Advertisement

Nepal ಪ್ರವಾಹ: ಬಿಹಾರದ 13 ಜಿಲ್ಲೆಗಳಿಗೆ ಸಮಸ್ಯೆ!

01:28 AM Oct 01, 2024 | Team Udayavani |

ಪಟ್ನಾ/ಕಠ್ಮಂಡು: ನೇಪಾಲದಲ್ಲಿ ಭಾರೀ ಪ್ರಮಾಣದ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಅದಕ್ಕೆ ಹೊಂದಿಕೊಂ­ಡಿ ರುವ ಬಿಹಾರದ 13 ಜಿಲ್ಲೆಗಳಲ್ಲಿ ಭಾರೀ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಕೋಸಿ, ಗಂಡಕ್‌, ಭಾಗಮತಿ ನದಿಗಳಲ್ಲಿನ ಪ್ರವಾಹ ಏರಿಕೆಯಾಗಿದೆ. 6 ಅಣೆಕಟ್ಟು ಗಳಲ್ಲಿ ಮಿತಿಗಿಂತ ಹೆಚ್ಚು ನೀರು ಸಂಗ್ರಹವಾಗಿ, ಹಾನಿಯಾಗಿದೆ. ಅವುಗಳ ದುರಸ್ತಿ ಕಾರ್ಯ ನಡೆಸಲಾಗು­ತ್ತಿದೆ ಎಂದು ಬಿಹಾರ ಸರಕಾರ ತಿಳಿಸಿದೆ. ಹಲವೆಡೆ ಪ್ರವಾಹದ ನೀರು ಜನವಸತಿ ಪ್ರದೇಶಗಳಿಗೆ, ವಿದ್ಯುತ್‌ ಸರಬರಾಜು ಕೇಂದ್ರಗಳಿಗೆ ನುಗ್ಗಿದೆ. ಹೀಗಾಗಿ 16 ಲಕ್ಷ ಮಂದಿಗೆ ತೊಂದರೆಯಾಗಿದೆ. ಕೋಸಿ ನದಿ ವ್ಯಾಪ್ತಿ­ಯಲ್ಲಿನ ಬಿರ್ಪುರ್‌ ಅಣೆಕಟ್ಟಿನಿಂದ 6.61 ಲಕ್ಷ ಕ್ಯೂಸೆಕ್‌ ನೀರು ಬಿಡುಗಡೆ ಮಾಡಲಾಗಿದೆ. 1968ರ ಬಳಿಕ ಇದು ಅತ್ಯಧಿಕವಾಗಿದೆ.

Advertisement

ನೇಪಾಲದಲ್ಲಿ 200ಕ್ಕೂ ಅಧಿಕ ಸಾವು: ಇದೇ ವೇಳೆ, ನೇಪಾಲದಲ್ಲಿ ಮಳೆ, ಪ್ರವಾಹ, ಭೂಕುಸಿತದಿಂದ ಅಸುನೀಗಿದವರ ಸಂಖ್ಯೆ 204ನ್ನು ದಾಟಿದೆ. 89 ಮಂದಿ ಗಾಯಗೊಂಡಿದ್ದು, 33 ಮಂದಿ ನಾಪತ್ತೆಯಾಗಿದ್ದಾರೆ. ಇಲ್ಲಿಯವರೆಗೂ ಪ್ರವಾಹದಲ್ಲಿ ಸಿಲುಕಿದ 4,500 ಮಂದಿಯನ್ನು ರಕ್ಷಿಸಲಾಗಿದೆ. ದೇಶಾ ದ್ಯಂತ 20ಕ್ಕೂ ಹೆಚ್ಚು ಜಲವಿದ್ಯುತ್‌ ಸ್ಥಾವರಗಳು ಹಾನಿಗೊಳಗಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next