Advertisement

ಒಂದೇ ಪುಟದಲ್ಲಿ ಸಂಪೂರ್ಣ ರಾಮಾಯಣ ಚಿತ್ರಣ

02:45 PM Nov 15, 2022 | Team Udayavani |

ಮಂಡ್ಯ: ಒಂದೇ ಚಿತ್ರದಲ್ಲಿ ಇಡೀ ಸಂಪೂರ್ಣ ರಾಮಾಯಣದ ದೃಶ್ಯ ಚಿತ್ರಿಸುವ ಮೂಲಕ ಚಿತ್ರಕಲಾ ಶಿಕ್ಷಕ ನರಸಿಂಹಚಾರ್‌ ಗಮನ ಸೆಳೆದಿದ್ದಾರೆ.

Advertisement

ಸಂತೆಕಸಲಗೆರೆ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರಾಗಿರುವ ನರಸಿಂಹಚಾರ್‌ ಕೆರಗೋಡು ಹೋಬಳಿ ಮರಿಲಿಂಗನದೊಡ್ಡಿ ಗ್ರಾಮದವರಾಗಿದ್ದಾರೆ.

ಗಮನ ಸೆಳೆಯುತ್ತಿದೆ: ಪ್ರತಿದಿನ 5 ಗಂಟೆಯಂತೆ ಸುಮಾರು 12 ದಿನ ಈ ಚಿತ್ರ ಬಿಡಿಸಿದ್ದಾರೆ. ಬ್ಲ್ಯಾಕ್‌ ಜೆಲ್‌ ಪೆನ್‌, ಅಕ್ರಾಲಿಕ್‌ ಬ್ಲಾಕ್‌ ಕಲರ್‌ ಉಪಯೋಗಿ ಸಿದ್ದಾರೆ. 16X24 ಅಳತೆಯ ಒಂದು ಡ್ರಾಯಿಂಗ್‌ ಶೀಟ್‌ನಲ್ಲಿ ಸಂಪೂರ್ಣ ರಾಮಾಯಣದ ದೃಶ್ಯಾವಳಿ ಗಳನ್ನು ಒಂದೇ ಚಿತ್ರದಲ್ಲಿ ಕಟ್ಟಿಕೊಟ್ಟಿದ್ದಾರೆ. ಸಂಪೂರ್ಣ ರಾಮಾಯಣದಲ್ಲಿ ಬರುವ ರಾಮ, ಲಕ್ಷ್ಮಣ, ಸೀತೆ, ಆಂಜನೇಯ, 10 ತಲೆಯ ರಾವಣ, ದಶರಥ ಸೇರಿ ಎಲ್ಲಾ ಪಾತ್ರಗಳನ್ನೊಳಗೊಂಡ ಚಿತ್ರ ಬಿಡಿಸಿದ್ದಾರೆ. ಈ ಚಿತ್ರ ಎಲ್ಲರ ಗಮನ ಸೆಳೆಯುತ್ತಿದೆ.

ಹೆಸರುವಾಸಿ: ನರಸಿಂಹಚಾರ್‌ ಈ ಹಿಂದೆ ವರನಟ ಡಾ.ರಾಜ್‌ಕುಮಾರ್‌ ಅವರು ನಟಿಸಿರುವ ಎಲ್ಲಾ ಸಿನಿಮಾಗಳ ಚಿತ್ರ ಬಿಡಿಸುವ ಮೂಲಕ ಗಮನ ಸೆಳೆದಿದ್ದರು. ಅಲ್ಲದೆ, ರಾಜ್‌ಕುಮಾರ್‌ ಹಾಗೂ ಪಾರ್ವತಮ್ಮ ರಾಜ್‌ಕುಮಾರ್‌ ಅವರ ಅರ್ಧ ಭಾಗ ಬಿಡಿಸುವ ಮೂಲಕ ವಿಭಿನ್ನ ಹಾಗೂ ಸರಳ ಚಿತ್ರಕಲೆಗೆ ಹೆಸರು ವಾಸಿಯಾಗಿದ್ದರು. ಸಂಪೂರ್ಣ ರಾಮಾಯಣದ ಚಿತ್ರವನ್ನು ಈಗಾಗಲೇ ಸಾಕಷ್ಟು ಮಂದಿ ಚಿತ್ರಿಸಿದ್ದಾರೆ. ಆದರೆ, ಒಂದೇ ಚಿತ್ರದಲ್ಲಿ ಸರಳವಾಗಿ ಚಿತ್ರ ಬಿಡಿಸಿರುವುದು ಇದೇ ಮೊದಲು. ಚಿತ್ರಕಲೆ ಡಿಪ್ಲೋಮಾ ಪಡೆದಿರುವ ನರಸಿಂಹಚಾರ್‌ ಮಕ್ಕಳಿಗೂ ಚಿತ್ರಕಲೆ ಪಾಠ ಮಾಡುತ್ತಿದ್ದಾರೆ.

ಚಿತ್ರಕಲೆ ಶಿಕ್ಷಕರು: ಚಿಕ್ಕಂದಿನಿಂದಲೇ ರಾಜ್‌ ಕುಮಾರ್‌ ಸಿನಿಮಾ ವೀಕ್ಷಣೆ ಮಾಡುತ್ತಾ, ಅವರ ಪ್ರೇರಣೆಯಿಂದಲೇ ಚಿತ್ರಕಲೆಯತ್ತ ಆಸಕ್ತಿ ಬೆಳೆಸಿ ಕೊಂಡಿದ್ದಾರೆ. ಮೊದಲು ರಾಜ್‌ಕುಮಾರ್‌ ಅವರ ವಿವಿಧ ರೀತಿಯ ಚಿತ್ರ ಬಿಡಿಸುತ್ತಿದ್ದರು. ನಂತರ ಜಿಲ್ಲೆ ಯ ರೈತರ ಎತ್ತಿನಗಾಡಿಗಳಿಗೆ ಚಿತ್ರ ಬರೆಯುತ್ತಿದ್ದ ಅವರು, ನಂತರ ಡಿಪ್ಲೋಮಾ ಮಾಡಿಕೊಂಡು ಶಿಕ್ಷಕರಾಗಿದ್ದಾರೆ. ತಂದೆಯೂ ಚಿತ್ರಕಲಾವಿದರಾಗಿದ್ದರು. ಅದರಂತೆ ನರಸಿಂಹಚಾರ್‌ ಕೂಡ ತಮ್ಮ ಮಗಳು ಮೋನಿಕಾಗೂ ಚಿತ್ರಕಲೆ ಹೇಳಿಕೊಟ್ಟು ಆಕೆಯೂ ಬೆಂಗಳೂರಿನ ಶಾಲೆಯೊಂದರಲ್ಲಿ ಚಿತ್ರಕಲೆ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Advertisement

ಚಿತ್ರಕಲೆಯಲ್ಲಿ ನನಗೆ ಸಂಪೂರ್ಣ ತೃಪ್ತಿ ಇದೆ. ಇನ್ನಷ್ಟು ವಿಭಿನ್ನ ವಿವಿಧ ರೀತಿಯ ಚಿತ್ರಗಳನ್ನು ಸರಳವಾಗಿ ಬಿಡಿಸುವ ಹಂಬಲವಿದ್ದು, ಮತ್ತಷ್ಟು ಚಿತ್ರ ಬಿಡಿಸಲು ಪ್ರಯತ್ನಿಸುತ್ತೇನೆ. -ನರಸಿಂಹಚಾರ್‌, ಚಿತ್ರಕಲಾವಿದ 

ನಟ ರಾಜ್‌ ಕುಮಾರ್‌ ಹಾಗೂ ಪಾರ್ವತಮ್ಮ ರಾಜ್‌ ಕುಮಾರ್‌ ಅವರಭಾವಚಿತ್ರವನ್ನು ಒಂದೇ ಚಿತ್ರದಲ್ಲಿಚಿತ್ರಿಸಿರುವುದು.

Advertisement

Udayavani is now on Telegram. Click here to join our channel and stay updated with the latest news.

Next