Advertisement

Politics: ನೆರಿಯ ಗ್ರಾ.ಪಂ. ಅಧ್ಯಕ್ಷೆ, ಇಬ್ಬರು ಬಿಜೆಪಿ ಸದಸ್ಯರ ಅಮಾನತು

12:46 AM Oct 06, 2023 | Team Udayavani |

ಬೆಳ್ತಂಗಡಿ: ನೆರಿಯ ಗ್ರಾಮ ಪಂಚಾಯತ್‌ನ ದ್ವಿತೀಯ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಪಕ್ಷದ ಆದೇಶವನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ನೆರಿಯ ಗ್ರಾ.ಪಂ. ಅಧ್ಯಕ್ಷೆ ಸಹಿತ ಮೂವರನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ.

Advertisement

ಗ್ರಾ.ಪಂ. ಅಧ್ಯಕ್ಷೆ ಹಾಗೂ ಎಸ್‌.ಸಿ. ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿರುವ ವಸಂತಿ ಕಡ್ಡಿಬಾಗಿಲು, ಮಾಜಿ ಉಪಾಧ್ಯಕ್ಷೆ ಹಾಲಿ ಸದಸ್ಯೆ ಹಾಗೂ ಬೂತ್‌ ಸಮಿತಿ ಅಧ್ಯಕ್ಷೆ ಕುಶಲಾ ಕಡ್ಡಿಬಾಗಿಲು, ನೆರಿಯ ಗ್ರಾಮ ಬೂತ್‌ ಸಮಿತಿ ಅಧ್ಯಕ್ಷ, ಗ್ರಾ.ಪಂ. ಸದಸ್ಯ ಸಚಿನ್‌ ಅಣಿಯೂರು ಕುಲೆನಾಡಿ ಸೇರಿ ಮೂವರನ್ನು ಪಕ್ಷದ ಎಲ್ಲ ಹುದ್ದೆ ಹಾಗೂ ಜವಾಬ್ದಾರಿಗಳಿಂದ ಮುಕ್ತಗೊಳಿಸಿರುವುದಾಗಿ ಮಂಡಲ ಅಧ್ಯಕ್ಷ ಜಯಂತ್‌ ಕೋಟ್ಯಾನ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next