ರಿಂದ ಸಂಪೂರ್ಣ ಶ್ರೀ ಶನೀಶ್ವರ ಗ್ರಂಥ ಪಾರಾಯಣ, ರಾತ್ರಿ 9 ರಿಂದ ಮಹಾಮಂಗಳಾರತಿ, ಪ್ರಸಾದ ವಿತರಣೆ ಜರಗಿತು. ಜ. 24 ರಂದು ಬೆಳಗ್ಗೆ 9 ರಿಂದ ಶ್ರೀ ಮಹಾಗಣಪತಿ ದೇವರಿಗೆ ನವಕ ಪ್ರಧಾನ ಹವನ, ಶ್ರೀ ಶನೀಶ್ವರ ದೇವರಿಗೆ ನವಕ ಪ್ರದಾನ ಹವನ, ರಾತ್ರಿ 8 ರಿಂದ ಮಹಾಗಣಪತಿ ಹಾಗೂ ಶ್ರೀ ವೀರಾಂಜನೆಯ ಸ್ವಾಮಿಗೆ ರಂಗಪೂಜೆ ಹಾಗೂ ಬಲಿ ಉತ್ಸವ ನಡೆಯಿತು.
Related Articles
Advertisement
ಜ. 27 ರಂದು ಬೆಳಗ್ಗೆ 9 ರಿಂದ ನವಕ ಪ್ರಧಾನ ಹವನ, ಸಂಪ್ರೋಕ್ಷಣೆ, ಮಂತ್ರಾಕ್ಷತೆ, ತೀರ್ಥ ಪ್ರಸಾದ ವಿತರಣೆ ಜರಗಿತು.ವಿಶ್ವಸ್ಥ ಮಂಡಳಿಯ ಕಾರ್ಯಾಧ್ಯಕ್ಷ ಸಂತೋಷ್ ಡಿ. ಶೆಟ್ಟಿ, ಅಧ್ಯಕ್ಷ ರಮೇಶ್ ಎಂ. ಪೂಜಾರಿ, ಉಪಾಧ್ಯಕ್ಷ ಗೋಪಾಲ್ ವೈ. ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ವಿ. ಕೆ. ಸುವರ್ಣ, ಗೌರವ ಕೋಶಾಧಿಕಾರಿ ವಿಶ್ವನಾಥ ಕೆ. ಪೂಜಾರಿ, ಜತೆ ಕಾರ್ಯದರ್ಶಿ ಜಯಕರ ಬಿ. ಪೂಜಾರಿ, ಜತೆ ಕೋಶಾಧಿಕಾರಿ ಕರುಣಾಕರ ಎಸ್. ಆಳ್ವ, ವಿಶ್ವಸ್ಥರುಗಳಾದ ಎನ್. ಡಿ. ಶೆಣೈ, ಪುನೀತ್ ಕುಮಾರ್ ಆರ್. ಶೆಟ್ಟಿ, ಪ್ರಭಾಕರ ಎಸ್. ಹೆಗ್ಡೆ, ಅನಿಲ್ ಕೆ. ಹೆಗ್ಡೆ, ಕೃಷ್ಣ ಎಂ. ಪೂಜಾರಿ, ದಾಮೋದರ ಶೆಟ್ಟಿ, ದಯಾನಂದ ಶೆಟ್ಟಿ, ತಾರಾನಾಥ ಶೆಟ್ಟಿ, ಸಲಹಾ ಸಮಿತಿಯ ಪ್ರಕಾಶ್ ಭಂಡಾರಿ, ಕೆ. ಡಿ. ಶೆಟ್ಟಿ, ಸದಾನಂದ ಡಿ. ಶೆಟ್ಟಿ, ಎನ್. ಕೆ. ಪೂಜಾರಿ, ಜಯರಾಮ ಪೂಜಾರಿ, ಕೃಷ್ಣ ಐ. ಕೋಟ್ಯಾನ್ ಅವರ ಉಪಸ್ಥಿತಿಯಲ್ಲಿ ಉತ್ಸವವು ನೆರವೇರಿತು.
ಭಜನ ಮಂಡಳಿಯ ಅಧ್ಯಕ್ಷ ಶೇಖರ ಬಿ. ಪಾಲನ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವೀಣಾ ವಿ. ಪೂಜಾರಿ, ಪೂಜಾ ಸಮಿತಿ, ಮಹಿಳಾ ವಿಭಾಗ ಹಾಗೂ ಸರ್ವ ಸದಸ್ಯರ, ಭಕ್ತಾದಿಗಳ ಸಹಕಾರದೊಂದಿಗೆ ವಾರ್ಷಿಕ ಉತ್ಸವವು ಜರಗಿದ್ದು, ಭಕ್ತಾಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡು ಉತ್ಸವದ ಯಶಸ್ಸಿಗೆ ಸಹಕರಿಸಿದರು.
ಚಿತ್ರ-ವರದಿ : ಸುಭಾಷ್ ಶಿರಿಯಾ