Advertisement

ಭಾರತ ವಿರುದ್ದ ನೇಪಾಲ ನೆಲ ಬಳಕೆಗೆ ಅವಕಾಶ ಇಲ್ಲ: ಒಲಿ

05:25 PM May 12, 2018 | Team Udayavani |

ಕಾಠ್ಮಂಡು : ಭಾರತದ ಹಿತಾಸಕ್ತಿಗೆ ವಿರುದ್ಧವಾಗಿ ತನ್ನ ನೆಲವನ್ನು ಬಳಸಲು ತಾನು ಸರ್ವಥಾ ಬಿಡಲ್ಲ ಎಂದು ನೇಪಾಲ ಪ್ರಧಾನಿ ಕೆ ಪಿ ಶರ್ಮಾ ಒಲಿ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭರವಸೆಯನ್ನು ನೀಡಿದ್ದಾರೆ.

Advertisement

ಪ್ರಧಾನಿ ನರೇಂದ್ರ ಮೋದಿ ಅವರಿಂದು ತಮ್ಮ ಎರಡು ದಿನಗಳ ನೇಪಾಲ ಪ್ರವಾಸವನ್ನು ಫ‌ಲಪ್ರದವಾಗಿ ಮುಗಿಸಿದ್ದಾರೆ. 

ನೇಪಾಲ ಪ್ರಧಾನಿಯಿಂದ ಅತ್ಯಂತ ಪ್ರಾಮುಖ್ಯದ ಪ್ರಕಟನೆ ಹೊರಬಂದಿದ್ದು ಅವರೊಂದಿಗೆ ಪ್ರಧಾನಿ ಮೋದಿ ಅವರು ನಡೆಸಿದ ಚರ್ಚೆ ಫ‌ಲಪ್ರದವಾಗಿತ್ತು ಎಂದು ವಿದೇಶಾಂಗ ಕಾರ್ಯದರ್ಶಿ ವಿಜಯ್‌ ಗೋಖಲೆ ತಿಳಿಸಿದ್ದಾರೆ. 

ಭಾರತವು ನೇಪಾಲದೊಂದಿಗೆ ಸಿಕ್ಕಿಂ, ಪ.ಬಂಗಾಲ, ಬಿಹಾರ, ಉತ್ತರ ಪ್ರದೇಶ ಮತ್ತು ಉತ್ತರಾಖಂಡ್‌ ರಾಜ್ಯಗಳ ಮೂಲಕ  1,850 ಕಿ.ಮೀ. ಗಡಿಯನ್ನು ಹಂಚಿಕೊಂಡಿರುವ ಕಾರಣ, ನೇಪಾಲದೊಂದಿಗಿನ ಸಂಬಂಧಗಳು ವ್ಯೂಹಾತ್ಮಕವಾಗಿ ಬಹುಮುಖ್ಯವಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next