Advertisement

ಉಡುಪಿ ನಗರ-ಗ್ರಾಮಾಂತರ ಬಿಜೆಪಿ; ಜ. 8- ಮಾತೃ ಸಂಗಮ, ವಿದ್ಯಾರ್ಥಿಗಳಿಗೆ ಚಿತ್ರ ಕಲಾ ಸ್ಪರ್ಧೆ

11:41 AM Jan 07, 2023 | Team Udayavani |

ಉಡುಪಿ: ಬಿಜೆಪಿ ಉಡುಪಿ ನಗರ ಹಾಗೂ ಗ್ರಾಮಾಂತರದ ವತಿಯಿಂದ ಜ. 8ರಂದು ಬ್ರಹ್ಮಾವರದ ಶಾಮಿಲಿ ಸಭಾಂಗಣದಲ್ಲಿ ಮಾತೃ ಸಂಗಮ-2023 ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ನಾಲ್ಕು ವಿಭಾಗಗಳಲ್ಲಿ ಚಿತ್ರಕಲಾ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ರಘುಪತಿ ಭಟ್‌ ತಿಳಿಸಿದ್ದಾರೆ.

Advertisement

ಅಂದು ಬೆಳಗ್ಗೆ 9 ಗಂಟೆಗೆ ನಡೆಯುವ ಉಡುಪಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಮಹಿಳಾ ಕಾರ್ಯಕರ್ತರ ಸಮಾವೇಶ ಮಾತೃಸಂಗಮದ ಉದ್ಘಾಟನೆಯನ್ನು ವಿಧಾನ ಪರಿಷತ್‌ ಸದಸ್ಯೆತೇಜಸ್ವಿನಿ ಗೌಡ ನೆರವೇರಿಸಿ, ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಮಹಿಳಾ ಮೋರ್ಚಾದ ರಾಜ್ಯಾಧ್ಯಕ್ಷೆ ಗೀತಾ ವಿವೇಕಾನಂದ ಅವರ ವಿಶೇಷ ಉಪಸ್ಥಿತಿ ಇರಲಿದೆ ಎಂದವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.5 ಸಾವಿರಕ್ಕೂ ಅಧಿಕ ಮಹಿಳೆಯರು ಭಾಗವಹಿಸಲಿದ್ದಾರೆ. ಇದಕ್ಕೆ ಬೇಕಾದ ಎಲ್ಲ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದ್ದೇವೆ ಎಂದರು.

ನಾಲ್ಕು ವಿಭಾಗಗಳಲ್ಲಿ ಸ್ಪರ್ಧೆ ಎಲ್‌ಕೆಜಿ, ಯುಕೆಜಿಯಿಂದ 1ನೇ ತರಗತಿ, 2ರಿಂದ 4ನೇ ತರಗತಿ, 5ರಿಂದ 7ನೇ ತರಗತಿ ಹಾಗೂ 8ರಿಂದ 10ನೇ ತರಗತಿ ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ. ಸ್ಥಳದಲ್ಲೇ ನೋಂದಣಿಗೆ ಅವಕಾಶವಿದೆ. ಉಡುಪಿ ಆರ್ಟಿಸ್ಟ್ ಫೋರಂ ಸಹಯೋಗವಿದೆ. ಸ್ಪರ್ಧಾಳುಗಳು ಚಿತ್ರಕಲಾ ಪರಿಕರ ತರಬೇಕು. ಡ್ರಾಯಿಂಗ್‌ ಶೀಟ್‌ ಸ್ಥಳದಲ್ಲೇ ನೀಡ ಲಾಗುವುದು ಮತ್ತು ಊಟ, ಉಪ ಹಾರದ ವ್ಯವಸ್ಥೆ ಇರಲಿದೆ ಎಂದರು.

ಅಟಲ್‌ ಕಲರ್‌ ಹೆಸರಿನಲ್ಲಿ ವಿದ್ಯಾರ್ಥಿಗಳಿಗೆ ಚಿತ್ರಕಲೆ ಬಿಡಿಸಲು ಪೂರಕವಾಗುವಂತೆ ಪ್ರತ್ಯೇಕ ವ್ಯವಸ್ಥೆ ಮಾಡಿದ್ದೇವೆ. ಮಾತೃ ಸಂಗಮ ಮತ್ತು ಚಿತ್ರಕಲಾ ಸ್ಪರ್ಧೆ ಒಂದೇ ಆವರಣದಲ್ಲಿ ಬೇರೆ ಬೇರೆ ಕಡೆ ನಡೆಯಲಿದೆ ಎಂದು ನಗರ ಬಿಜೆಪಿ ಅಧ್ಯಕ್ಷ ಮಹೇಶ್‌ ಠಾಕೂರ್‌ ಹೇಳಿದರು.

ಸ್ಪರ್ಧೆಯಲ್ಲಿ ಭಾಗವಹಿಸುವ ಪ್ರತೀ ವಿದ್ಯಾರ್ಥಿಗೂ ಗಿಫ್ಟ್ ಹ್ಯಾಂಪರ್‌, ಪ್ರಮಾಣಪತ್ರ ನೀಡಲಾಗುತ್ತದೆ. ಪ್ರತೀ ವಿಭಾಗ ದಲ್ಲೂ ಪ್ರಥಮ 6,000 ರೂ., ದ್ವಿತೀಯ 4,000 ರೂ., ತೃತೀಯ 2,000 ರೂ., 10 ವಿದ್ಯಾರ್ಥಿಗಳಿಗೆ ತಲಾ 1,000 ರೂ.ಗಳ ಪ್ರೋತ್ಸಾಹಕ ಬಹುಮಾನ ನೀಡಲಾಗುವುದು. ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸ್ಥಳದಲ್ಲೇ ವಿಷಯ ನೀಡಲಾಗುತ್ತದೆ. ಉಳಿದ ವಿದ್ಯಾರ್ಥಿಗಳು ಐಚ್ಛಿಕ ವಿಷಯದ ಮೇಲೆ ಚಿತ್ರ ಬಿಡಿಸಬಹುದು ಎಂದು ಮಹಿಳಾ ಮೋರ್ಚಾದ ಜಿಲ್ಲಾಧ್ಯಕ್ಷೆ ವೀಣಾ ಎಸ್‌. ಶೆಟ್ಟಿ ಹೇಳಿದರು.

Advertisement

ಮಾತೃ ಸಂಗಮ ಸಂಚಾಲಕಿ ರಶ್ಮಿತಾ ಬಾಲಕೃಷ್ಣಶೆಟ್ಟಿ, ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಮಂಜುನಾಥ ಮಣಿಪಾಲ, ದಿನೇಶ್‌ ಅಮಿನ್‌, ಗ್ರಾಮಾಂತರ ಮಹಿಳಾ ಮೋರ್ಚಾದ ಅಧ್ಯಕ್ಷೆ ವಸಂತಿ ಸತೀಶ್‌ ಪೂಜಾರಿ, ಪ್ರಧಾನ ಕಾರ್ಯದರ್ಶಿಗಳಾದ ಗಣೇಶ್‌ ಕುಲಾಲ್‌, ಸಚಿನ್‌ ಪುಜಾರಿ ಉಪಸ್ಥಿತರಿದ್ದರು.

ಮಾರ್ಚ್‌ನಲ್ಲಿ ಯುವ ಸಂಗಮ
ಪರೀಕ್ಷೆ, ಶೈಕ್ಷಣಿಕ ಚಟುವಟಿಕೆ ಹೆಚ್ಚಿರುವುದರಿಂದ ಜ. 7ರಂದು ನಡೆಯಬೇಕಿದ್ದ ಯುವ ಸಂಗಮವನ್ನು ಮುಂದೂಡಿದ್ದೇವೆ. ಮಾರ್ಚ್‌ ಎರಡನೇ ವಾರದಲ್ಲಿ ಯುವ ಸಂಗಮ ನಡೆಸುವ ಬಗ್ಗೆ ನಿರ್ಧರಿಸಲಾಗುವುದು ಎಂದು ಶಾಸಕ ರಘುಪತಿ ಭಟ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next