Advertisement
ಗ್ರಾಮದ ದಲಿತ ಕೇರಿಯ ಹಿರಿಯ ವ್ಯಕ್ತಿ ಶಿವಪ್ಪ ಮಾದರ (70) ಮಂಗಳವಾರ ರಾತ್ರಿ ನಿಧನರಾಗಿದ್ದರು. ದಶಕಗಳಿಂದ ನಡೆದುಕೊಂಡು ಬಂದ ಪದ್ಧತಿಯಂತೆ ಕೇರಿ ಪಕ್ಕದಲ್ಲಿಯೇ ಇದ್ದ ಶಾಂತಮ್ಮ ಬಿರಾದಾರ ಎನ್ನುವವರ ಸ್ವಂತ ಮಾಲೀಕತ್ವದ ಜಮೀನಿನಲ್ಲಿ ಸಂಸ್ಕಾರ ನಡೆಸಲು ವ್ಯವಸ್ಥೆ ಮಾಡಲು ಮುಂದಾಗಿದ್ದರು. ಇದಕ್ಕೆ ಜಮೀನು ಮಾಲೀಕರು ನಿರಾಕರಿಸಿದ್ದು ಸಮಸ್ಯೆ ಉಂಟಾಗಲು ಕಾರಣವಾಗಿತ್ತು.
Related Articles
Advertisement
ಕೆಲವೇ ದಿನಗಳಲ್ಲಿ ಸರ್ಕಾರಿ ಸ್ಮಶಾನ ಭೂಮಿ ಗುರ್ತಿಸಿ ಸಮಸ್ಯೆ ಬಗೆಹರಿಸಲಾಗುತ್ತದೆ ಎಂದು ಪರಿಪರಿಯಾಗಿ ಬಿರಾದಾರ ಕುಟುಂಬದವರಿಗೆ ತಿಳಿವಳಿಕೆ ಹೇಳಲು ಮುಂದಾದರು. ಕೇರಿಯ ಕೆಲವರು ನಮಗೆ ಏನೇನು ಕಾಟ, ಹಿಂಸೆ ಕೊಟ್ಟಿದ್ದಾರೆ ಅನ್ನೋದು ನಿಮಗೇನು ಗೊತ್ತಿದೆ. ಅನುಭವಿಸಿದವರು ನಾವು. ನೀವು ಸುಮ್ಮನೆ ಹೋಗಿ. ಸಂಸ್ಕಾರಕ್ಕೆ ಬೇರೆ ಜಮೀನು ನೋಡಿಕೊಳ್ಳಿ ಇಲ್ಲವೇ ಸರ್ಕಾರಿ ಜಮೀನಿನಲ್ಲಿ ಸಂಸ್ಕಾರ ಮಾಡಿಸಿ ಎಂದು ಜಮೀನು ಮಾಲೀಕರು ಪಟ್ಟು ಹಿಡಿದರು. ಒಂದು ಹಂತದಲ್ಲಿ ಸಿಪಿಐ, ತಹಶೀಲ್ದಾರ್‌ಗೆ ಎದುರು ವಾದಿಸಿ ನಾವು ಜೈಲಿಗೆ ಹೋಗಲೂ ಸಿದ್ಧರಿದ್ದೇವೆ.
ಆದರೆ ಸಂಸ್ಕಾರಕ್ಕೆ ಮಾತ್ರ ಯಾವುದೇ ಕಾರಣಕ್ಕೂ ಅವಕಾಶ ಮಾಡಿಕೊಡೊಲ್ಲ ಎಂದು ಪಟ್ಟು ಹಿಡಿದು ಪರಿಸ್ಥಿತಿ ಕೈ ಮೀರುವ ಸನ್ನಿವೇಶ ಸೃಷ್ಟಿಗೆ ಮುಂದಾದರು. ಅಂತೂ ಇಂತೂ ಹರಸಾಹಸ ಪಟ್ಟು ಎಲ್ಲರೂ ಬಿರಾದಾರ ಕುಟುಂಬದ ಮನವೊಲಿಸುವಲ್ಲಿ ಯಶಸ್ವಿಯಾದರು. ಆದರೂ ಸಂಗಣ್ಣ ಕಂಪನಿಯೊಂದರಲ್ಲಿ ಮ್ಯಾನೇಜರ್ ಆಗಿರುವ ತಮ್ಮ ಹಿರಿಯ ಸಹೋದರನ ಜೊತೆ ಮಾತನಾಡಿ, ಆ ಕಡೆಯಿಂದ ಇದೊಂದು ಬಾರಿ ಅವಕಾಶ ನೀಡಲು ಒಪ್ಪಿಗೆ ಪಡೆದು ಸಂಸ್ಕಾರಕ್ಕೆ ಸಮ್ಮತಿ ಸೂಚಿಸಿ ಅಲ್ಲಿದ್ದ ಬಿಗುವಿನ ವಾತಾವರಣ ತಿಳಿಗೊಳ್ಳಲು ಅವಕಾಶ ಮಾಡಿಕೊಟ್ಟರು.
ತಹಶೀಲ್ದಾರ್, ಸಿಪಿಐ ಸಮ್ಮುಖವೇ ಜೆಸಿಬಿ ಯಂತ್ರದಿಂದ ಸಮಾಧಿ ಅಗೆಯಲು ಅವಕಾಶ ನೀಡಿ ಕೊನೆಗೆ ಪಿಎಸೈ ಮಲ್ಲಪ್ಪ ಮಡ್ಡಿ ಮತ್ತು ಕೆಲ ಪೊಲೀಸರನ್ನು ಸ್ಥಳದಲ್ಲೇ ಬಿಟ್ಟು ಅಧಿಕಾರಿಗಳು ನಿರ್ಗಮಿಸಿದರು. ನಂತರ ಗ್ರಾಮದ ಹೊರಗೆ ಅರಸನಾಳ ರಸ್ತೆ ಪಕ್ಕದಲ್ಲಿರುವ ಗೋಮಾಳ ಜಮೀನಿಗೆ ತಹಶೀಲ್ದಾರ್ ಅವರು ಸಿಪಿಐ ಸಮೇತ ಭೇಟಿ ಕೊಟ್ಟು ಜಮೀನಿನ ವಿಸ್ತಾರದ ಮಾಹಿತಿ ಪಡೆದರು. ಒಟ್ಟಾರೆ ಜಮೀನಿನಲ್ಲಿ ಎರಡು ಎಕರೆ ಜಮೀನನ್ನು ಸರ್ಕಾರಿ ಸ್ಮಶಾನಕ್ಕೆ ಮೀಸಲಿಡುವ ಕುರಿತು ಜಿಲ್ಲಾ ಧಿಕಾರಿ ಮೂಲಕ ಸರ್ಕಾರಕ್ಕೆ ಶಿಫಾರಸು ಕಳಿಸುವ ತೀರ್ಮಾನ ಕೈಕೊಂಡರು.ಸರ್ಕಾರಿ ಜಮೀನು ಇಲ್ಲವೆ ಖಾಸಗಿ ಜಮೀನನ್ನು ಖರೀದಿಸಿಯಾದರೂ ದಲಿತರಿಗೆ ಸ್ಮಶಾನ ಸೌಲಭ್ಯ ಕಲ್ಪಿಸಿಕೊಡಬೇಕು. ಇಲ್ಲವಾದಲ್ಲಿ ದಲಿತ ಸಂಘಟನೆಗಳ ನೇತೃತ್ವದಲ್ಲಿ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ.
ಡಿ.ಬಿ.ಮುದೂರ, ಡಿಎಸ್ಸೆಸ್ ರಾಜ್ಯ ಸಂಘಟನಾ ಸಂಚಾಲಕ ತಾಲೂಕಿನಲ್ಲಿ ಇನ್ನೂ ಅನೇಕ ಗ್ರಾಮಗಳಲ್ಲಿ ಸಂಸ್ಕಾರಕ್ಕೆ
ಸೂಕ್ತ ಜಮೀನು ಇಲ್ಲದೆ ದಲಿತರು ತೊಂದರೆಗೊಳಗಾಗಿದ್ದಾರೆ. ಈ ಬಗ್ಗೆ ಕ್ರಮ ತಾಪಂ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಕಳಿಸಿಕೊಡಲಾಗುತ್ತದೆ.
ಚಂದ್ರಕಲಾ ಲೊಟಗೇರಿ, ತಾಪಂ ಸಾಮಾಜಿಕ ನ್ಯಾಯ ಸಮಿತಿ ಸ್ಥಾಯಿ ಸಮಿತಿ ಅಧ್ಯಕ್ಷ