ಕಾಠ್ಮಂಡು/ನವದೆಹಲಿ: ಈವರೆಗೆ ಪಾಕ್, ಚೀನಾ ಭಾರತದ ವಿರುದ್ಧ ಕತ್ತಿ ಮಸೆಯುತ್ತಿದ್ದರೆ ಇದೀಗ ನೆರೆಯ ನೇಪಾಳ ಕೂಡಾ ಉದ್ದೇಶಪೂರ್ವಕವಾಗಿ ಕ್ಯಾತೆ ತೆಗೆಯಲು ಆರಂಭಿಸಿದ್ದು, ಭಾರತದ ಕೆಲವು ಭೂಭಾಗ ಸೇರಿದಂತೆ ಭೌಗೋಳಿಕ ಹಾಗೂ ರಾಜಕೀಯ ನಕ್ಷೆಯ ಬದಲಾಯಿಸುವ ಸಂವಿಧಾನ ತಿದ್ದುಪಡಿ ಮಸೂದೆಗೆ ನೇಪಾಳ ಸಂಸತ್ ಅವಿರೋಧ ಸಮ್ಮತಿ ನೀಡಿರುವುದಾಗಿ ವರದಿ ತಿಳಿಸಿದೆ.
ನೂತನ ನಕ್ಷೆಯ ತಿದ್ದುಪಡಿ ಮಸೂದೆಯ ಪ್ರಸ್ತಾಪಕ್ಕೆ ನೇಪಾಳ ಸಂಸತ್ ನ ಮೇಲ್ಮನೆಯ ಎಲ್ಲಾ 57 ಸದಸ್ಯರು ಮತ ಚಲಾಯಿಸಿರುವುದಾಗಿ ವರದಿ ವಿವರಿಸಿದೆ.
ಇದನ್ನೂ ಓದಿ:ಭಾರತದ ಭೂಪ್ರದೇಶಗಳಿಗೆ ನೇಪಾಲ ಕ್ಯಾತೆ
ಭಾನುವಾರ ನೇಪಾಳ ಸಂಸತ್ ಭಾರತದ ಮೂರು ಪ್ರಮುಖ ಸ್ಥಳಗಳನ್ನು ಸೇರಿಸಿ ದೇಶದ ನೂತನ ರಾಜಕೀಯ ನಕ್ಷೆಗೆ ಅಂಗೀಕಾರ ಪಡೆಯಲು ಪ್ರಸ್ತಾಪವನ್ನಿಟ್ಟಿತ್ತು. ಭಾರತದ ಭೂಪ್ರದೇಶವಾದ ಲಿಫುಲೇಖ್, ಕಾಲಾಪಾನಿ ಮತ್ತು ಲಿಂಪಿಯಾಥುರಾ ಸೇರಿದಂತೆ ಮೂರು ಸ್ಥಳಗಳು ತನ್ನ ಭೂಪ್ರದೇಶ ಎಂದು ನೇಪಾಳ ವಾದಿಸಿತ್ತು.
ಇದನ್ನೂ ಓದಿ:ಭಾರತದ ಬಗ್ಗೆ ನೇಪಾಲದ ಅಪಸ್ವರ ವಿವಾದ ಬಗೆಹರಿಯಲಿ
ಇದನ್ನೂ ಓದಿ:ಚೀನಾ ಕುಮ್ಮಕ್ಕು: ಬಿಹಾರ ಗಡಿಯಲ್ಲಿ ನೇಪಾಳ ಸೇನೆಯಿಂದ ಗುಂಡಿನ ದಾಳಿ, ಓರ್ವ ರೈತ ಸಾವು
ಅಷ್ಟೇ ಅಲ್ಲ ಶನಿವಾರ ಲಿಫುಲೇಖ್, ಕಾಪಾಪಾನಿ ಮತ್ತು ಲಿಂಪಿಯಾಥುರಾ ಪ್ರದೇಶವನ್ನು ಒಳಗೊಂಡಂತೆ ನೂತನ ರಾಜಕೀಯ ಭೂಪಟ ಪ್ರದರ್ಶಿಸುವ ಮಸೂದೆಗೆ ನೇಪಾಳ ಸಂಸತ್ ನ ಕೆಳಮನೆ ಅಂಗೀಕರಿಸಿತ್ತು. ಇದೊಂದು ಕೃತಕವಾದ ವಾದವಾಗಿದೆ. ಇದಕ್ಕೆ ಯಾವುದೇ ಆಧಾರ ಇಲ್ಲ ಎಂದು ಭಾರತ ತಿರುಗೇಟು ನೀಡಿತ್ತು.