Advertisement

Udupi ಇಂದಿನಿಂದ “ಉದಯವಾಣಿ’ ಚಿಣ್ಣರ ಬಣ್ಣ ಚಿತ್ರಕಲಾ ಸ್ಪರ್ಧೆ

11:28 PM Oct 27, 2023 | Team Udayavani |

ಉಡುಪಿ: “ಉದಯವಾಣಿ’ ದಿನಪತ್ರಿಕೆಯು ಉಡುಪಿ ಆರ್ಟಿಸ್ಟ್‌ ಪೋರಂ ಸಹಕಾರೊಂದಿಗೆ ನಡೆಸುವ ಮಕ್ಕಳ ಚಿತ್ರಕಲಾ ಸ್ಪರ್ಧೆ’ ಚಿಣ್ಣರ ಬಣ್ಣ’-2023 ಅ. 28ರಿಂದ ಆರಂಭಗೊಂಡು ನ. 5ರ ವರೆಗೂ ನಡೆಯಲಿದೆ.

Advertisement

ಅ. 28ರ ಬೆಳಗ್ಗೆ 10ರಿಂದ ಮಧ್ಯಾಹ್ನ 12ರ ವರೆಗೆ ಕಡಬ ತಾಲೂಕಿನ ಕಡಬ ಸೈಂಟ್‌ ಜೋಕಿಂ ಸಮುದಾಯ ಭವನ ಹಾಗೂ ಕುಂದಾಪುರ ತಾಲೂಕಿನ ಕುಂದಾಪುರ ಭಂಡಾರ್‌ಕಾರ್ ಕಾಲೇಜಿನ ಆರ್‌.ಎನ್‌. ಶೆಟ್ಟಿ ಸಭಾಂಗಣ, ಮಧ್ಯಾಹ್ನ 3ರಿಂದ ಸಂಜೆ 5ರ ವರೆಗೆ ಬೆಳ್ತಂಗಡಿ ತಾಲೂಕಿನ ಬೆಳ್ತಂಗಡಿಯ ಸಂತೆಕಟ್ಟೆ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲಾಭವನ, ಬಂಟ್ವಾಳ ತಾಲೂಕಿನ ಬಿ.ಸಿ. ರೋಡ್‌ ನಾರಾಯಣಗುರು ವೃತ್ತದ ಸ್ಪರ್ಶ ಕಲಾ ಮಂದಿರ ಹಾಗೂ ಬೈಂದೂರು ತಾಲೂಕಿನ ಬೈಂದೂರಿನ ಜೆ.ಎನ್‌.ಆರ್‌. ಕಲಾ ಮಂದಿರದಲ್ಲಿ ನಡೆಯಲಿದೆ.

ಅ. 29ರ ಬೆಳಗ್ಗೆ 10ರಿಂದ ಮಧ್ಯಾಹ್ನ 12ರವರೆಗೆ ಸುಳ್ಯ ತಾಲೂಕಿನ ಸುಳ್ಯದ ಚೆನ್ನಕೇಶವ ದೇವಸ್ಥಾನದ ಬಳಿಯ ಕೆವಿಜಿ ಕಾನೂನು ಮಹಾ ವಿದ್ಯಾಲಯ, ಹೆಬ್ರಿ ತಾಲೂಕಿನ ಹೆಬ್ರಿಯ ಎಸ್‌.ಆರ್‌. ಪಬ್ಲಿಕ್‌ ಸ್ಕೂಲ್‌, ಕಾರ್ಕಳ ತಾಲೂಕಿನ ಕಾರ್ಕಳದ ಶ್ರೀ ಭುವನೇಂದ್ರ ಕಾಲೇಜು ಮತ್ತು ಮಧ್ಯಾಹ್ನ 3 ಗಂಟೆಯಿಂದ ಸಂಜೆ 5ರ ವರೆಗೆ ಬ್ರಹ್ಮಾವರ ತಾಲೂಕಿನ ಬ್ರಹ್ಮಾವರ ಬಸ್‌ ನಿಲ್ದಾಣದ ಎದುರಿನ ಬಂಟರ ಭವನ, ಪುತ್ತೂರು ತಾಲೂಕಿನ ಪುತ್ತೂರಿನ ಬ್ರಹ್ಮಶ್ರೀ ನಾರಾಯಣಗುರು ಸ್ವಾಮಿ ಬಿಲ್ಲವ ಸಂಘದಲ್ಲಿ ಸ್ಪರ್ಧೆ ನಡೆಯಲಿದೆ.

ನ. 4ರಂದು ಮಧ್ಯಾಹ್ನ 3ರಿಂದ 5ರ ವರೆಗೆ ಮಂಗಳೂರು ತಾಲೂಕಿನ ಮಂಗಳೂರಿನ ಉರ್ವ ಕೆನರಾ ಹೈಸ್ಕೂಲ್‌, ಕಾಪು ತಾಲೂಕಿನ ಉಚ್ಚಿಲದ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ವಠಾರ ಮತ್ತು ನ. 5ರ ಬೆಳಗ್ಗೆ 10ರಿಂದ ಮಧ್ಯಾಹ್ನ 12ರವರೆಗೆ ಮೂಲ್ಕಿ ತಾಲೂಕಿನ ಮೂಲ್ಕಿ ಶ್ರೀ ವ್ಯಾಸ ಮಹರ್ಷಿ ಪ್ರೌಢ ಶಾಲೆ, ಮೂಡುಬಿದರೆಯ ವಿದ್ಯಾಗಿರಿ ಕೃಷಿ ಸಿರಿ ವೇದಿಕೆಯ ಕೆ. ಅಮರನಾಥ ಶೆಟ್ಟಿ ಸಭಾಂಗಣ, ಮಧ್ಯಾಹ್ನ 3ರಿಂದ ಸಂಜೆ 5ರ ವರೆಗೆ ಉಳ್ಳಾಲ ತಾಲೂಕಿನ ಉಳ್ಳಾಲ ಚೆಂಬುಗುಡ್ಡೆ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ, ಉಡುಪಿ ತಾಲೂಕಿನ ಉಡುಪಿಯ ಅಂಬಲಪಾಡಿ ಶ್ರೀ ಜನಾರ್ದನ ಮಹಾಕಾಳಿ ದೇವಸ್ಥಾನದಲ್ಲಿ ಸ್ಪರ್ಧೆ ನಡೆಯಲಿದೆ.

ಆಯಾ ತಾಲೂಕಿನ ವಿದ್ಯಾರ್ಥಿಗಳು ತಮ್ಮ ವ್ಯಾಪ್ತಿಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದು.

Advertisement

1ರಿಂದ 3, 4ರಿಂದ 7 ಹಾಗೂ 8ರಿಂದ 10 ಹೀಗೆ ಮೂರು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. 1ರಿಂದ 7ನೇ ತರಗತಿಯ ವಿದ್ಯಾರ್ಥಿಗಳಿಗೆ ಐಚ್ಛಿಕ ವಿಷಯವಾದರೆ, 8ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಸ್ಥಳದಲ್ಲಿಯೇ ವಿಷಯ ತಿಳಿಸಲಾಗುವುದು.

Advertisement

Udayavani is now on Telegram. Click here to join our channel and stay updated with the latest news.

Next